ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಆಕಸ್ಮಿಕವಾಗಿ ಸೋಯಾಬಿನ್ ಕಾಳಿನ ಬಣವೆಗೆ ಬೆಂಕಿ ಹೊತ್ತಿಕೊಂಡು ಬಣವೆ ಸುಟ್ಟು ಕಲಕಲಾದ ಘಟನೆ ನಡೆದಿದೆ.
ತಾಲೂಕಿನ ದೊಡವಾಡ ಗ್ರಾಮದ ರೈತ ಸಿದ್ದಪ್ಪ ವೀರಭದ್ರಪ್ಪ ಹುದಲಿ ಅವರಿಗೆ ಸೇರಿದ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ. ಮಾಹಿತಿ ತಿಳಿದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ರೈತ ಸಿದ್ದಪ್ಪ ಹುದಲಿ 11 ಎಕರೆಯಲ್ಲಿ ಬೆಳೆದಿದ್ದ ಸೋಯಾಬಿನ್ ಕಾಯಿಗಳನ್ನು ಒಂದೆಡೆ ರಾಶಿ ಮಾಡಿ ಕೂಡಿಟ್ಟಿದ್ದು, ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಸುಮಾರು 5 ಲಕ್ಷ ಮೌಲ್ಯದ ಸೋಯಾಬಿನ್ ಕಾಳು ಸುಟ್ಟು ಕರಕಲಾಗಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ರಾಷ್ಟ್ರಿಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಓರ್ವ ಸಾವು; 15 ಜನರಿಗೆ ಗಾಯ
ವರ್ಷಪೂರ್ತಿ ಕಷ್ಟಪಟ್ಟು ಸೋಯಾಬಿನ್ ಬೆಳೆ ಬೆಳೆದಿದ್ದು, ಬೆಂಕಿಗಾಹುತಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಿದ್ದಪ್ಪ ವೀರಭದ್ರಪ್ಪ ವಿನಂತಿಸಿಕೊಂಡಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
