ಹೋಮಿಯೋಪಥಿ ಔಷಧಿಗಳು ಹಿರಿಯ ನಾಗರಿಕರಿಗೆ ಸೂಕ್ತ ಹಾಗೂ ಅತ್ಯುತ್ತಮವಾಗಿವೆ. ಎಲ್ಲರೂ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದ 37 ಕರ್ನಾಟಕ ಬೆಟಾಲಿಯನ್ ಅಧಿಕಾರಿ ಕರ್ನಲ್ ದೇವಾಶಿಶ್ ಡೇ ಅವರು ಬಿವಿವಿ ಸಂಸ್ಥೆಗೆ ಜನ ಸಾಮಾನ್ಯರ ಬಗ್ಗೆ ಇರುವ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಬಾಗಲಕೋಟೆ ನಗರದ ಬಿವಿವಿಎಸ್ ಕ್ಯಾಂಪಸ್‌ನಲ್ಲಿರುವ ಎನ್‌ಸಿಸಿ ಬೆಟಾಲಿಯನ್ ನಿವೃತ್ತ ಸೇನಾ ನೌಕರಿಗಾಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಜತೆಯಾಗಿ ಆಯೋಜಿಸಿದ್ದ ಎರಡು ದಿನಗಳ ಉಚಿತ ಹೋಮಿಯೋಪಥಿ ಚಿಕಿತ್ಸಾ ಶಿಬಿರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ> ಬಾಗಲಕೋಟೆ | ಏ.23 & 24ರಂದು CET ಪರೀಕ್ಷೆ; 21 ಕೇಂದ್ರಗಳು ಸಜ್ಜು
ಪ್ರಾಧ್ಯಾಪಕಿಯರಾದ ಡಾ. ವಿಜಯಲಕ್ಷ್ಮಿ ಪಾಟೀಲ, ಡಾ. ತೃಪ್ತಿ ಶಿಂಧೆ ಹೋಮಿಯೋಪಥಿ ಚಿಕಿತ್ಸಾ ವಿಧಾನ ಕುರಿತು ಸವಿಸ್ತಾರವಾಗಿ ಮಾತನಾಡಿದರು. ವೇದಿಕೆಯ ಮೇಲೆ ಇಸಿಎಚ್ ಘಟಕದ ಕರ್ನಲ್ ಉಮಾಕಾಂತ ಫಲ್ಹಾರಿ, ಮೇಜರ್ ಸುಬೇದಾರ ಮಚೇಂದ್ರ ಪಾಟೀಲ ಇದ್ದರು. ನಿವೃತ್ತ ಸೇನಾ ನೌಕರರ ಸಂಘದ ಅಧ್ಯಕ್ಷ ಅರ್ಜುನ ಸ್ವಾಗತ ಕೋರಿ ವಂದಿಸಿದರು.





