ಪೊಲೀಸ್ ಇಲಾಖೆಯಲ್ಲಿ ಆರ್‌ಎಸ್‌ಎಸ್ ಹಾಗೂ ಸಂಘಪರಿವಾರದ ಕಾರ್ಯಕರ್ತರು ತುಂಬಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತಹ ಬೆಳವಣಿಗೆಗಳು ಆಗ್ಗಾಗ್ಗೆ ರಾಜ್ಯದಲ್ಲಿ ನಡೆಯುತ್ತಿದೆ.
ಇತ್ತೀಚೆಗಷ್ಟೇ ಗಣೇಶೋತ್ಸವದ ಮೆರವಣಿಗೆಯ ವೇಳೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನೇಲೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಚಿದಾನಂದ ಸವದಿ ಎಂಬುವವರು ಡಿಜೆ ಹಾಡಿಗೆ ಸಮವಸ್ತ್ರದಲ್ಲೇ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇದೀಗ ಮತ್ತೊಂದು ಹೊಸ ಬೆಳವಣಿಗೆ ನಡೆದಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸಂಘಪರಿವಾರ ಹಮ್ಮಿಕೊಂಡಿದ್ದ ‘ದುರ್ಗಾ ಮಾತಾ ದೌಡ್’ ಎಂಬ ಮೆರವಣಿಗೆಯಲ್ಲಿ ಪಿಎಸ್‌ಐ ಒಬ್ಬರು, ಸಂಘಪರಿವಾರದ ಕಾರ್ಯಕರ್ತನಂತೆ ಕೇಸರಿ ಧ್ವಜ ಹಿಡಿದು ಸಾಗಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕರ್ತವ್ಯದಲ್ಲಿರುವ ಅಜಿತ್ ಹೊಸಮನಿ ಎಂಬುವವರು ದುರ್ಗಾ ಮಾತಾ ದೌಡ್ ಎಂಬ ಮೆರವಣಿಗೆಯಲ್ಲಿ ಸಮವಸ್ತ್ರದಲ್ಲಿರುವಾಗಲೇ ಕೇಸರಿ ಧ್ವಜ ಹಿಡಿದು ಸಾಗಿರುವ ಫೋಟೋ ಸದ್ಯ ಹರಿದಾಡಿದ್ದು, ಇವರ ವಿರುದ್ಧ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗೃಹ ಇಲಾಖೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಗಣೇಶ ವಿಸರ್ಜನೆ ಮೆರವಣಿಗೆ: ಸಮವಸ್ತ್ರದಲ್ಲೇ ಡಿಜೆ ಹಾಡಿಗೆ ಡ್ಯಾನ್ಸ್ ಮಾಡಿದ ಪಿಎಸ್‌ಐ!
ಮುಧೋಳದಲ್ಲಿ ಸಂಘಪರಿವಾರದ ಕಾರ್ಯಕರ್ತರೇ ಕಟ್ಟಿಕೊಂಡಿರುವ ಶಿವ ಪ್ರತಿಷ್ಠಾಣ ಹಿಂದುಸ್ತಾನ ಎಂಬ ಸಂಘಟನೆಯ ನೇತೃತ್ವದಲ್ಲಿ ಗೋವಿಂದಪುರ ಗಲ್ಲಿಯ ದುರ್ಗಾದೇವಿ ದೇವಸ್ಥಾನದಿಂದ ಅಕ್ಟೋಬರ್ 10ರಂದು ‘ದೇಶ, ಧರ್ಮ ರಕ್ಷಣೆಗಾಗಿ, ಅಖಂಡ ಹಿಂದೂ ರಾಷ್ಟ್ರಕ್ಕಾಗಿ ಸಂಕಲ್ಪ ಮಾಡೋಣ’ ಎಂಬ ಧ್ಯೇಯವಾಕ್ಯದಡಿ ತಲವಾರು, ತ್ರಿಶೂಲ ಸಹಿತ ಇತರೆ ಆಯುಧಗಳನ್ನೆಲ್ಲ ಪ್ರದರ್ಶಿಸಿಕೊಂಡು ‘ದುರ್ಗಾ ಮಾತಾ ದೌಡ್’ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಕರ್ತವ್ಯ ನಿರತರಾಗಿದ್ದ ಮುಧೋಳ ಪೊಲೀಸ್ ಠಾಣೆಯ ಪಿಎಸ್‌ಐ ಅಜಿತ್ ಹೊಸಮನಿ ಎಂಬುವವರು ಮೆರವಣಿಗೆಯಲ್ಲಿ ಪೊಲೀಸ್ ಶೂ, ಟೋಪಿ ಕಳಚಿ, ತಲೆಯಲ್ಲಿ ಬಿಳಿ ಟೋಪಿ ಧರಿಸಿ ಭಾಗವಹಿಸಿದ್ದಲ್ಲದೇ, ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದಾರೆ. ಆ ಮೂಲಕ ಕರ್ತವ್ಯ ಲೋಪವೆಸಗಿದ್ದಾರೆ.

ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಮುಧೋಳ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅಜಿತ್ ಹೊಸಮನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಸೇರಿದಂತೆ ಹಲವು ಮಂದಿ ಆಗ್ರಹಿಸಿದ್ದಾರೆ. ಈ ದುರ್ಗಾ ದೌಡ್ ಮೆರವಣಿಗೆಯಲ್ಲಿ ಪುಟ್ಟ ಬಾಲಕಿಯರ ಕೈಯ್ಯಲ್ಲಿ ‘ಲವ್ ಜಿಹಾದ್’ ಬಗ್ಗೆ ಪ್ಲೆಕಾರ್ಡ್ ಕೂಡ ನೀಡಿ, ಪ್ರದರ್ಶಿಸಲಾಗಿತ್ತು.
ಈ ಬಗ್ಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರನ್ನು ಈ ದಿನ.ಕಾಮ್ ಕಚೇರಿಯಿಂದ ಸಂಪರ್ಕಿಸಲಾಯಿತಾದರೂ, ಕರೆ ಸ್ವೀಕರಿಸಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್‌ಡಿಪಿಐ ರಾಜ್ಯ ಮುಖಂಡ ರಿಯಾಝ್ ಕಡಂಬು,”ಕರ್ನಾಟಕದ ಡಿಜಿಪಿಯವರಿಗೆ ಇದೆಲ್ಲ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ? ಕರ್ತವ್ಯ ನಿರತನಾಗಬೇಕಾದ ವ್ಯಕ್ತಿ ಧರ್ಮದ್ವೇಷ ಹರಡುವ ದುರ್ಗಾ ದೌಡು ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ನಾಯಕರಂತೆ ಪೊಲೀಸ್ ಇಲಾಖೆಯ ಸಮವಸ್ತ್ರ ಧರಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ಪಿಎಸ್ಐ ಭಾಗವಹಿಸಿ ಕರ್ತವ್ಯ ಲೋಪವೆಸಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಸೂಕ್ತ ಕ್ರಮಕ್ಕೆ ಆದೇಶಿಸಿ” ಎಂದು ಆಗ್ರಹಿಸಿದ್ದಾರೆ.

Not only muslim MLA . Including muslim government job holders also doing namaz in their working place and time that is also offence .
tell to Karnataka Cm
ಅದು ಧರ್ಮ ದ್ವೇಷ ಹರಡುವ ಕಾರ್ಯಕ್ರಮ ಅಂತ ನಿಮಗೆ ನೀವೇ decide ಮಾಡಿದ್ರೆ ಅದು ನಿಮ್ಮ ಅಭಿಪ್ರಾಯ ಅಷ್ಟೆ..
ಹಾಗಂತ ಸರ್ಕಾರಕ್ಕೆ ಅನಿಸಿದ್ದರೆ ಇಷ್ಟು ವರ್ಷ ಸುಮ್ಮನೆ ಯಾಕೆ ಇದ್ದಾರೆ..?
ಕಡಂಬು ರವರೆ, ನಿಮ್ಮ ಧರ್ಮೀಯರು ಕಾರ್ಯಕ್ರಮ ಮಾಡಿದರೆ, ಅದು ದೇಶದ ಜಾತ್ಯತೀತ ಕಾರ್ಯಕ್ರಮ. ಹಿಂದೂಗಳು ಮಾಡಿದರೆ , ಅದು ಧರ್ಮ ದ್ವೇಷ ಹರಡುವ ಕಾರ್ಯಕ್ರಮ. ಹೇಗಾಗುತ್ತೆ ಧರ್ಮ ದ್ವೇಷ. ನೀವೇ ಇದರಲ್ಲಿ ಜನರನ್ನು ಪ್ರಚೋದನೆ ಮಾಡಿ ಹಾದಿ ತಪ್ಪಿಸುತ್ತಿದೀರ ಅಲ್ಲವೇ.
ರಾಜಕರಣೀಯರು ಭಾಗವಹಿಸುವುದು ಅಪರಾಧವೇ ?.
ಹೋಗಲಿ ನೀವು ಕೂಡ ಎಲ್ಲರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೇಗೆ ಒಂದು ಹಬ್ಬವು ಧರ್ಮ ದ್ವೇಷ ವಾಗುತ್ತೆ. ಎಲ್ಲ ಪಾಸಿಟಿವ್ ಆಗಿ ಯೋಚ ನೆ ಮಾಡಿದರೆ, ಒಳ್ಳೆಯದೇ ಕಾಣಿಸುತ್ತೆ.