ಬಾಗಲಕೋಟೆ | ದಸಂಸ ಮುಖಂಡ ಉದಯ ಕಡಕೋಳ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ

Date:

Advertisements

ಚಿಕ್ಕ ವಯಸ್ಸಿನಲ್ಲಿಯೇ ಉನ್ನತ ಸಾಧನೆಗೈದ ವಿ ಉದಯ ಕಡಕೋಳ ಅವರ ವ್ಯಕ್ತಿತ್ವ ಸ್ಪೂರ್ಥಿದಾಯಕವಾದದ್ದು. ಉದಯ ಅವರಂತಹ ಯುವಕರು ರಾಜ್ಯದ ನೆಲದಲ್ಲಿ ಹುಟ್ಟಿಬರಬೇಕು ಎಂದು ರಾಜ್ಯ ಸಂಘಟನಾ ಸಂಚಾಲಕ ಶ್ಯಾಮರಾವ ಘಾಟಗೆ ಹೇಳಿದರು.

ಇತ್ತೀಚೆಗೆ ಸಾವನ್ನಪ್ಪಿದ ಉದಯ ಕೊಡಕೋಳ ಅವರ ನೆನಪಿನಲ್ಲಿ ಬಾಗಲಕೋಟೆಯ ಜಮಖಂಡಿಯಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಓರ್ವ ಅವಿರತ ಹೋರಾಟಗಾರ ಉದಯ ಅವರು ಅತೀ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ. ಅವರ ಕುಟುಂಬಕ್ಕೆ ನೆರವಾಗುವುದು ಸಂಘಟನೆಯ ಕರ್ತವ್ಯವಾಗಿದೆ. ಅವರ ಕುಟುಂಬಸ್ಥರಿಗೆ ದಸಂಸದ ಹಲವಾರು ಮುಖಂಡರು ಆರ್ಥಿಕ ನೆರವು ನೀಡಿದ್ದಾರೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕಿ ಶೋಭಾ ಕಟ್ಟಿಮನಿ, ರಾಜ್ಯ ಸಂಘಟನಾ ಸಂಚಾಲಕ ಕೆಂಪಣ್ಣ ಸಾಗ್ಯ, ರಾಜು ಮೇಲಿನಕೇರಿ, ಹಿರಿಯ ಸಂಪಾದಕ ಅನೀಲ ಹೊಸಮನಿ, ಸಲ್ಮಾನ ಪಾರ್ಥನಳ್ಳಿ .ವೆಂಕಟೇಶ ಆನೇಕಲ ಮಾತನಾಡಿದರು.

Advertisements

ನುಡಿನಮನ ಕಾರ್ಯಕ್ರಮದಲ್ಲಿ ವರ್ಧಮಾನ ನ್ಯಾಮಗೌಡ, ಎಫ್.ವೈ. ದೊಡಮನಿ, ಈಶ್ವರ ವಾಳೆಣ್ಣವೆ, ಕಿರಣ ಪಿಸಾಳೆ, ದಾನೇಶ ಘಾಟಗೆ, ರಾಜ್ಯ ಸಮೀತಿ ಸದಸ್ಯ ಪ್ರಭುಲಿಂಗ ಮೇಲಿನಮನಿ, ಚಂದ್ರು ಚಕ್ರವರ್ತಿ, ರಾವುತ ತಳಕೇರಿ, ದೇವೇಂದ್ರ ಹಾದಿಮನಿ, ಮಹೇಶ ಕೋಳಿ, ಮುತ್ತಣ್ಣಾ ಮೇತ್ರಿ, ಆನಂದ ಬೆಳ್ಳಾರೆ, ಚನ್ನು ಕಟ್ಟಿಮನಿ, ರಮೇಶ ಸಣ್ಣಕ್ಕಿ, ತೌಫಿಕ ಪಾರ್ತನಳ್ಳಿ ಇದ್ದರು

ಚಂದ್ರಕಾಂತ ಶಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಿತಾ ಶಿರಗುಪ್ಪಿ ನಿರೂಪಿಸಿದರು. ಹನುಮಂತ ಚಿಮ್ಮಲಗಿ ಸ್ವಾಗತಿಸಿದರು.ಮುತ್ತಣ್ಣಾ ಮೇತ್ರಿ ವಂದಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X