ಸಾರ್ವಜನಿಕರಿಂದ ಬಂದ ಅಹವಾಲುಗಳಿಗೆ ತುರ್ತು ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
“ಒಂದು ವರ್ಷದಿಂದ ಬಾದಾಮಿ ನಗರದಲ್ಲಿನ ನೀರು ಹಾಗೂ ಗುಹಾಂತರ ದೇವಾಲಯಗಳಿಗೆ (ಮೆಣಬಸೀದಿ) ಹಾದು ಹೋಗುವ ರಸ್ತೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ, ಡಾ. ಬಿ ಆರ್ ಅಂಬೇಡ್ಕರ್ ಸರ್ಕಲ್‌ನ ಅವರ ಪುತ್ಥಳಿಯಲ್ಲಿ ಅವರ ಸಿದ್ಧಾಂತಗಳನ್ನು ಸಾರುವ ದ್ವಜವನ್ನು (ಝಂಡಾ) ನಿರಂತರ ಹಾರಿಸುವ ಕುರಿತು ಹಾಗೂ ಇನ್ನಿತರ ನಗರದ ಸಮಸ್ಯೆಗಳ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಬಾದಾಮಿ ತಾಲೂಕು ಘಟಕದಿಂದ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಕಾರ್ಯರೂಪಕ್ಕೆ ತರದೆ ವಿಳಂಬ ಮಾಡಿರುವುದು ಖಂಡನೀಯ” ಎಂದು ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಯಲಗಟ್ಟಾ ಪ್ರೌಢಶಾಲೆ ಮುಖ್ಯಶಿಕ್ಷಕ ನಾಗನಗೌಡರ ಅಮಾನತಿಗೆ ಎಸ್‌ಎಫ್‌ಐ ಆಗ್ರಹ
ಮನವಿಗಳನ್ನು ಸ್ವೀಕರಿಸಿ ಸಮಸ್ಯೆ ಪರಿಹರಿಸದಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಸಿದರು.
ಈ ವೇಳೆ ಜೈ ಇಮ್ಮಡಿ ಪುಲಿಕೇಶಿ, ಜೈ ಭೀಮ್ ಸೇರಿದಂತೆ ಇತರರು ಇದ್ದರು.
