ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಅರಿತಾಗ ಮಾತ್ರ ಸಂವಿಧಾನದ ತಿರುಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಭಾರತದ ಸಂವಿಧಾನದ ಇತಿಹಾಸವನ್ನು ಅರಿಯಬೇಕಾದ ಅಗತ್ಯವಿದೆ ಎಂದು ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸತ್ಯಶೋಧಕ ಸಂಘದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಸಂವಿಧಾನ ಯಾನ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
“ಡಾ. ಬಿ ಆರ್ ಅಂಬೇಡ್ಕರ್ ನಿರಂತರವಾದ ತಮ್ಮ ಅಧ್ಯಯನ ಹಾಗೂ ಅನುಭವಗಳ ಹಿನ್ನೆಲೆಯಲ್ಲಿ ರಚಿಸಿದ ಸಂವಿಧಾನವು ಪ್ರಜಾಪ್ರಭುತ್ವದ ಜೀವನಾಡಿಯಾಗಿದೆ. ವಿದ್ಯಾರ್ಥಿಗಳು ಇದನ್ನರಿತು ಉತ್ತಮ ಪ್ರಜೆಗಳಾಗಿ ವಿಕಾಸ ಹೊಂದಬೇಕು” ಎಂದು ಹೇಳಿದರು.
ಪ್ರೊ. ಎಸ್ ಬಿ ರಾಯನಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಮ್ಮ ಸಂವಿಧಾನವನ್ನು ಅರಿಯುವುದಕ್ಕೆ ಸಹಾಯ ಮಾಡುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುತ್ತವೆ” ಎಂದು ಮಾರ್ಗದರ್ಶನ ಮಾಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಲಾಟರಿ, ಮಟ್ಕಾ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳಿಂದ ಸ್ಕ್ವಾಡ್ ರಚನೆ
ಐಕ್ಯುಎಸಿ ಘಟಕದ ಸಹ ಸಂಯೋಜಕ ಡಾ. ಬಾಬುರಾಯಣ್ಣ ಧನ್ನೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕ ಡಾ. ವಿ ಬಿ ಸಣ್ಣಸಕ್ಕರಗೌಡರ ಅವರು ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಸ್ತುವಾರಿ ಮುಖ್ಯಸ್ಥ ಪ್ರೊ. ಚಂದ್ರಶೇಖರ ಹೆಗಡೆಯವರು ನಿರೂಪಿಸಿದರು. ಪ್ರೊ. ಗೋವರ್ಧನ ಪಿ ಬಿ ವಂದಿಸಿದರು.
ಪ್ರೊ. ಕಂಚನಮಾಲಾ ಪಾಟೀಲ, ಡಾ. ಸೀಮಾ ಜಿ ಕೆ, ಸರ್ವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಸೇರಿದಂತೆ ಸತ್ಯಶೊಧಕ ಸಂಘದ ಸಂಚಾಲಕಿ ಪವಿತ್ರಾ ಜಕ್ಕಪ್ಪನವರ, ಪದಾಧಿಕಾರಿಗಳಾದ ಶ್ರೀ ಬಿ. ಎಸ್. ಬಾವಾಖಾನ್, ವೆಂಕಟೇಶ ವಡ್ಡರ ಮತ್ಮತು ಇತರರು ಇದ್ದರು.