ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ 18 ವರ್ಷ ಪೂರ್ಣಗೊಳಿಸಿದವರು ಹಾಗೂ ಈ ಹಿಂದೆ ಪಟ್ಟಿಯಿಂದ ಹೊರಗುಳಿದಿದ್ದವರು ಸೇರಿದಂತೆ ಒಟ್ಟು 15,227 ಮಂದಿ ಹೊಸ ಮತದಾರರು ಕರಡು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೆಸರು ಕೈಬಿಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ 755 ಅರ್ಜಿಗಳನ್ನು ಮಾನ್ಯ ಮಾಡಲಾಗಿದ್ದು, 19,639 ಮತದಾರರ ವಿವರಗಳಲ್ಲಿ ತಿದ್ದುಪಡಿ ಮಾಡಲಾಗಿದೆ.
ಎಸ್‌ಐಆರ್ ವೇಳೆ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಕಾರಣಕ್ಕೆ ಮತದಾರರ ಪಟ್ಟಿಯಿಂದ ಹೊರಗುಳಿದವರು ಹಾಗೂ 18 ವರ್ಷ ಪೂರ್ಣಗೊಳಿಸಿ ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯಲು ಅರ್ಹರಾದವರು ಫಾರಂ- 6 ಸಲ್ಲಿಸುವ ಮೂಲಕ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಈ ಪ್ರಕ್ರಿಯೆಯಡಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 15,227 ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಕ್ಷೇತ್ರವಾರು ಹೊಸ ಮತದಾರರ ಸೇರ್ಪಡೆ ವಿವರ
ಮುಧೋಳ: 1,084,ತೇರದಾಳ: 2,865, ಜಮಖಂಡಿ: 1,973,ಬೀಳಗಿ: 2,498, ಬಾದಾಮಿ: 1,911, ಬಾಗಲಕೋಟೆ: 3,007, ಹುನಗುಂದ: 1,889ಈ ಪೈಕಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 3,007 ಮಂದಿ ಸೇರ್ಪಡೆಯಾಗಿದ್ದರೆ, ಮುಧೋಳ ಕ್ಷೇತ್ರದಲ್ಲಿ 1,084 ಮಂದಿ ಸೇರ್ಪಡೆಯಾಗಿದ್ದಾರೆ.
755 ಮತದಾರರ ಹೆಸರು ಪಟ್ಟಿಯಿಂದ ಕಡಿತ
ಮೃತರಾದವರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಈಗಾಗಲೇ ಬೇರೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರ ಹೆಸರುಗಳನ್ನು ಕೈಬಿಡುವಂತೆ ಫಾರಂ-7ರಡಿ ಅರ್ಜಿ ಸಲ್ಲಿಸಲು ಅವಕಾಶವಿತ್ತು.ಈ ಸಂಬಂಧ ಜಿಲ್ಲೆಯಲ್ಲಿ ಒಟ್ಟು 1,656 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ಬಳಿಕ 755 ಅರ್ಜಿಗಳನ್ನು ಮಾನ್ಯ ಮಾಡಲಾಗಿದ್ದು, ಸಂಬಂಧಿಸಿದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಕ್ಷೇತ್ರವಾರು ಹೆಸರು ಕಡಿತದ ವಿವರ
ಮುಧೋಳ: 26, ತೇರದಾಳ: 19, ಜಮಖಂಡಿ: 10, ಬೀಳಗಿ: 70,ಬಾದಾಮಿ: 92, ಬಾಗಲಕೋಟೆ: 419 ಹುನಗುಂದ: 119, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 419 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜಮಖಂಡಿ ಕ್ಷೇತ್ರದಲ್ಲಿ ಅತಿ ಕಡಿಮೆ 10 ಹೆಸರುಗಳನ್ನು ತೆಗೆದುಹಾಕಲಾಗಿದೆ.
ಮತದಾರರ ವಿಳಾಸ ಬದಲಾವಣೆ, ಹೆಸರು, ಲಿಂಗ, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರದಲ್ಲಿನ ಬದಲಾವಣೆಗಳಿಗಾಗಿ ಅರ್ಜಿ ಸಂಖ್ಯೆ 8ರಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜಿಲ್ಲೆಯಲ್ಲಿ ಈ ಉದ್ದೇಶಕ್ಕಾಗಿ ಒಟ್ಟು 20,881 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 19,639 ಅರ್ಜಿಗಳನ್ನು ಸ್ವೀಕರಿಸಿ ಮತದಾರರ ವಿವರಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಮತದಾರರ ವಿಳಾಸ ಬದಲಾವಣೆ, ಹೆಸರು, ಲಿಂಗ, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರದಲ್ಲಿನ ಬದಲಾವಣೆಗಳಿಗಾಗಿ ಅರ್ಜಿ ಸಂಖ್ಯೆ 8ರಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜಿಲ್ಲೆಯಲ್ಲಿ ಈ ಉದ್ದೇಶಕ್ಕಾಗಿ ಒಟ್ಟು 20,881 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 19,639 ಅರ್ಜಿಗಳನ್ನು ಸ್ವೀಕರಿಸಿ ಮತದಾರರ ವಿವರಗಳಲ್ಲಿ ತಿದ್ದುಪಡಿ ಮಾಡಲಾಗಿದೆ.
ಮುಧೋಳ: 2,321,ತೇರದಾಳ: 5,222, ಜಮಖಂಡಿ: 3,564, ಬೀಳಗಿ: 2,178, ಬಾದಾಮಿ: 2,080,ಬಾಗಲಕೋಟೆ: 2,825, ಹುನಗುಂದ: 2,449, ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 5,222 ಮತದಾರರ ವಿವರಗಳನ್ನು ತಿದ್ದುಪಡಿ ಮಾಡಲಾಗಿದ್ದರೆ, ಬೀಳಗಿ ಕ್ಷೇತ್ರದಲ್ಲಿ 2,178 ಮಂದಿಯ ವಿವರಗಳಲ್ಲಿ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ : ಬೀದರ್ | ಸಮತೆಯ ಪಾಲನೆಗಾಗಿ ವಚನ ಕ್ರಾಂತಿ ನಡೆಸಿದ ಶರಣರು: ಹಂಸಲೇಖ





