ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ದಲಿತೋದ್ದಾರ, ಅನಾಥ ಮಕ್ಕಳ ರಕ್ಷಕರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಾಚಾರ್ಯ ನವೀಲಕುಮಾರ್ ಉತ್ಕಾರ್ ಹೇಳಿದರು.
ಔರಾದ ತಾಲೂಕಿನ ಸಂತಪುರ ಗ್ರಾಮದ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಹಾಗೂ ಅನಾಥ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅನಾಥ, ನಿರ್ಗತಿಕ ಮಕ್ಕಳ ಪಾಲನೆ-ಪೋಷಣೆ ಜತೆಗೆ ಹೆತ್ತವರು, ಸಮಾಜ ಬೇಡವೆಂದು ತಿಪ್ಪೆಗುಂಡಿ, ದೇವಾಲಯ, ರಸ್ತೆ ಅಕ್ಕಪಕ್ಕ ಇತರ ಸ್ಥಳಗಳಲ್ಲಿ ಎಸೆದ ನವಜಾತ ಶಿಶುಗಳನ್ನು ಕಾನೂನು ಪ್ರಕಾರ ಹಿರೇಮಠ ಸಂಸ್ಥಾನದ ಸ್ವದೇಶಿ ದತ್ತು ಕೇಂದ್ರಕ್ಕೆ ಪಡೆದು ತಮ್ಮಲ್ಲಿ ಇರುವಷ್ಟು ದಿನ ಅನ್ನ ಆಶ್ರಯ, ಗುಣಾತ್ಮ ಕ ಶಿಕ್ಷಣ ನೀಡುವ ಮೂಲಕ ಸುಂದರ ಬದುಕು ರೂಪಿಸುತ್ತಿದ್ದಾರೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿವಪುತ್ರ ಧರಣಿ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗೂನ್ನಳ್ಳಿಕರ, ಅಶ್ವಿನಿ ಹಿಂದೊಡ್ಡಿ, ಮಹಾಂತೇಶ ಪಂಚಾಳ, ಜಿತೇಂದ್ರ ಡಿಗ್ಗಿ, ಸಂತೋಷ ಧೂಳ್ಗಂಡೆ, ಸುಧೀರ್ ಆಲೂರೇ, ಸುರೇಶ್ ಬಂಡೆ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಬಸವಲಿಂಗ ಪಟ್ಟದ್ದೇವರ ಜನ್ಮದಿನ : ದಸಂಸದಿಂದ ವೃದ್ಧರಿಗೆ ಹಣ್ಣು ಹಂಪಲು ವಿತರಣೆ
ಔರಾದ್ ಪಟ್ಟಣದ ರಮಾಬಾಯಿ ಅಂಬೇಡ್ಕರ್ ವೃದ್ಧಾಶ್ರಮದಲ್ಲಿ ಕರ್ನಾಟಕ ದಲಿತ ಸಂಸರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಬಣ) ಸಂಘಟನೆಯಿಂದ ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅಂಗವಾಗಿ ವೃದ್ಧರಿಗೆ ಹಣ್ಣು ಹಂಪಲು, ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು ಜೀವನದುದ್ದಕ್ಕೂ ಗಡಿಭಾಗದಲ್ಲಿ ವಚನ ಸಾಹಿತ್ಯ ಹಾಗೂ ಕನ್ನಡ ಭಾಷೆ ಪ್ರಸಾರದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಔರಾದ್ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರ ಮಾತನಾಡಿ, ‘ಬಸವಲಿಂಗ ಪಟ್ಟದ್ದೇವರು ಧಾರ್ಮಿಕ, ಶೈಕ್ಷಣಿಕ ಅಷ್ಟೇ ಅಲ್ಲದೆ ಜನಮುಖಿ ಕಾರ್ಯಗಳ ಮುಖಾಂತರ ಮಾನವೀಯತೆ ಮೆರೆಯುತ್ತಿರುವುದು ಶ್ಲಾಘನೀಯ’ ಎಂದರು.
ಬಳಿಕ ಸಂತಪೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಮುಸ್ತಾಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಿಸಿದರು.

ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ 36 ಪಿಯು ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ!
ಈ ಸಂದರ್ಭದಲ್ಲಿ ಪ್ರಮುಖರಾದ ಸಂಜುಕುಮಾರ ಲಾಧಾ, ಶರಣಬಸಪ್ಪ ಮುಸ್ತಾಪುರೆ, ಘಾಳೆಪ್ಪ ಶೆಂಬೆಳ್ಳಿ, ಮಲ್ಲಿಕಾರ್ಜುನ ಜೊನ್ನೇಕೆರಿ, ಶಿವಕುಮಾರ ಸಾದುರೆ, ಅಂಬಾದಾಸ ಪಾಟೀಲ್, ನರಸಿಂಗ್ ಸೇರಿದಂತೆ ಶಾಲಾ ಶಿಕ್ಷಕರು, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.