ಬಾಗಲಕೋಟೆ | ಎರಡು ಎಕರೆ ಜಮೀನಿಗಾಗಿ ಅತ್ತಿಗೆ ಮೇಲೆ ಬುಲೆರೊ ಹಾಯಿಸಿ ಕೊಲೆ ಯತ್ನ!

Date:

ಬೆಟ್ಟದಷ್ಟು ಆಸ್ತಿ ಇದ್ದರೂ ಎರಡು ಎಕರೆ ಜಮೀನಿನ ವಿವಾದಕ್ಕೆ ರಕ್ತಸಂಬಂಧವನ್ನೇ ಮರೆತು ಅತ್ತಿಗೆಯ ಮೇಲೆ ಬುಲೆರೊ ವಾಹನ ಹಾಯಿಸಿ ಕೊಲೆ ಯತ್ನ ನಡೆಸಿದ ಆರೋಪದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದಿದೆ.

- Advertisement -

ಮಂಗಳಾದೇವಿ ನಾಡಗೌಡ ಎಂಬ ಮಹಿಳೆಯೇ ಮೈದುನನಿಂದ ದಾಳಿಗೊಳಗಾದವರು. ತಮ್ಮ ಮಕ್ಕಳೊಂದಿಗೆ ಜಮೀನಿನಲ್ಲಿ ಕುಳಿತಿದ್ದ ವೇಳೆ ಮೈದುನ ಚೆನ್ನಪ್ಪಗೌಡ ನಾಡಗೌಡ ಬುಲೆರೊ ವಾಹನವನ್ನು ಅವರ ಮೇಲೆ ಹಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ಭೀಕರ ದೃಶ್ಯ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದ್ದು, ವಾಹನದಡಿ ಸಿಲುಕಿದ ಮಹಿಳೆ ನರಳಾಡುತ್ತಿರುವುದು ಹಾಗೂ ಆಕೆಯ ಮಗಳು ‘ಕಾಕಾ, ಬೇಡ’ ಎಂದು ಕಣ್ಣೀರಿಡುತ್ತಾ ಗೋಗರೆಯುತ್ತಿರುವುದು ಮನಕಲಕುವಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಎರಡು ಎಕರೆ ಜಮೀನಿಗಾಗಿ ಭೀಕರ ಕೃತ್ಯ?*
ಮಂಗಳಾದೇವಿ ಹಾಗೂ ಚೆನ್ನಪ್ಪಗೌಡ ಅವರ ಕುಟುಂಬಗಳಿಗೆ ತಲಾ ಸುಮಾರು 80ರಿಂದ 100 ಎಕರೆ ಜಮೀನು ಇದೆ ಎನ್ನಲಾಗಿದೆ. ಗ್ರಾಮದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಇವರ ನಡುವೆ ಜಮೀನಿನ ಗಡಿ ಹಾಗೂ ಒತ್ತುವರಿ ವಿಚಾರವಾಗಿ ಹಲವು ವರ್ಷಗಳಿಂದ ವಿವಾದವಿದೆ ಎಂದು ತಿಳಿದುಬಂದಿದೆ.

ಚೆನ್ನಪ್ಪಗೌಡ ಕಳೆದ ಸುಮಾರು 20 ವರ್ಷಗಳಿಂದ ವಿವಾದಿತ ಎರಡು ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಮಂಗಳಾದೇವಿ ಸರ್ವೇಯರ್‌ರನ್ನು ಕರೆಸಿ ಜಮೀನು ಅಳತೆ ಮಾಡಿಸಿ, ಒತ್ತುವರಿಯಾಗಿದೆ ಎನ್ನಲಾದ ಎರಡು ಎಕರೆ ಜಮೀನಿಗೆ ಸೀಮೆಕಲ್ಲು ಹಾಕಿ ಬೇಲಿ ನಿರ್ಮಿಸಿ ಬಿತ್ತನೆ ಮಾಡಿದ್ದರು ಎಂದು ಹೇಳಲಾಗಿದೆ.

ಈ ವಿಚಾರಕ್ಕೆ ಚೆನ್ನಪ್ಪಗೌಡ ಆಕ್ಷೇಪ ವ್ಯಕ್ತಪಡಿಸಿದ್ದು, ತನಗೆ ನೋಟಿಸ್ ನೀಡದೆ, ತಾನು ಇಲ್ಲದ ಸಂದರ್ಭದಲ್ಲಿ ಸರ್ವೆ ಮಾಡಿಸಿದ್ದು ಹೇಗೆ ಎಂದು ಪ್ರಶ್ನಿಸಿದ್ದ ಎನ್ನಲಾಗಿದೆ. ಬಳಿಕ ಬಿತ್ತನೆ ಮಾಡಿದ್ದ ಜಮೀನನ್ನು ಉಳುಮೆ ಮಾಡಿ ಹಾಳು ಮಾಡಿದ್ದ ಎಂಬ ಆರೋಪವೂ ಕೇಳಿಬಂದಿದೆ. ಇದೇ ವಿವಾದದ ಹಿನ್ನೆಲೆಯಲ್ಲಿ ಮಂಗಳಾದೇವಿ ತಮ್ಮ ಮಕ್ಕಳೊಂದಿಗೆ ಜಮೀನಿನಲ್ಲಿದ್ದಾಗ ಬುಲೆರೊ ವಾಹನದ ಮೂಲಕ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

‘ಕಾಕಾ, ಬೇಡ’ ಎಂದು ಅಳುತ್ತಾ ಗೋಗರೆದ ಮಗಳು!

ಮಹಿಳೆಯ ಮೇಲೆ ವಾಹನ ಹಾಯಿಸಿದ ಪರಿಣಾಮ ಮಂಗಳಾದೇವಿ ವಾಹನದಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಎರಡೂ ಕಾಲುಗಳು ಮುರಿದಿದ್ದು, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಗಂಭೀರ ಒಳಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ವಿಡಿಯೋದಲ್ಲಿ ಮಗಳ ಆರ್ತನಾದ ಕೇಳಿಬರುತ್ತಿದ್ದು, ‘ಕಾಕಾ, ಹಾಯಿಸಬೇಡ’ ಎಂದು ಆಕೆ ಗೋಗರೆಯುತ್ತಿರುವ ದೃಶ್ಯ ನೋಡುಗರ ಮನಕಲಕುವಂತಿದೆ.

ಕೃತ್ಯದ ಬಳಿಕ ಚೆನ್ನಪ್ಪಗೌಡ, ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ ಹಾಗೂ ಪಕ್ಕಕ್ಕೆ ಸರಿಯುವಂತೆ ಹೇಳಿದ್ದೆ ಎಂಬ ರೀತಿಯಲ್ಲಿ ಸಮರ್ಥನೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಘಟನೆಗೆ ಸಂಬಂಧಿಸಿದ ನಿಖರ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.

ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ

ತಾಯಿಯ ಮೇಲೆ ನಡೆದ ದಾಳಿಯಿಂದ ಆಘಾತಗೊಂಡಿರುವ ಮಗಳು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಕುಟುಂಬಕ್ಕೆ ಜೀವ ಬೆದರಿಕೆ ಇರುವುದಾಗಿ ಆತಂಕ ವ್ಯಕ್ತಪಡಿಸಿರುವ ಅವರು, ಪೊಲೀಸ್ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಆಸ್ಪತ್ರೆಗೆ ಮಾಜಿ ಸಚಿವ, ಸಚಿವರ ಭೇಟಿ

ಘಟನೆ ತಿಳಿದ ಮಾಜಿ ಸಚಿವ ಎಸ್.ಆರ್. ಪಾಟೀಲ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಂಗಳಾದೇವಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಚಿವ ಶಿವಾನಂದ ಕಾಶಪ್ಪನವರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಅವರು ಸಹ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂದಿನ 24 ಗಂಟೆಗಳು ನಿರ್ಣಾಯಕವಾಗಿವೆ. ಈಗಲೇ ಆರೋಗ್ಯದ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಾಗಿ ಮೂರು ಪೊಲೀಸ್ ತಂಡಗಳಿಂದ ಶೋಧ*
ಘಟನೆ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ಮೂರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಸಿದ್ದಾರ್ಥ್ ಗೋಯಲ್ ತಿಳಿಸಿದ್ದಾರೆ.

ಎರಡು ಎಕರೆ ಜಮೀನಿನ ಗಡಿ ವಿವಾದ ಎಷ್ಟೇ ಗಂಭೀರವಾಗಿದ್ದರೂ ಅದನ್ನು ಕಾನೂನುಬದ್ಧವಾಗಿ ಬಗೆಹರಿಸಿಕೊಳ್ಳಲು ಅವಕಾಶವಿದೆ. ಆದರೆ, ಆಸ್ತಿ ವಿವಾದದ ನೆಪದಲ್ಲಿ ಕುಟುಂಬದ ಸದಸ್ಯರ ಜೀವಕ್ಕೆ ಅಪಾಯ ಉಂಟುಮಾಡುವ ಕೃತ್ಯಗಳು ಸಮಾಜದಲ್ಲಿ ಆತಂಕ ಮೂಡಿಸುತ್ತವೆ.

ಆಸ್ತಿ ಎಷ್ಟೇ ಇದ್ದರೂ ಮಾನವೀಯತೆ ಇಲ್ಲದಿದ್ದರೆ ಪ್ರಯೋಜನವೇನು? ಎರಡು ಎಕರೆ ಜಮೀನಿನ ವಿವಾದ ರಕ್ತಸಂಬಂಧವನ್ನೇ ಅಪಾಯಕ್ಕೆ ತಳ್ಳಿದೆಯೇ ಎಂಬ ಪ್ರಶ್ನೆ ಈಗ ಕಂದಗಲ್ ಘಟನೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ. ಆರೋಪದ ಸತ್ಯಾಸತ್ಯತೆ ಹಾಗೂ

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಮಹಿಳೆಯ ಬ್ಯಾಗ್‌ನಿಂದ ₹50 ಸಾವಿರ ಹಣ ಕಳವು

ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್‌ನ ಸ್ಟೇಟ್ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಬರುತ್ತಿರುವ...

ಬಾಗಲಕೋಟೆ | ರೈತ ಸಾಧಕರಿಗೆ ಗೌರವದ ವೇದಿಕೆ; ಡಿ. 23ರಿಂದ ತೋಟಗಾರಿಕೆ ಮೇಳ

ತೋಟಗಾರಿಕೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ರೈತರು ಹಾಗೂ ರೈತ ಮಹಿಳೆಯರನ್ನು ಗುರುತಿಸಿ...