ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ ತಹಶೀಲ್ದಾರ್ ಸುಹಾಸ್ ಇಂಗಳೆ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಅವರು, “ಪ್ರತಿ ಕುಟುಂಬದ ಒಡತಿಯು ಈ ಯೋಜನೆಯ ಸದುಪಯೋಗ ಪಡೆದೆಕೊಳ್ಳಬೇಕು. ತಮ್ಮ ಜೀವನದ ಮೂಲಭೂತ ಅವಶ್ಯಕತೆಗಳಿಗಾಗಿ ಆ ಹಣವನ್ನು ಬಳಸಿಕೊಳ್ಳಬೇಕು. ಅನಗತ್ಯ ಖರ್ಚು ಮಾಡಬಾರದು” ಎಂದರು.
“ಬೀಳಗಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಎರಡು ಕೇಂದ್ರಗಳನ್ನು ತೆರೆಯಲಾಗಿದೆ. ಒಂದು ಪಟ್ಟಣ ಪಂಚಾಯತಿಯಲ್ಲಿ, ಮತ್ತೊಂದು ವಾಲ್ಮೀಕಿ ಸಮುದಾಯ ಭವನದಲ್ಲಿದೆ. ಅರ್ಹರು ಅಲ್ಲಿಗೆ ತೆರಳಿ ಅರ್ಜಿ ಸಲ್ಲಿಸಬೇಕು” ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್, ಅರುಣ್ ಪಾಟೀಲ, ವೈ.ಎಸ್ ಪ್ರಶಾಂತ, ಇಸ್ಮಾಯಿಲ್ ನಿಂಬಾಳ್ಕರ್, ವಿನಾಯಕ್ ಡಂಗಿ, ದುಂಡಪ್ಪ ಸಾಹುಕಾರ್, ಶ್ರೀಶೈಲ ಕಡಪಟ್ಟಿ, ಸದಾಶಿವ ಮಕದಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.