ಬಾಗಲಕೋಟೆ | ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಅನಧಿಕೃತ ಕಟ್ಟಡ; ತೆರವಿಗೆ ಕರವೇ ಆಗ್ರಹ

Date:

Advertisements

ಇಳಕಲ್ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಹಾಗೂ ಗುಡೂರ (ಎಸ್.ಸಿ) ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಬಸವರಾಜ್ ಧರ್ಮಂತಿ ಮಾತನಾಡಿ, “ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಯಾವ ಉದ್ದೇಶಕ್ಕೆ ಸದರಿ ಜಾಗೆಯನ್ನು ಮಿಸಲಿಟ್ಟಿರುತ್ತದೆಯೋ ಆ ಉದ್ದೇಶಕ್ಕೆ ಬಳಸದೆ, ಖರೀದಿದಾರರು ಕೆಲ ಖಾಸಗಿ ವ್ಯಕ್ತಿಗಳಿಗೆ ಬಾಡಿಗಗೆ ನೀಡಿದ್ದಾರೆ. ತಾವು ಪಡೆದ ಗೋದಾಮುಗಳನ್ನು ನಗರದಲ್ಲಿಯ ಕೆಲ ಕಿರಾಣಿ ವ್ಯಾಪರಸ್ಥರಿಗೆ ಹಾಗೂ ಪೀಠೋಪಕರಣ ವಸ್ತುಗಳ ವ್ಯಾಪಾರಿಗಳಿಗೆ ತಿಂಗಳಿಗೆ ₹50,000ಕ್ಕೆ ಬಾಡಿಗೆ ನೀಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮತ್ತು ಸಂಗ್ರಹ ಮಾಡುವುದರ ಸಲುವಾಗಿ ಮೀಸಲಿರಿಸಿ ಒದಗಿಸಿದ ಜಮೀನಿನಲ್ಲಿ ಹಾಡುಹಗಲೇ ನಿಯಮಬಾಹಿರವಾಗಿ ವಹಿವಾಟು ನಡೆಸುತ್ತಿರುವುದು ರೈತರಿಗೆ ಮಾಡಿದ ದೊಡ್ಡ ಮೋಸ” ಎಂದು ಬಸವರಾಜ್ ಧರ್ಮಂತಿ ಗುಡುಗಿದರು.

“ಕಳೆದ 15 ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗೆಯಲ್ಲಿ ಕೃಷಿ ಚಟುವಟಿಕೆಯ ಜೊತೆಗೆ ವಾಸಮಾಡಲಿಕ್ಕೆ ಯೋಗ್ಯ ಸ್ಥಳ ಎನ್ನುವ ಹಾಗೆ ಹಿಂದಿನ ಮಾರುಕಟ್ಟೆಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ಕೂಡಿಕೊಂಡು ಪರವಾನಗಿ ಪಡೆದ ದಲ್ಲಾಳಿಗಳು, ಖರೀದಿದಾರರು ಶಾಮೀಲಾಗಿ ಸದರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾನೂನನ್ನು ಮರೆಮಾಚಿ ಮನಸ್ಸಿಗೆ ಬಂದಂತೆ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಕೂಡಿಕೊಂಡು ಠರಾವ ಪಾಸು ಮಾಡಿಕೊಂಡು ಸದರಿ ಪ್ರಾಂಗಣದಲ್ಲಿ 8ಕ್ಕೂ ಹೆಚ್ಚು ಅನಧಿಕೃತ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಾ ಬಂದಿದ್ದು, ಅಲ್ಲದೆ ಅನಧಿಕೃತವಾಗಿ ಮನೆಗಳನ್ನು ಬೇರೆಯವರಿಗೆ 2,000ದಿಂದ ₹5,000ರದವರೆಗೆ ಬಾಡಿಗೆ ರೂಪದಲ್ಲಿ ಕೊಟ್ಟಿರುವುದು ಕಂಡು ಬರುತ್ತದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಗಳು‌, ಖರೀದಿದಾರರು ವಾಸದ ಮನೆ ಕಟ್ಟಿರುವುದು ಕಾನೂನು ಬಾಹಿರವಾಗಿದೆ” ಎಂದು ಆರೋಪಿಸಿದರು.

Advertisements

ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ರೋಹಿತ್ ಬಾರಕೇರ್ ಮಾತನಾಡಿ, “ರೈತರಿಂದ ಮತ ಪಡೆದು ಉಪಾಧ್ಯಕ್ಷ ಸ್ಥಾನ ಪಡೆದ ವ್ಯಕ್ತಿ ಇಡೀ ಮಾರುಕಟ್ಟೆಯನ್ನು ಜವಾಬ್ದಾರಿಯುತವಾಗಿ ಕಾಪಾಡಿಕೊಂಡು ಹೊಗುವ ವ್ಯಕ್ತಿಯೇ ತಮ್ಮ ಪತ್ನಿಯ ಹೆಸರಿನಲ್ಲಿ ಲೀಸ್ ಕಂ ಸೇಲ್ ಹೆಸರಿನಲ್ಲಿ ಅಂಗಡಿ ಪಡೆದು ಅಂಗಡಿಯ ಮೇಲೆ ಮನೆ ಮಾಡಿಕೊಂಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಜಮೀನನ್ನು ಕಾಪಾಡುವ ಜವಾಬ್ದಾರಿ, ಹೊಣೆ ಸರ್ಕಾರದ್ದಾಗಿದೆ” ಎಂದರು.

“ಕೃಷಿ ಉತ್ಪನ್ನ ಮಾರುಕಟ್ಟೆ 17 ಎಕರೆ ಜಮೀನು ಕಾಪಾಡುವುದು ಹಾಗೂ ಅನಧಿಕೃತವಾಗಿ ಕಟ್ಟಿದ ಮನೆಗಳನ್ನು ತೆರವುಗೊಳಿಸುವ ಎಲ್ಲ ಅಧಿಕಾರ ಇದ್ದರೂ ಕೂಡ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಇದೆ ಎನ್ನುವ ಬೂಟಾಟಿಕೆಯ ಮಾತುಗಳನ್ನು ಬಿಡಬೇಕು. ಅಲ್ಲದೆ ಅನಧಿಕೃತ ಮನೆಗಳನ್ನು ನಿರ್ಮಿಸಿದವರ ವಿರುದ್ಧ ಕಾನೂನಿನಲ್ಲಿ ಪ್ರಕಣ ದಾಖಲಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ನಾಗರ ಪಂಚಮಿಯಂದು ‘ಬಸವ ಪಂಚಮಿ’ ಆಚರಿಸಲು ಕರೆ

ಪ್ರತಿಭಟನೆಯಲ್ಲಿ ಕರವೇ ಸಂಘಟಕರು ಭಾಗ್ಯಾ ಬೆಟಗೇರ, ರಂಜಾನ್ ನದಾಫ್, ರಾಜೇಶ್ವರಿ ಹಿರೇಮಠ, ಬಸವರಾಜ ಅಂಬಿಗೇರ, ಸಲೀಮ್ ಜರತಾರಿ, ರಾಚಪ್ಪ ಸನದಿ, ಗಣಪತಿ ಭೋವಿ, ಮಹಾಂತೇಶ ವಂಕಲಕುಂಟನಗರ, ರಾಹುಲ ಶೆಟ್ಟರ, ಅನಿಲ ಮಿಶನ್ನವರ, ಸಲೀಮ್ ಜಮಾದಾರ, ರಫೀಕ್ ಇಟ, ಫಕ್ರುದ್ದೀನ ವಾಲೀಕಾರ, ಸಾಗರ ಪಟ್ಟಣಶೆಟ್ಟಿ, ಗಣೇಶ ನಾಯಕ, ಮಲ್ಲು ಹಾದಿಮನಿ, ಸಂಗಪ್ಪ ಹಳಪ್ಪನವರ, ವನಿಂಬಯ್ಯ ಕುಲಕರ್ಣಿ, ಬಶೀರ ಜಮಾದಾರ, ಬಸವರಾಜ ಅಂಗಡಿ, ಹಸನ್ ಕಲಕಬಂಡಿ, ಶಿವಕುಮಾರ ಸಾಲಿಮಠ, ಖಲೀಂ ರೋಣ, ಗೋಪಾಲ ಗಾಡಕರ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

Download Eedina App Android / iOS

X