ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಜಯಸಿಂಹ ಟಗರು ₹5 ಲಕ್ಷಕ್ಕೆ ಮಾರಾಟವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಕಾಳಗಕ್ಕೆ ಬಳಸುವ ಟಗರು ಲಕ್ಷಾಂತರ ರೂಪಾಯಿಗೆ ಮಾರಾಟವಾಗುವುದು ಸಾಮಾನ್ಯ. ಆದರೆ ಐದು ಲಕ್ಷಕ್ಕೆ ಮಾರಾಟವಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ತೆಗ್ಗಿ ಗ್ರಾಮದ ಬಸವರಾಜ ಎಂಬುವರು ಮೂಲತಃ ಟಗರು ಸಾಕಾಣಿಕೆದಾರರು. ಎರಡು ವರ್ಷದ ಹಿಂದೆ ಒಂದು ಟಗರನ್ನು ₹90,000 ಕೊಟ್ಟು ಖರೀದಿ ಮಾಡಿದ್ದರು. ಇದೀಗ, ಈ ಟಗರನ್ನು ಧಾರವಾಡ ಮೂಲದ ಆರ್ಎಕ್ಸ್ವೈ ಟಗರು ಪ್ರಿಯ ಗ್ರೂಪ್ನವರು ಬರೋಬ್ಬರಿ ₹5 ಲಕ್ಷದ ₹1 ಸಾವಿರ ಕೊಟ್ಟು ಖರೀದಿಸಿದ್ದಾರೆ.
ಈ ಟಗರು ಯಾವುದೇ ಟಗರಿನ ಕಾಳಗದಲ್ಲಿ ಸೋಲನ್ನು ಕಾಣದೇ ಇರುವ ಧೀರ. ಹಾಗಾಗಿ ಇದರ ಮಾಲೀಕ ಬಸವರಾಜ ಇದಕ್ಕೆ ಪ್ರೀತಿಯಿಂದ ಜಯಸಿಂಹ ಎಂಬ ಹೆಸರು ಇಟ್ಟಿದ್ದು, ಜಯಶಾಲಿ ಜಯಸಿಂಹ ಟಗರು ಈವರೆಗೂ 50ಕೂ ಹೆಚ್ಚು ಟಗರಿನ ಬಡಿದಾಟದಲ್ಲಿ ಬಹುಮಾನವನ್ನು ಪಡೆದಿದೆ. ಅಲ್ಲದೆ ₹6 ಲಕ್ಷಕ್ಕೂ ಅಧಿಕ ಹಣ, ಬೈಕ್ ಹಾಗೂ ಇನ್ನಿತರ ಬಹುಮಾನಗಳನ್ನು ಮಾಲೀಕ ಬಸವರಾಜನಿಗೆ ತಂದು ಕೊಟ್ಟಿದೆ.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಉಪಲೋಕಾಯುಕ್ತರೆದುರೇ ಭಿಕ್ಷೆ ಬೇಡಿದ ವಿಶೇಷ ಚೇತನ ವೃದ್ದೆ
ಇದೀಗ, ಧಾರವಾಡ ಮೂಲದ ಆರ್ಎಕ್ಸ್ವೈ ಎಂಬ ಗ್ರೂಪ್ನವರು ಬರೋಬ್ಬರಿ ₹5 ಲಕ್ಷ ಕೊಟ್ಟು ಈ ಜಯಸಿಂಹ ಟಗರನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಯಸಿಂಹ ಇಷ್ಟು ದುಡ್ಡಿಗೆ ಮಾರಾಟವಾಗಿದ್ದನ್ನು ಕಂಡು ಟಗರು ಪ್ರಿಯರು ಭಲೇ ಮೈಲಾರಿ ಎನ್ನುತ್ತಿದ್ದಾರೆ.
