ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಬಲಿಯಾದ ಘಟನೆ ಬಾಗಲಕೋಟೆಯ ಹೆಲಿಪ್ಯಾಡ್ ರಸ್ತೆಯಲ್ಲಿ ನಡೆದಿದೆ.
ಬಾಗಲಕೋಟೆ 32 ವರ್ಷದ ಶ್ರುತಿ ವಂದಕುದರಿ, 34 ವರ್ಷದ ಡೆಂಟಲ್ ಕಾಲೇಜ್ ಉಪನ್ಯಾಸಕಿ ರಜನಿ ವಂದಕುದರಿ, 20 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅಭಿಷೇಕ್ ದೋತ್ರಿ ಮೃತಪಟ್ಟ ದುರ್ದೈವಿಗಳು.
ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರು ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಡಿವೈಡರ್ ಕ್ರಾಸ್ ಮಾಡುವ ಸಂದರ್ಭದಲ್ಲಿ ವೇಗವಾಗಿ ಹೊರಟಿದ್ದ ಯಮಾಹಾ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಶೃತಿ ವಂದಕುದರಿ ಬಾಗಲಕೋಟೆ ಬಸವೇಶ್ವರ ದಂತ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದು, ರಜನಿ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು.
ಅವರು ಸ್ಕೂಟಿಯಲ್ಲಿ ಡಿವೈಡರ್ ಕ್ರಾಸ್ ಮಾಡುತ್ತಿದ್ದಾಗ ವೇಗವಾಗಿ ಆರ್15 ಬೈಕ್‌ನಲ್ಲಿ ಬಂದ ಯುವಕರು ಡಿಕ್ಕಿ ಹೊಡೆದಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸಂದೀಪ ಹುಲಸಗೇರಿ ಎಂಬಾತನಿಗೂ ತೀವ್ರತರ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಂಚಾರಿ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿಯಲ್ಲಿ ಮುಂದಿನ ಸಚಿವ ಸಂಪುಟ ಸಭೆ: ಒಪ್ಪಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಅಪಘಾತದ ರಭಸಕ್ಕೆ ಬೈಕ್‌ಗಳು ತುಂಡು ತುಂಡಾಗಿದೆ. ಸ್ಥಳಕ್ಕೆ ಬಾಗಲಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
