ಕಾಂಗ್ರೆಸ್ ಸರ್ಕಾರ ಬಡ ಜನತೆಯ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಎಚ್ ವೈ ಮೇಟಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಪಾರ್ವತಿ -ಪರಮೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಸ್ಥಳೀಯ ಪಟ್ಟಣ ಪಂಚಾಯಿತಿ 2024 -25ನೇ ಸಾಲಿನ ಎಸ್‌ಎಫ್‌ಸಿ, ಎಸ್‌ಎಸ್‌ಟಿಎಸ್‌ಪಿ ಸ್ಥಳೀಯ ನಿಧಿ ಹಾಗೂ ಮುಕ್ತನಿಧಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಬುದ್ಧಿಮಾಂದ್ಯ ಮತ್ತು ವಿಕಲಚೇತನರ ಆರೈಕೆದಾರರ ಪೋಷಣ ಭತ್ಯೆಯ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಹಿಳೆಯರು ಸ್ವಾಲಂಬಿ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗುವುದರ ಜತೆಗೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಮಧುಗಿರಿ | ಸುಧಾ ಓದುಗರು ಸಮಾಜವನ್ನು ಒಗ್ಗೂಡಿಸುತ್ತಿದ್ದಾರೆ : ಜಿ. ವಿ. ಆನಂದಮೂರ್ತಿ
ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ್ ಜಮಖಂಡಿ, ಮುಖ್ಯ ಅಧಿಕಾರಿ ಎಫ್ಎನ್ ಹುಲ್ಲಿಕೆರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜು ಕಂಬಳಾವತಿ, ದೇವಿ ಪ್ರಸಾದ್ ನಿಂಬಲಗುಂದಿ, ಗುರುಲಿಂಗಪ್ಪ ಪಾಟೀಲ, ಚಂದು ಕುರಿ, ಲಕ್ಷ್ಮಣ ಮದರ, ಮಂಜುಳಾ ಮುರಾಳ, ಮುಖಂಡರಾದ ಹುಚ್ಚಪ್ಪ ಸಿಂಹಾಸನ, ಶಂಕರಲಿಂಗಪ್ಪ ಮಂಕಣಿ, ರಮೇಶ್ ಲಮಾಣಿ, ಸಿದ್ದು ಹೊಸಮನಿ ಇದ್ದರು.