ಈ ಭೂಮಿಯ ಭವಿಷ್ಯ ನಮ್ಮ ಕೈಯಲ್ಲಿದೆ. ನಾವು ಇಂದು ನೆಡುವ ಸಸಿ ನಾಳಿನ ಪೀಳಿಗೆಗೆ ಜೀವದಾತೆಯಾಗಬಹುದು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಉಸ್ಮಾನಗನಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಅಂಜುಮನ್ ಸಂಸ್ಥೆಯ ಎಸ್ ಎಮ್ ಎಸ್ ಖಾದ್ರಿ ಫ್ರೌಡಶಾಲೆಯಲ್ಲಿ ಇಂದು (ಜೂನ್ 5) ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಸ್ಮಾನಗನಿ ಹುಮನಾಬಾದ್ ಅವರ ನೇತೃತ್ವದಲ್ಲಿ ವಿವಿಧ ಪರಿಸರ ಸಂಬಂಧೀ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಪರಿಸರದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸಸಿಗಳನ್ನು ಹಂಚಿ ತಾವು ಬೆಳೆಸಲು ಪ್ರೋತ್ಸಾಹಿಸಲಾಯಿತು.
ಇದನ್ನೂ ಓದಿ: ಬಾಗಲಕೋಟೆ | ಈದ್ ಮಿಲನ್ ಕಾರ್ಯಕ್ರಮ ಯಶಸ್ವಿ
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಗೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ವಿಧಿಸಲಾಯಿತು. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪರಿಸರದ ಬಗ್ಗೆ ಬದ್ಧತೆ ಹಾಗೂ ಜವಾಬ್ದಾರಿಯ ಮನೋಭಾವವನ್ನು ಬೆಳೆಸುವ ಉದ್ದೇಶವಿದೆ ಎಂದು ಸಂಸ್ಥೆಯ ನಿರ್ದೇಶಕರು ಹೇಳಿದರು.