ಎಳ್ಳ ಅಮಾವಾಸ್ಯೆ ಹಬ್ಬದ ನಿಮಿತ್ತ ಐಡಿಎಪ್ ಗ್ರಾಮಸರ್ವ್ ಮತ್ತು ಮುಧೋಳ-ಬೀಳಗಿ ಪಾರ್ಮರ್ಸ್ ಪ್ರೊಡ್ಯುಸರ್ ಕಂಪನಿಗಳು ಬಾಗಲಕೋಟೆ ಜಿಲ್ಲೆಯ ಶಿರೊಳ ಮತ್ತು ಮುಗಳಖೋಡ ಗ್ರಾಮಗಳಲ್ಲಿ ರೈತ ಬಾಂಧವರಿಗೆ ʼಅಜೋಲಾದ ಕ್ಷೇತ್ರೋತ್ಸವ ಮತ್ತು ಡೆಮೊ ಕಾರ್ಯಕ್ರಮʼ ಹಮ್ಮಿಕೊಂಡಿದ್ದವು.
ಈ ಕಾರ್ಯಕ್ರಮದಲ್ಲಿ ಪಶುಗಳ ಉತ್ತಮ ಆಹಾರವಾದ ಅಜೊಲಾದ ಕ್ಷೇತ್ರೋತ್ಸವ ಮಾಡಲಾಯಿತು. ಅಜೋಲಾ ಬಳಕೆಯಿಂದ ಪಶುಗಳ ಹಾಲಿನ ಇಳುವರಿ, ಫ್ಯಾಟ್ ಹೆಚ್ಚಳವಾಗುದರ ಕುರಿತು ತಿಳಿಸಿ ಅಜೋಲಾ ಮಾಡುವ ವಿಧಾನವನ್ನು ಡೆಮೊ ಮೂಲಕ ತೋರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಐಡಿಎಪ್ ಸಂಸ್ಥೆಯ ಎಚ್.ಒ.ಟೀಮ್ ಶ್ರೀಕಾಂತ ಎಸ್‌ಪಿ, ರಾಜೇಂದ್ರ ಹೆಗಡೆ, ಮಾಧವ ನಾಯಕ ಹಾಗೂ ಸಿಬ್ಬಂದಿ, ಪ್ರಜಾ ಪೌಂಡೇಶನ್ ಲಕ್ಷ್ಮೀನಾರಾಯಣ ಹಾಗೂ ಮುಧೋಳ-ಬೀಳಗಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಸಂಜು ಕುರಿನ್ನವರ ಹಾಗೂ ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.