‘ಮೂರು ದಿನಗಳ ಕಾಲ ನಡೆಯುವ ರನ್ನ ವೈಭವಕ್ಕೆ ಯಾವುದೇ ಕುಂದುಬರದಂತೆ ಎಲ್ಲ ಸಿದ್ದತೆ ಭರದಿಂದ ಸಾಗಿದೆ. ಅಧಿಕಾರಿಗಳು ಪರಿಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ರನ್ನ ವೈಭವ ವಿಜೃಂಭಣೆಯಿಂದ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗುರುವಾರ ರಾಜ್ಯ ಸರ್ಕಾರ ₹2 ಕೋಟಿ ಬಿಡುಗಡೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ₹50 ಲಕ್ಷ, ಪ್ರವಾಸೋದ್ಯಮ ಇಲಾಖೆ ₹20 ಲಕ್ಷ ನೀಡಿದೆ. ಹಲವಾರು ಸಂಘ, ಸಂಸ್ಥೆಗಳು, ದಾನಿಗಳು ಹಣ ನೀಡಲು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.
‘ಶನಿವಾರ ರನ್ನ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಯಿಂದ ನಡೆಯುವ ಪುರುಷರ ಹಾಗೂ ಮಹಿಳೆಯ ಕಬಡ್ಡಿ ಟೂರ್ನಿಯಲ್ಲಿ ದೇಶದ ವಿವಿಧೆಡೆಯ ಪ್ರೊ ಕಬಡ್ಡಿ ಆಟಗಾರರು ಆಗಮಿಸಲಿದ್ದಾರೆ. 20 ಪುರುಷರ ಹಾಗೂ 15 ಮಹಿಳಾ ತಂಡಗಳು ಭಾಗವಹಿಸಲಿವೆ. ರಾಜ್ಯದ ಶ್ರೇಷ್ಠ ಗಾಯಕರು, ನಿರೂಪಕರು, ಸಾಹಿತಿಗಳು, ಕ್ರೀಡಾಪಟುಗಳು ಆಗಮಿಸಿ ಜನರನ್ನು ರಂಜಿಸಲಿದ್ದಾರೆ’ ಎಂದರು.
ಈ ಸುದ್ದಿ ಓದಿದ್ದೀರಾ? ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಸ್ವೀಕಾರ: ಯಾರು ಈ ಜ್ಞಾನೇಶ್ ಕುಮಾರ್?
ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
