ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾ ಸಮಿತಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕಾರ್ಯಕರ್ತರು ರಾಯಣ್ಣನ ಜನ್ಮದಿನದ ಅಂಗವಾಗಿ ಬಾಗಲಕೋಟೆಯ ಬಸವೇಶ್ವರ ವೃತ್ತದಿಂದ ವಲ್ಲಭಾಯಿ ಚೌಕದವರೆಗೂ ಪಂಜಿನ ಮೆರವಣಿಗೆ ನಡೆಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಸವರಾಜ್ ಧರ್ಮೇಂದ್ರ, ಸಂಗೊಳ್ಳಿ ರಾಯಣ್ಣ ಒಂದು ಜಾತಿಗೆ ಸೀಮಿತವಾಗಿರದೆ, ಸಮುದಾಯಗಳಿಗೆ ಧ್ವನಿಯಾಗಿ ಹೋರಾಟ ಕಟ್ಟಿದವರು. ದೆಹಲಿಯಲ್ಲಿ ನಡೆದಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ತಬ್ಧಚಿತ್ರಗಳಲ್ಲಿ ರಾಯಣ್ಣನನ್ನು ತಿರಸ್ಕರಿಸುವುದು ಕೇಂದ್ರ ಸರ್ಕಾರವು ಇದರಲ್ಲಿ ಕೂಡ ರಾಜಕೀಯ ಮಾಡುತ್ತದೆ ಎಂದು ಆರೋಪಿಸಿದರು.
ರಾಯಣ್ಣನ ಜನ್ಮದಿನ ನಾವೆಲ್ಲರೂ ಆಚರಿಸುತ್ತಿದ್ದೇನೆ. ಸಂಗೊಳ್ಳಿ ರಾಯಣ್ಣನ ಸ್ವಾತಂತ್ರ್ಯ ಹೋರಾಟ ನಮ್ಮೆಲ್ಲರಿಗೂ ಆದರ್ಶವಾಗಬೇಕು. ವಿಪರ್ಯಾಸವೆಂದರೆ ಸಂಗೊಳ್ಳಿ ರಾಯಣ್ಣನನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಮತ್ತು ಒಂದು ಜಾತಿಗೆ ಸೀಮಿತವಾಗಿಸುವುದು ದುರಂತವೇ ಸರಿ. ಸಂಗೊಳ್ಳಿ ರಾಯಣ್ಣ ಜಾತಿಗಾಗಿ ಹೋರಾಟ ಮಾಡಿರಲಿಲ್ಲ. ಬದಲಾಗಿ ಶೋಷಿತ ಸಮುದಾಯ ಮುಂಬರಬೇಕೆಂದು ಹೋರಾಡಿದವರು ಸಂಗೊಳ್ಳಿ ರಾಯಣ್ಣ ಎಂದರು.
ರಾಘವೇಂದ್ರ ಯಾದಗಿರಿ, ರಾಮು ರಾಕುಂಪಿ, ರಕ್ಷಿತ್ ಈಟಿ, ಆನಂದ್ ಜಿಗದಿನ್ನಿ, ವೀರಣ್ಣ ಹಳೆಗೌಡರ, ರಾಜು ಮನ್ನಿಕೇರಿ, ಬಸವರಾಜ್ ಕಟಗೇರಿ, ಅಶೋಕ್ ಮುತ್ತಿನ ಮಠ, ಬಸವರಾಜ್ ಅಂಬಿಗೇರ್, ರಾಜು ಗೌಳಿ, ರಾಹುಲ್ ಶೆಟ್ಟರ್, ಗಣೇಶ್ ನಾಯಕ್, ನಾಗರಾಜ್ ಜಾಲಗಾರ ಇತರರು ಇದ್ದರು.