ಸೇನಾ ತರಬೇತಿ ವೇಳೆ ಹೃದಯಾಘಾತವಾಗಿ ಬಾಗಲಕೋಟೆಯ ಯೋಧರೊಬ್ಬರು ಚಂಡೀಗಢದಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯ ಕೆರೂರ ಬಳಿಯ ಚಿಂಚಲಕಟ್ಟಿ ಗ್ರಾಮದ ಉಪೇಂದ್ರ ಸೋಮನಾಥ ರಾಠೋಡ (23) ಮೃತ ಯೋಧ.
ಅಸ್ಸಾಂ ರೈಫಲ್ಸ್‌ನಲ್ಲಿ ಕಳೆದ ಮಾರ್ಚ್‌ನಲ್ಲಿ ಸೇಸೆಗೆ ಆಯ್ಕೆಯಾಗಿದ್ದ ಯೋಧ ಉಪೇಂದ್ರ ಮೂರು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದರು.
ಇಂದು ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತಂದು ತಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಕ್ರಿಯೆ ನಡೆಸಲಾಗುವುದು ಎಂದು ಕೆರೂರ ಉಪತಹಶೀಲ್ದಾರ್ ವೀರೇಶ ಬಡಿಗೇರ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ | ಸಿಬ್ಬಂದಿಗಳಿಲ್ಲದ ಬಲಕುಂದಿ ಗ್ರಾಮ ಪಂಚಾಯಿತಿಗೆ ಬೀಗ