ಬಾಗಲಕೋಟೆ | 4 ಪಿಎಚ್‌ಸಿ ನಿರ್ವಹಣೆಗೆ ಒಬ್ಬ ವೈದ್ಯಾಧಿಕಾರಿ; ಹಳಿ ತಪ್ಪಿದ ಆರೋಗ್ಯ ಸೇವೆ

Date:

ಒಂದೆಡೆ ವೈದ್ಯರ ಕೊರತೆ, ಮತ್ತೊಂದೆಡೆ ನಾಲ್ಕು ಆರೋಗ್ಯ ಕೇಂದ್ರಗಳ ಆಡಳಿತದ ಹೊಣೆ. ಹೀಗಾಗಿ ವೈದ್ಯಾಧಿಕಾರಿಗೆ ರೋಗಿಗಳ ತಪಾಸಣೆ ಜತೆಗೆ ನಾಲ್ಕೂ ಕೇಂದ್ರಗಳ ಆಡಳಿತಾತ್ಮಕ ಜವಾಬ್ದಾರಿಯನ್ನೂ ನಿಭಾಯಿಸುವ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯ ಗ್ರಾಮೀಣ ಜನರ ಆರೋಗ್ಯ ಸೇವೆಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂಬ ಮಾತಿನ ನಡುವೆಯೇ, ಮೂರು ತಾಲ್ಲೂಕುಗಳ ವ್ಯಾಪ್ತಿಯ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಒಬ್ಬರೇ ವೈದ್ಯಾಧಿಕಾರಿ ಉಸ್ತುವಾರಿ ವಹಿಸಿರುವುದು ಆರೋಗ್ಯ ವ್ಯವಸ್ಥೆಯ ಅಸಮರ್ಪಕತೆಗೆ ಕನ್ನಡಿ ಹಿಡಿದಿದೆ.

- Advertisement -

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ತೋಗುಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಸನೆಲಿ ಅವರೇ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು, ಬೀಳಗಿ ತಾಲ್ಲೂಕಿನ ಗಿರಿಸಾಗರ ಹಾಗೂ ಗಲಗಲಿ ಪಿಎಚ್‌ಸಿಗಳ ಆಡಳಿತ ವೈದ್ಯಾಧಿಕಾರಿಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.

ಡಾ.ಸನೆಲಿ ಅವರ ಮೂಲ ಕಾರ್ಯಸ್ಥಳವಾಗಿರುವ ತೋಗುಣಸಿಯಿಂದ ಪಟ್ಟದಕಲ್ಲು ಸುಮಾರು 25 ಕಿ.ಮೀ., ಗಿರಿಸಾಗರ 54 ಕಿ.ಮೀ. ಹಾಗೂ ಗಲಗಲಿ 72 ಕಿ.ಮೀ. ದೂರದಲ್ಲಿವೆ. ಈ ನಾಲ್ಕೂ ಪಿಎಚ್‌ಸಿಗಳ ವ್ಯಾಪ್ತಿಯಲ್ಲಿ ತಲಾ ಸುಮಾರು 25 ಸಾವಿರದಿಂದ 30 ಸಾವಿರ ಜನಸಂಖ್ಯೆ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ವಾರದ ದಿನಗಳಲ್ಲಿಯೇ ವೈದ್ಯರ ಓಡಾಟ ಹಂಚಿಕೆಯಾಗಿದೆ. ಸೋಮವಾರ ತೋಗುಣಸಿಯಲ್ಲಿ ಸೇವೆ ಸಲ್ಲಿಸುವ ಅವರು, ಮಂಗಳವಾರ ಹಾಗೂ ಶನಿವಾರ ಗಲಗಲಿಯಲ್ಲಿ, ಬುಧವಾರ ಮತ್ತು ಶುಕ್ರವಾರ ಗಿರಿಸಾಗರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಗುರುವಾರ ತೋಗುಣಸಿ ಹಾಗೂ ಪಟ್ಟದಕಲ್ಲು ಪಿಎಚ್‌ಸಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.ಹೀಗಾಗಿ ವಾರದ ಹಲವು ದಿನಗಳಲ್ಲಿ ಆಯಾ ಪಿಎಚ್‌ಸಿಗಳಲ್ಲಿ ಪೂರ್ಣಾವಧಿ ವೈದ್ಯರ ಸೇವೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.

ವೈದ್ಯಾಧಿಕಾರಿ ತೋಗುಣಸಿಯಲ್ಲಿ ಇಲ್ಲದ ಸಂದರ್ಭದಲ್ಲಿ, ಸುತ್ತಮುತ್ತಲಿನ ಆರೋಗ್ಯ ಉಪಕೇಂದ್ರಗಳಲ್ಲಿರುವ ಸಮುದಾಯ ಆರೋಗ್ಯಾಧಿಕಾರಿಗಳು ರೋಗಿಗಳ ತಪಾಸಣೆ ನಡೆಸುತ್ತಿದ್ದಾರೆ. ಬಿ.ಎಸ್ಸಿ. ನರ್ಸಿಂಗ್‌ ವಿದ್ಯಾರ್ಹತೆ ಹೊಂದಿರುವ ಸಮುದಾಯ ಆರೋಗ್ಯಾಧಿಕಾರಿಗಳು ಪ್ರಾಥಮಿಕವಾಗಿ ರೋಗಿಗಳನ್ನು ಪರೀಕ್ಷಿಸಿ ಅಗತ್ಯ ಔಷಧೋಪಚಾರ ನೀಡುತ್ತಿದ್ದಾರೆ.

ತೋಗುಣಸಿ ಪಿಎಚ್‌ಸಿಗೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಜನರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ ಒಬ್ಬರೇ ವೈದ್ಯರು ನಾಲ್ಕು ಕೇಂದ್ರಗಳ ಜವಾಬ್ದಾರಿ ಹೊತ್ತಿರುವುದರಿಂದ ವೈದ್ಯಕೀಯ ಸೇವೆಯ ಮೇಲೆ ಒತ್ತಡ ಹೆಚ್ಚಾಗಿದೆ ಎಂಬುದು ಗ್ರಾಮಸ್ಥರ ಆರೋಪ.

“ತೋಗುಣಸಿ ಪಿಎಚ್‌ಸಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿದಿನ ಜನರು ಬರುತ್ತಾರೆ. ಒಬ್ಬರೇ ವೈದ್ಯರು ನಾಲ್ಕು ಕೇಂದ್ರಗಳ ಜವಾಬ್ದಾರಿ ನಿರ್ವಹಿಸಬೇಕಾದರೆ ಎಲ್ಲ ಕಡೆ ಸಮರ್ಪಕ ಸೇವೆ ನೀಡುವುದು ಹೇಗೆ ಸಾಧ್ಯ? ಸರ್ಕಾರ ಕೂಡಲೇ ಉಳಿದ ಪಿಎಚ್‌ಸಿಗಳಿಗೆ ಪೂರ್ಣಾವಧಿ ವೈದ್ಯರನ್ನು ನೇಮಿಸಬೇಕು” ಎಂದು ಗ್ರಾಮಸ್ಥರಾದ ಆಡಿವಪ್ಪ ಚಿನ್ನನ್ನವರ ಹಾಗೂ ಬಸವರಾಜ ಒತ್ತಾಯಿಸಿದ್ದಾರೆ.


“ಪ್ರತಿ ಪಿಎಚ್‌ಸಿಗೆ ವಾರದಲ್ಲಿ ಒಂದರಿಂದ ಎರಡು ದಿನ ಭೇಟಿ ನೀಡಿ ಕೆಲಸ ಮಾಡುತ್ತಿದ್ದೇನೆ. ನಾಲ್ಕೂ ಕೇಂದ್ರಗಳ ಜವಾಬ್ದಾರಿ ಇರುವುದರಿಂದ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಲು ಕಷ್ಟವಾಗುತ್ತಿದೆ” ಎಂದು ತೋಗುಣಸಿ ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಸನೆಲಿ ತಿಳಿಸಿದ್ದಾರೆ.

48 ಪಿಎಚ್‌ಸಿಗೆ ಕೇವಲ 16 ಕಾಯಂ ವೈದ್ಯರು
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 48 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಕೇವಲ 16 ಮಂದಿ ಕಾಯಂ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರ ಕೊರತೆಯಿಂದ ಕಾಯಂ ವೈದ್ಯರಿಗೇ ಹೆಚ್ಚುವರಿ ಪಿಎಚ್‌ಸಿಗಳ ಉಸ್ತುವಾರಿ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ, ಒಬ್ಬ ವೈದ್ಯರಿಗೆ ಸರಾಸರಿ ನಾಲ್ಕು ಪಿಎಚ್‌ಸಿಗಳ ಆಡಳಿತದ ಹೊಣೆ ನೀಡಲಾಗಿದೆ.

ಈ ದಿನ.ಕಾಮ್‌ ತಂಡ ಸಮಸ್ಯೆಯ ಕುರಿತು ಡಿ ಎಚ್ ಒ ರಾಜಕುಮಾರ ಯರಗಲ್ ಅವರನ್ನು ಪ್ರಶ್ನಿಸಿದಾಗ ” ಈ ಸಮಸ್ಯೆ ಕಳೆದೊಂದು ವರ್ಷದಿಂದ ಇದೆ. ಆಗ ಕೇಳದವರು ಈಗೇತಕೆ ಕೇಳುತ್ತಿದ್ದೀರಿ?, ಇವತ್ತೇ ಯಾಕೆ ಸಮಸ್ಯೆ ನಿಮ್ಮ ಗಮನಕ್ಕೆ ಬಂತು… ಸಾರ್ವಜನಿಕರಿಗೆ ಈ ಮೊದಲು, ಕಳೆದ ಒಂದು ವರ್ಷದಿಂದ ಸಮಸ್ಯೆ ಆಗಿಲ್ವಾ?” ಎಂದು ದರ್ಪದಿಂದ ಪ್ರತಿಕ್ರಿಯಿಸಿದ್ದಾರೆ.

ಗ್ರಾಮೀಣ ಜನರಿಗೆ ತುರ್ತು ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಾದ ಪಿಎಚ್‌ಸಿಗಳಲ್ಲೇ ವೈದ್ಯರ ಕೊರತೆ ತೀವ್ರವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಒಬ್ಬ ವೈದ್ಯರಿಗೆ ಹಲವು ಕೇಂದ್ರಗಳ ಹೊಣೆ ನೀಡುವುದರಿಂದ ವೈದ್ಯರ ಮೇಲಿನ ಒತ್ತಡ ಹೆಚ್ಚುವುದರ ಜತೆಗೆ, ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ದೂರದ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಓಡಾಡುವ ಬದಲು, ಪ್ರತಿಯೊಂದು ಪಿಎಚ್‌ಸಿಗೂ ಪೂರ್ಣಾವಧಿ ವೈದ್ಯರನ್ನು ನೇಮಿಸಿ ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಸರ್ಕಾರದ ತುರ್ತು ಆದ್ಯತೆಯಾಗಬೇಕಿದೆ.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ ಜೇಬಿಗೂ ಕತ್ತರಿ!

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ...

ಬೀದರ್‌ | ಮೊಬೈಲ್‌ಗಿಂತ ಕಲೆಯತ್ತ ಮಕ್ಕಳ ಆಸಕ್ತಿ ಹೆಚ್ಚಲಿ: ಸಿದ್ರಾಮ ಸಿಂಧೆ

ಇಂದಿನ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ಮೀಸಲಿಡುತ್ತಿರುವುದರಿಂದ ಅವರ ಸೃಜನಶೀಲ...

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ರೈತರಿಗೆ ನ್ಯಾಯ ಓದಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ : ಹರಿನಾಥರೆಡ್ಡಿ

ಅಭಿವೃದ್ದಿ ಹೆಸರಿನಲ್ಲಿ ಬೇನಾಮಿ ಸಂಸ್ಥೆಯನ್ನು ಸ್ಥಾಪಿಸಿ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ...

ಹವಾಮಾನ ವರದಿ | ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ

ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ...