“ಇತ್ತೀಚೆಗೆ ಜರುಗಿದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಾವೇರಿ ನಗರದ ಮತಗಟ್ಟೆ ಭಾಗ ಸಂಖ್ಯೆ 85ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಸಗಿರುವ ಅಕ್ರಮ ಹಾಗೂ ಬೋಗಸ್ ಮತದಾನವನ್ನು ತೀವ್ರವಾಗಿ ಖಂಡಿಸಿ ಇಂದು ಹಾವೇರಿ ಪಟ್ಟಣದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶ್ರೀ ವಿರೂಪಾಕ್ಷಪ್ಪ ಬಳ್ಳಾರಿಯವರು, “ಕಾಂಗ್ರೆಸ್ ಪಕ್ಷದ ಈ ‘ವೋಟ್ ಚೋರಿ’ ಕೃತ್ಯವನ್ನು ಖಂಡಿಸಿ ನಾಳೆ (ದಿನಾಂಕ 26-10-2026, ಸೋಮವಾರ) ಬೆಳಿಗ್ಗೆ 10:30ಕ್ಕೆ ಹಾವೇರಿ ನಗರದ ಜಿ.ಎಚ್. ಪಟೇಲ್ ವೃತ್ತದಿಂದ ಬಸವೇಶ್ವರ ನಗರ ಮಾರ್ಗವಾಗಿ ಶಾಸಕ ರುದ್ರಪ್ಪ ಲಮಾಣಿಯವರ ನಿವಾಸದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಮುತ್ತಿಗೆ ಚಳವಳಿ ಹಮ್ಮಿಕೊಳ್ಳಲಾಗಿದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






