ಬೀದರ ಜಿಲ್ಲೆಯ ಔರಾದ (ಬಾ) ತಾಲ್ಲೂಕಿನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಅತಿಥಿ ಉಪನ್ಯಾಸಕರುಗಳ ಸಭೆ ಶನಿವಾರ ನಡೆಯಿತು. ಸಭೆಯಲ್ಲಿ ಅತಿಥಿ ಉಪನ್ಯಾಸಕರುಗಳ ಸಮಸ್ಯೆ, ಸಂಘದ ಬಲವರ್ಧನೆ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ʼನಮ್ಮ ಸಮಸ್ಯೆ ಹಾಗೂ ಹಕ್ಕುಗಳನ್ನು ಪಡೆಯಲು ಅತ್ಯಂತ ಅವಶ್ಯಕವಾಗಿದೆ. ತಾವೆಲ್ಲರೂ ಸಂಘಟಿತರಾಗಿರಬೇಕು. ಏನೇ ಸಮಸ್ಯೆಗಳು ಎದುರಾದಾಗ ನಮ್ಮ ಸಂಘ ಸಂಪೂರ್ಣ ತಮ್ಮೊಂದಿಗೆ ಇರುತ್ತದೆʼ ಎಂದು ನುಡಿದರು.
ಜಿಲ್ಲಾ ಜಂಟಿ ಕಾರ್ಯದರ್ಶಿ ಸಂತೋಷ ಲದ್ದೆ ಮಾತನಾಡಿ, ʼರಾಜ್ಯಾಧ್ಯಕ್ಷರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಒಂದಾಗಿ ನಡೆಯೋಣ’ ಎಂದು ನುಡಿದರು.
ಔರಾದ ತಾಲೂಕು ಘಟಕ ಪದಾಧಿಕಾರಿಗಳ ನೇಮಕ :
ಆಶೀಷಕುಮಾರ ಶೇಳಕೆ (ಅಧ್ಯಕ್ಷ), ಶಾಂತಕುಮಾರ (ಉಪಾಧ್ಯಕ್ಷ), ಪುಷ್ಪರಾಜ ಖರಾತ್ (ಪ್ರಧಾನ ಕಾರ್ಯದರ್ಶಿ), ಶಿವಕುಮಾರ ಹಾಗೂ ಪೂರ್ಣಿಮಾ (ಜಂಟಿ ಕಾರ್ಯದರ್ಶಿ), ಅನೀಲ, ಸುಮಿತಾ, ಲೂಸಿ (ಸಂಘಟನಾ ಕಾರ್ಯದರ್ಶಿ), ಅಭಿಷೇಕ (ಕೋಶಾಧ್ಯಕ್ಷ), ಸಲಹೆಗಾರರಾಗಿ ಸಂದೀಪ ಕುಲಕರ್ಣಿ, ಬಾಲಾಜಿ, ಅಶ್ವಿನಿ ಲಕ್ಕಾ, ರಾಣಿ ಹಾಗೂ ಸದಸ್ಯರಾಗಿ ಸಂತೋಷಿ, ಆರತಿ, ಅಂಬಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಔರಾದ್ ಕ್ಷೇತ್ರದ 40 ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ : ಶಾಸಕ ಪ್ರಭು ಚವ್ಹಾಣ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಉತ್ತರ
ಜಿಲ್ಲಾಧ್ಯಕ್ಷ ಕೃಷ್ಣಕಾಂತ್ ವಿಶ್ವಕರ್ಮ, ಜಿಲ್ಲಾ ಪ್ರಧಾನ ಕಾರ್ಯದಶಿ ಜಗದೀಶ ದೇಸಾಯಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೀರ್ತಿ ಜಿಲ್ಲಾ ಕೋಶಾಧ್ಯಕ್ಷೆ ಅಶ್ವಿನಿ ಸುನೀಲ, ಔರಾದ ಪಾಲಿಟೆಕ್ನಿಕ್ ಕಾಲೇಜಿನ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.