ಜಾನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಅವರ ಕಾರು ಅಪಘಾತಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಸೋರಗಾವಿ ಬಳಿ ನಡೆದಿದೆ.
ಎದುರು ಬಂದ ವಾಹನ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿದ್ದ ಕಲ್ಲಿಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯ ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.ಇನ್ನು ಕಾರಿನಲ್ಲಿದ್ದ ಗುರುರಾಜ ಹೊಸಕೋಟೆ ಅವರು ಪ್ರಾಣಾಪಾದಿಂದ ಪಾರಾಗಿದ್ದು, ಯಾರಿಗೂ ಯಾವುದೇ ಗಾಯ ಹಾಗೂ ಪ್ರಾಣಹಾನಿ ಉಂಟಾಗಿಲ್ಲ. ಸಿಂಧನೂರಿನಿಂದ ಮಹಾಲಿಂಗಪುರಕ್ಕೆ ಹೊರಟಿದ್ದ ಸಂದರ್ಭ ಅಪಘಾತ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
ಗುರುರಾಜ ಹೊಸಕೋಟೆ ಕರ್ನಾಟಕ ಜಾನಪದ ಗಾಯನ, ರಂಗಭೂಮಿ ಮತ್ತು ಸಿನಿಮಾ ಲೋಕದಲ್ಲಿ ಮಹತ್ವದ ಪ್ರತಿಭೆ. ಜಾನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜಾನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದ್ದಾರೆ.
