ಬಾಗಲಕೋಟೆ | ಮನರೇಗಾ ಕಾರ್ಮಿಕರ ಮುಂದಿವೆ ನೂರೆಂಟು ಸಮಸ್ಯೆಗಳು; ಕೇಳೋರ್ಯಾರು?

Date:

Advertisements

ಮನರೇಗಾ ಯೋಜನೆಯು ಗ್ರಾಮೀಣ ಜನರ ಆರ್ಥಿಕ ಜೀವನ ಮಟ್ಟ ಉನ್ನತೀಕರಿಸುವ ಉದ್ದೇಶದಿಂದ ಅನುಷ್ಠಾನಗೊಂಡಿತು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ ನೂರು ದಿನಗಳ ಕಾಲ ಉದ್ಯೋಗ ಕೊಟ್ಟು, ಅವರ ಆರ್ಥಿಕ ಜೀವನ ಮಟ್ಟ ಸುಧಾರಿಸುವುದೇ ಈ ಯೋಜನೆಯ ಮೊಟ್ಟ ಮೊದಲ ಉದ್ದೇಶ. ಆದರೇ, ಈ ಯೋಜನೆ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿದೆಯೇ….? ಎಂದೊಮ್ಮೆ ನೋಡಿದರೆ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಅನೇಕ ಸಮಸ್ಯೆಗಳು ಕಾಣಸಿಗುತ್ತವೆ. ಈ ಸಮಸ್ಯೆಗಳ ವಿರುದ್ದ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂತಹದೊಂದು ಪ್ರತಿಭಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಗ್ರಾಮ ಪಂಚಾಯತಿ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು ಹಾಗೂ ಕೂಲಿ ಕಾರ್ಮಿಕರು ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಜನರಿಗೆ ಸರಿಯಾಗಿ ಕೆಲಸಕೊಡುತ್ತಿಲ್ಲ, ಸರಿಯಾಗಿ ಸಂಬಳ ಆಗುತ್ತಿಲ್ಲ, ಜಾಬ್ ಕಾರ್ಡ್ ಮಾಡುತ್ತಿಲ್ಲ, ಕೆಲಸ ಮಾಡಿದವರಿಗೆ ಸಂಬಳ ಸಿಗದೇ ಇನ್ಯಾರದೋ ಖಾತೆಗೆ ಹಣ ಜಮಾವಣೆ ಆಗುತ್ತಿದೆ. ಮನರೇಗಾ ಕಾರ್ಮಿಕರಿಗೆ ತಮ್ಮ ದುಡಿದ ಹಣ ಪಡೆಯಲು ಗ್ರಾಮ ಪಂಚಾಯತಿ ಪೋಸ್ಟ್ ಆಪೀಸು, ಬ್ಯಾಂಕು ಮತ್ತ ಬಾಗಲಕೋಟೆ ಜಿಲ್ಲೆಗೆ ಅಲೆದಾಡಿಸುತ್ತಿದ್ದಾರೆ ಗ್ರಾಮ ಪಂಚಾಯತಿ ಅಧಿಕಾರಿಗಳು. ಇಂತಹ ನೂರೆಂಟು ಸಮಸ್ಯೆಗಳಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ತು ಎನ್‌ಎಂಆರ್‌ ಜಿರೋ

Advertisements

ಮನರೇಗಾ ಯೋಜನೆಯಡಿ ಕೆಲಸ ಮಾಡಿದ ಗ್ರಾಕೂಸ ಕಾರ್ಮಿಕರ ಹತ್ತು ಎನ್‌ಎಂಆರ್‌ ಜಿರೋ ಆಗಿದ್ದು, ಎರಡು ತಿಂಗಳಿಂದ ಕೂಲಿ ನೀಡಿಲ್ಲ. ಉದ್ದೇಶ ಪೂರ್ವಕವಾಗಿಯೇ ಎನ್‌ಎಂಆರ್‌ ತೆಗೆದು ಹಾಕುತ್ತಿದ್ದಾರೆ. ಇಂಜಿನಿಯರ್ ಮತ್ತು ಪಿಡಿಓ ಸೇರಿ ಯಾವ ಕೆಲಸದಲ್ಲಿ ದುಡ್ಡು ಇದೆಯೋ ಅಲ್ಲಿ ಕೆಲಸ ಕೊಡಬೇಕು. ಉದ್ದೇಶ ಪೂರ್ವಕವಾಗಿ ಯಾರದೋ ಮಾತು ಕೇಳಿ ದುಡ್ಡಿಲ್ಲದ ಕಡೆ ಕೆಲಸ ಮಾಡಿಸಿ ಕೂಲಿ ಇಲ್ಲವೆಂದು ಹೇಳುತ್ತಾರೆ. ಇದಕ್ಕೆ ಯಾರು ಹೊಣೆ? ಇದಕ್ಕೆ ಪಿಡಿಓ ಹಾಗೂ ಇಂಜಿನಿಯರ್‌ಗಳೇ ನೇರ ಹೊಣೆಗಾರರು ಎಂದು ಕಾರ್ಮಿಕರು ಕಿಡಿಕಾರಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿ ಪಿಡಿಓನೇ ಇಲ್ಲ

ನಂದವಾಡಗಿ ಗ್ರಾಮ ಪಂಚಾಯತಿಯಲ್ಲಿ ಎರಡು ತಿಂಗಳುಗಳಿಂದ ಪಿಡಿಓ ಅಧಿಕಾರಿ ಇಲ್ಲ. ಇದರಿಂದ ಗ್ರಾಮದ ಅನೇಕ ಸಮಸ್ಯೆಗಳು, ಪಿಡಿಓ ಅಧಿಕಾರಿ ಇಲ್ಲದಿರುವುದರಿಂದ ಸರಿಯಾಗಿ ಕೆಲಸ ಕೊಡುತ್ತಿಲ್ಲ. ಸರಿಯಾಗಿ ಕೆಲಸದ ಸಂಬಳವನ್ನು ಖಾತೆಗೆ ಜಮಾ ಮಾಡದೆ ಕಾರ್ಮಿಕರನ್ನು ಅಲೆದಾಡಿಸುತ್ತಿದ್ದಾರೆ.

ಮರಣ ಹೊಂದಿದ ವ್ಯಕ್ತಿಗೆ ಮನರೇಗಾ ಹಣ ಪಾವತಿ

ಹಸನಪ್ಪ ಚಲವಾದಿ ಮರಣ ಹೊಂದಿದ ನಂತರವು ಅವರ ಖಾತೆಗೆ ಕೆಲಸದ ಮಾಡಿದ ಹಣ ಪಾವತಿ ಮಾಡುತ್ತಿದ್ದಾರೆ. ಮನೆರೇಗಾ ಯೊಇಜನೆಯಲ್ಲಿ ಕೆಲಸ ಮಾಡದವರಿಗೂ ಕೂಡ ಎನ್ ಎಮ್ ಆರ್ ಹಾಕಿ ಹಣ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗ ಹೊಂ್ಅನಿಕೆ ಮಾಡಿಕೊಂಡು ಇಂತಹ ಅವ್ಯವಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕುಡಿಯುವ ನೀರಿನ ಸಮಸ್ಯೆ

ಗ್ರಾಮದ ಜನರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲ. ನೀರಿಗಾಗಿ ಊರಾಚೆ ಎರಡ್ಮೂರು ಕಿಲೋ ಮೀಟರ್ ನಡೆದು ಹೋಗಿ ಮಳೆಯ ನೀರು ತೆಗೆದುಕೊಂಡು ಬರಬೇಕು. ಆ ನೀರು ಕೆಸರು ಮಳೆಯ‌ ನೀರನ್ನೆ ನಿತ್ಯ ಕುಡಿದು ಅನಾರೋಗ್ಯಕ್ಕೆ ತುತ್ತಾಗತ್ತಿದ್ದಾರೆ. ಕುಡಿಯುವ ನೀರಿಲ್ಲದೆ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ನೀರಿನ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಯಾವುದೇ ರೀತಿ ಸಮಸ್ಯೆ ನಿವಾರಣೆ ಮಾಡುವಲ್ಲಿ ಕ್ರಮ ಕೈಗೊಳದಿರುವುದು ಅಧಿಕಾರಿಗಳ ಬೇಜವಬ್ದಾರಿ ಆಗಿರುತ್ತದೆ. ಇದರಿಂದ ಪೆಮೆಂಟ್ ರಿಜೇಕ್ಟ್ ಇವೆ. ಜೀರೋ ಆಗಿರುತ್ತವೆ ಪಂಚಾಯಿತಿನಲ್ಲಿ ಎರಡು ತಿಂಗಳಿನಿಂದ ಪಿಡಿಒ ಬಂದಿರುವುದಿಲ್ಲ ರಿಜೆಕ್ಟ್ ಪೇಮೆಂಟ್ ಇರುತ್ತವೆ ಹಾಗೂ ಕುಡಿಯುವ ನೀರಿನ ಸಲುವಾಗಿ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ವತಿಯಿಂದ ಹೋರಾಟ 25 ರಿಂದ ಮಾಡುತ್ತಿದ್ದೇವೆ

ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ

ನಂದವಾಡಗಿ ಗ್ರಾಮ ಪಂಚಾಯತಿಯಲ್ಲಿ ಸುಮಾರು ಎರಡ್ಮೂರು ತಿಂಗಳುಗಳಿಂದ ಪಿಡಿಓ ಅಧಿಕಾರಿಯೇ ಇಲ್ಲ. ಇದರಿಂದ ಗ್ರಾಮದಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ ಸರಿಯಾಗಿ ಕಾರ್ಮಿಕರಿಗೆ ಮನರೇಗಾ ಕೆಲಸ ಸಿಗುತ್ತಿಲ್ಲ. ಎನ್ ಎಮ್ ಆರ್ ಪೆಮೆಂಟ್ ಆಗುತ್ತಿಲ್ಲ.

ಪ್ರತಿಭಟನೆಯಲ್ಲಿ ಈ ಕುರಿತು ಈದಿನ.ಕಾಮ್ ನೊಂದಿಗೆ ಸಾವಿತ್ರಿ ಕುಂಬಾರ್ ಮಾತನಾಡಿ, “ಗ್ರಾಕೂಸ್ ಸಂಘಟನೆಯ ಗ್ರಾಮದಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ, ಮೂರು ವರ್ಷಗಳಿಂದ ಕೆಲಸದ ಸಂಬಳ ಆಗುತ್ತಿಲ್ಲ. ಸಮಸ್ಯೆಗಳನ್ನು ಹೇಳಿದರೂ ಗ್ರಾಮ ಪಂಚಾಯತಿಯಲ್ಲಿ ಸರಿಯಾಗಿ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ” ಎಂದರು.

ಈದಿನ.ಕಾಮ್ ನೊಂದಿಗೆ ಖಾದರಬೀ ಅಮರಾವತಿ ಗ್ರಾಕೂಸ್ ಮೇಟಿ ಮಾತನಾಡಿ, “ಮನರೇಗಾದಲ್ಲಿ ಗ್ರಾಕೂಸ್ ಸಂಘಟನೆಯ ಕಾರ್ಮಿಕರ ಸಂಬಳ ಮಾಡಿರುವುದಿಲ್ಲ. ಆದರೆ ನಾನ್ ಗ್ರಾಕೂಸ್ ಇಬ್ಬರ ಸಂಬಳ ಮಾಡಿದ್ದಾರೆ. ಇದರಿಂದ ಗ್ರಾಮ ಪಂಚಾಯತಿ ಅಧಿಕಾರಿಗಳು ನಮ್ಮೊಳಗೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈದಿನ.ಕಾಮ್ ಜೊತೆ ಗ್ರಾಕೂಸ ಸಂಘಟನೆಯ ಕಾರ್ಯಕರ್ತ ಅಮರೇಶ ಕುಂಬಾರ್ ಮಾತನಾಡಿ, “ಪಂಚಾಯತಿಯಲ್ಲಿ ಸರ್ಕಾರದ ಯಾವ ಯೋಜನೆಗಳು ಜಾರಿಯಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. ಜೆಜೆಎಮ್ ಯೋಜನೆ ನಲ್ಲಿಯನ್ನು ಹಾಕದೇ ಬಿಲ್ ಪಾಸ್ ಕೊಡಿಕೊಂಡಿದ್ದಾರೆ. ಕೆಲಸಕ್ಕೆ ಪಾರ್ಮ್ ನಂಬರ್ ಒಂದು ಕೇಳಿದರೆ ಕೊಡುತ್ತಿಲ್ಲ. ಎರಡ್ಮೂರು ವರ್ಷಗಳಿಂದ ಎನ್ಎಮ್ಆರ್ ಜಿರೋ ಆಗಿವೆ ಇನ್ನೂ ಪರಿಹಾರ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಇಳಕಲ್ ಪ್ರಭಾರಿ ಇಓ ಮುರಗೇಶ ದೇಸಾಯಿ ಈದಿನ.ಕಾಮ್ ಜೊತೆ ಮಾತನಾಡಿ, ” ಕೂಲಿ ಕಾರ್ಮಿಕರ ಬೇಡಿಕೆಗಳೇನೀವೆ ತಾತ್ಕಾಲಿಕ ಪಿಡಿಓ ನೇಮಕ, ಕೆಲಸ ಮಾಡಿದ ಹಣ ಪಾವತಿ, ಜಾಬ್ ಕಾರ್ಡ್ ಸಮಸ್ಯೆ ಇನ್ನೂ ಇತರೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

Download Eedina App Android / iOS

X