ಮೈಸೂರು ಜಿಲ್ಲೆ , ನಂಜನಗೂಡಿನ ಆಟೋ ಅಮ್ಮ ಎಂದೇ ಖ್ಯಾತರಾಗಿರುವ ಡಾ ಸರಸ್ವತಿ ಚಂದ್ರಶೇಖರ್ ಅವರಿಗೆ 15 ವರ್ಷಗಳ ಸಾಮಾಜಿಕ ಸೇವೆ ಗುರುತಿಸಿ ಪ್ರತಿಷ್ಠಿತ ‘ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ‘ ಪ್ರಶಸ್ತಿ ಲಭಿಸಿದೆ.
ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ ಸರಸ್ವತಿ ಚಂದ್ರಶೇಖರ್ ಅವರನ್ನು ಕರ್ನಾಟಕ ರಿಯಾಲಿಟಿ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಆಕಾಡೆಮಿ ವಿಶ್ವ ದಾಖಲೆ ಮಾರ್ಗಸೂಚಿ ಅನುಸಾರ ಮೌಲ್ಯಮಾಪನ ನಡೆಸಿ ವೃತ್ತಿಪರ ಕೌಶಲ್ಯ ಪ್ರಶಸ್ತಿ ನೀಡುವುದರ ಮೂಲಕ ಗೌರವಿಸಿದೆ.

ತಮಿಳುನಾಡಿನ ಹೊಸೂರು ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಅಂತರಾಷ್ಟ್ರೀಯ ಸಾಧನೆಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಅಕಾಡೆಮಿಯಿಂದ ‘ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ‘ ವೃತ್ತಿಪರ ಕೌಶಲ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಚೇರ್ಮನ್ ಡಾ ರಾಬರ್ಟ್ ರೋಮ್ಯಾನುಯೆಲ್ ಹೇರ್ ಮ್ಯಾನ್, ಆಕಾಡೆಮಿ ಅಧ್ಯಕ್ಷ ಡಾ ಶ್ರೀನಾಥ್ ಎ ಪಿ ,ಇಂಟರ್ ನ್ಯಾಷನಲ್ ತಾಂತ್ರಿಕ ಅಧಿಕಾರಿ ಅನಾಥನ್ ಕುಪ್ಪುಸ್ವಾಮಿ,ನಿರ್ದೇಶಕ ಡಾ ಆರ್ ಸೆಲ್ವಂ ,ಉಪಾಧ್ಯಕ್ಷ ಅರ್ಜುನ್ ಸೇರಿದಂತೆ ಇನ್ನಿತರರು ಇದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮುಂಗಾರಿನ ಮೊದಲ ಉಳುಮೆ ‘ ಹೊನ್ನಾರು ‘
