ಎರಡು ದಿನಗಳ ಹಿಂದೆ ಪಾದಚಾರಿಯೊಬ್ಬರಿಗೆ ಬೈಕ್ ಬಡಿದು ಜಕಂಗೊಂಡ ವ್ಯಕ್ತಿ ರಸ್ತೆ ಬದಿಯಲ್ಲಿ ಏಳಲಾಗದೆ ಅಸಹಾಯಕರಾಗಿದ್ದವರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಉಡುಪಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿ ನಾರಾಯಣ ಮೊಗೇರ(58) ಕೂಲಿ ಕಾರ್ಮಿಕನಾಗಿದ್ದು ರಸ್ತೆ ದಾಟುವಾಗ ಬೈಕ್ ಬಡಿದು ಎದೆ ಹಾಗೂ ಉದರದ ಬಾಗ ಜಕಂಗೊಂಡು ನೆರವಿಗೆ ಯಾರೂ ಸ್ಪಂದಿಸದ ಕಾರಣ 2 ದಿನ ರಸ್ತೆ ಬದಿಯ ಮರದಡಿಯಲ್ಲಿ ಕಾಲ ಕಳೆದಿದ್ದಾರೆ.
ಈ ಬಗ್ಗೆ ರೈಲ್ವೆ ಉದ್ಯೋಗಿ ಸದಾನಂದರಿಂದ ಮಾಹಿತಿ ಪಡೆದ ವಿಶು ಶೆಟ್ಟಿ ಉಡುಪಿಯಿಂದ ಆಂಬುಲೆನ್ಸ್ ನೊಂದಿಗೆ ತೆರಳಿ ಗಾಯಳುವನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದ್ದಾರೆ
ಗಾಯಾಳು ಮೂಲತಃ ಮೂಡಬಿದ್ರೆಯವರಾಗಿದ್ದು ತಂದೆ ಮೋನಪ್ಪ, ಒಂತಿಕಟ್ಟ, ಮಾರ್ಪಡಿ ಗ್ರಾಮ ಎಂದು ಮಾಹಿತಿ ನೀಡಿದ್ದು, ಸಂಬಂಧಿಕರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಗೆ ಮಾಹಿತಿ ನೀಡಲಾಗಿದೆ.
