ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ ದಾಖಲೆಗೆ ಬದಾಮಿಗೆ ಎಡತಾಕುತ್ತಿರುವ ರೈತರು!

Date:

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ. ಹೀಗಾಗಿ ಜಮೀನು, ಆಸ್ತಿ ಸೇರಿದಂತೆ ವಿವಿಧ ಭೂದಾಖಲೆಗಳನ್ನು ಪಡೆಯಲು ಗುಳೇದಗುಡ್ಡದ ಜನರು ಬಾದಾಮಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನೇ ಅವಲಂಬಿಸಬೇಕಾಗಿದೆ. ಗುಳೇದಗುಡ್ಡದಲ್ಲಿಯೇ ಭೂದಾಖಲೆಗಳ ಕಚೇರಿ ಸ್ಥಾಪಿಸಲು ಇನ್ನೆಷ್ಟು ವರ್ಷ ಕಾಯಬೇಕು? ಎಂಬ ಪ್ರಶ್ನೆಗಳು ಈಗ ಜನರನ್ನು ಕಾಡುತ್ತಿವೆ.

- Advertisement -

ತಾಲೂಕು ರಚನೆಯಾಗಿ ಹತ್ತು ವರ್ಷ ಕಳೆದರೂ, ಭೂದಾಖಲೆ ಸೇವೆ ಮಾತ್ರ ಗುಳೇದಗುಡ್ಡಕ್ಕೆ ಕಾಲಿಟ್ಟಿಲ್ಲ. ತಾಲೂಕು ಕೇಂದ್ರದಲ್ಲಿಯೇ ಸಿಗಬೇಕಾದ ಭೂದಾಖಲೆಗಳಿಗಾಗಿ ರೈತರು ಮತ್ತು ಸಾರ್ವಜನಿಕರು ಇಂದಿಗೂ ಬಾದಾಮಿಗೆ ಅಲೆಯಬೇಕಾದ ದುಸ್ಥಿತಿ ಮುಂದುವರಿದಿದೆ. ತಾಲೂಕು ರಚನೆಯಾಗಿ ಇಷ್ಟು ವರ್ಷಗಳಾದರೂ ಜನರ ಅಲೆದಾಟ ತಪ್ಪದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಗುಳೇದಗುಡ್ಡ ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ. ಹೀಗಾಗಿ ಜಮೀನು, ಆಸ್ತಿ ಸೇರಿದಂತೆ ವಿವಿಧ ಭೂದಾಖಲೆಗಳನ್ನು ಪಡೆಯಲು ಗುಳೇದಗುಡ್ಡದ ಜನರು ಬಾದಾಮಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನೇ ಅವಲಂಬಿಸಬೇಕಾಗಿದೆ.

ದಾಖಲೆಗಾಗಿ ಅರ್ಜಿ, ಉತ್ತರಕ್ಕಾಗಿ ಮತ್ತೊಂದು ಅಲೆದಾಟ!*

ಭೂದಾಖಲೆ ಪಡೆಯಲು ಅರ್ಜಿ ಸಲ್ಲಿಸಿದರೆ ಸಾಕು, ಕೆಲಸ ಮುಗಿಯಿತು ಎಂಬಂತಿಲ್ಲ. ದಾಖಲೆ ಸಿದ್ಧವಾಗಲು ಐದರಿಂದ ಎಂಟು ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ. ಇಷ್ಟಕ್ಕೆ ಸಮಸ್ಯೆ ಮುಗಿಯುವುದಿಲ್ಲ. ದಾಖಲೆ ಸಿದ್ಧವಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಮತ್ತೆ ಬಾದಾಮಿಗೆ ತೆರಳಿ ಸಿಬ್ಬಂದಿಯನ್ನು ವಿಚಾರಿಸಬೇಕು. ಒಂದು ದಾಖಲೆ ಪಡೆಯಲು ಹಲವು ಬಾರಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ರೈತರನ್ನು ಹೈರಾಣಾಗಿಸಿದೆ.

ಕೃಷಿ ಕೆಲಸಗಳನ್ನು ಬದಿಗಿಟ್ಟು ಕಚೇರಿಗಳ ಸುತ್ತ ಅಲೆಯಬೇಕಾದ ಪರಿಸ್ಥಿತಿ ಒಂದೆಡೆಯಾದರೆ, ಮತ್ತೊಂದೆಡೆ ಪ್ರಯಾಣ ವೆಚ್ಚ ಹಾಗೂ ಅಮೂಲ್ಯ ಸಮಯವೂ ವ್ಯರ್ಥವಾಗುತ್ತಿದೆ. ಜನರಿಗೆ ಅನುಕೂಲ ಕಲ್ಪಿಸಬೇಕಾದ ಸರ್ಕಾರಿ ಸೇವೆಯೇ ಜನರಿಗೆ ಹೊರೆಯಾಗುತ್ತಿರುವುದು ವಿಪರ್ಯಾಸ.

ತಾಲೂಕು ರಚನೆಯಾಯಿತು, ಸೌಲಭ್ಯ ಮಾತ್ರ ಬರಲಿಲ್ಲ!*

ತಾಲೂಕು ರಚನೆಯ ಹಿಂದಿನ ಆಶಯವೇ ಆಡಳಿತ ವಿಕೇಂದ್ರಿಕರಣ. ಆಡಳಿತಾತ್ಮಕ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸುವುದು. ಆದರೆ ಗುಳೇದಗುಡ್ಡದ ವಿಚಾರದಲ್ಲಿ ಈ ಆಶಯಕ್ಕೆ ಇನ್ನೂ ಜೀವ ಬಂದಿಲ್ಲ. ತಾಲೂಕು ಕೇಂದ್ರದ ಸ್ಥಾನಮಾನ ದೊರೆತಿದ್ದರೂ ಪ್ರಮುಖ ಸೇವೆಗಾಗಿ ಹಳೆಯ ತಾಲೂಕು ಕೇಂದ್ರವಾದ ಬಾದಾಮಿಯನ್ನೇ ಅವಲಂಬಿಸಬೇಕಾದ ಸ್ಥಿತಿ ಬದಲಾಗಿಲ್ಲ.

ಇದು ಕೇವಲ ಕಚೇರಿಯ ಕೊರತೆಯಲ್ಲ; ಆಡಳಿತ ವಿಕೇಂದ್ರೀಕರಣದ ಆಶಯವೇ ನೆಲಕಚ್ಚಿರುವುದಕ್ಕೆ ಉದಾಹರಣೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ರೈತರ ಅಲೆದಾಟಕ್ಕೆ ಮುಕ್ತಿ ಯಾವಾಗ?*

ಈದಿನ ಪ್ರತಿನಿಧಿಯೊಂದಿಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಬಸವರಾಜ್, “ಭೂದಾಖಲೆಗಳನ್ನು ಪಡೆಯಲು ರೈತರು ಸಾಕಷ್ಟು ಹೈರಾಣಾಗುತ್ತಿದ್ದಾರೆ. ತಾಲೂಕು ಕೇಂದ್ರವಾದ ಗುಳೇದಗುಡ್ಡದಲ್ಲಿಯೇ ಭೂದಾಖಲೆಗಳು ದೊರೆಯುವ ವ್ಯವಸ್ಥೆ ಮಾಡಬೇಕು. ರೈತರ ಅನಗತ್ಯ ಅಲೆದಾಟ ತಪ್ಪಿಸಲು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ತಾಲೂಕು ರಚನೆಯಾಗಿ ಹತ್ತು ವರ್ಷಗಳೇ ಕಳೆದರೂ ಜನರ ಮೂಲಭೂತ ಆಡಳಿತಾತ್ಮಕ ಅಗತ್ಯ ಈಡೇರದಿರುವುದು ಏಕೆ? ಗುಳೇದಗುಡ್ಡದಲ್ಲಿಯೇ ಭೂದಾಖಲೆಗಳ ಕಚೇರಿ ಸ್ಥಾಪಿಸಲು ಇನ್ನೆಷ್ಟು ವರ್ಷ ಕಾಯಬೇಕು? ಎಂಬ ಪ್ರಶ್ನೆಗಳು ಈಗ ಜನರನ್ನು ಕಾಡುತ್ತಿವೆ.

ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಗುಳೇದಗುಡ್ಡದಲ್ಲಿಯೇ ಭೂದಾಖಲೆಗಳ ಕಚೇರಿ ಸ್ಥಾಪಿಸಬೇಕು. ಜನರು ಒಂದು ದಾಖಲೆಗಾಗಿ ತಾಲೂಕು ಬಿಟ್ಟು ಮತ್ತೊಂದು ತಾಲೂಕಿಗೆ ಅಲೆಯುವ ಪರಿಸ್ಥಿತಿಗೆ ಶಾಶ್ವತ ತೆರೆ ಎಳೆಯಬೇಕು. ತಾಲೂಕು ಕೇಂದ್ರದ ಸೇವೆ ತಾಲೂಕು ಕೇಂದ್ರದಲ್ಲೇ ಸಿಗಲಿ ಎಂಬುದು ಜನರ ನ್ಯಾಯಯುತ ಬೇಡಿಕೆ.

WhatsApp Image 2025 02 05 at 18.09.20 1
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ರಸ್ತೆ ಅಪಘಾತ : ಗಾಯಗೊಂಡಿದ್ದ ಯುವಕ ಸಾವು

ರಬಕವಿ-ಬನಹಟ್ಟಿ: ಮಹಾಲಿಂಗಪುರ–ರಬಕವಿ ಮಧ್ಯೆ ಕವಟಿ ಅವರ ತೋಟದ ಸಮೀಪ ಸಂಭವಿಸಿದ ರಸ್ತೆ...

ಮಣಿಪುರ ಹಿಂಸಾಚಾರ | ಮ್ಯಾನ್ಮಾರ್ ಮೂಲದ ಉಗ್ರ ಸಂಘಟನೆಗಳ ವಿರುದ್ಧ ಎನ್‌ಐಎಯಿಂದ ಹೊಸ ಎಫ್‌ಐಆರ್ ದಾಖಲು

ಮಣಿಪುರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಮ್ಯಾನ್ಮಾರ್ ಮೂಲದ ಜನಾಂಗೀಯ ಸಶಸ್ತ್ರ ಗುಂಪುಗಳು...

ಬಾಗಲಕೋಟೆ | ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ – ಗುರುಪಾದ ಶ್ರೀಗಳು

ಕೃಷಿ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ರೈತರು ಹೊಂದಿಕೊಳ್ಳುವುದರ ಜೊತೆಗೆ ಸುಧಾರಿತ ತಳಿಗಳ...

ವಿಶೇಷ ಅಧಿವೇಶನ: ಡಿಲಿಮಿಟೇಶನ್ ಮಸೂದೆ ವಿರುದ್ಧ ಮತ ಚಲಾಯಿಸಲು ಎಸ್‌ಪಿ ಸಂಸದರಿಗೆ ‘ತ್ರೀ-ಲೈನ್ ವಿಪ್’ ಜಾರಿ

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಂಡಿಸಲಿರುವ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್)...