ಡಾ|| ಬಿ ಆರ್ ಅಂಬೇಡ್ಕರ್ ಮಹಿಳಾ ಸಂಘ (ರಿ) ಬೈಂದೂರು, ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ಜಯಂತಿ ಹಾಗೂ ಸಂಘದ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಶಾರದ ವೇದಿಕೆ ಬೈಂದೂರು ಇಲ್ಲಿ ಶನಿವಾರ ನಡೆಸಲಾಯಿತು.
ಕರ್ನಾಟಕದ ಮಾಜಿ ಮಂತ್ರಿಗಳು ಮಹಿಳಾ ಮತ್ತು ಮಕ್ಕಳ ಸಚಿವೆ ಹಾಗೂ ವಿರೋಧ ಪಕ್ಷದ( ಕರ್ನಾಟಕ ವಿಧಾನ ಪರಿಷತ್) ನಾಯಕರು ಆದ ಶ್ರೀಮತಿ ಮೋಟಮ್ಮ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಹಿಳೆಯರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕು ಎಂದರು. ಹಾಗೂ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಯ ಉಸಿರಿದ್ದಂತೆ ಸಂವಿಧಾನವನ್ನು ಬದಲಾಯಿಸಲು ಮುಂದಾದಲ್ಲಿ ದಲಿತ ಸಮುದಾಯದ ಜೇನುಗೂಡಿಗೆ ಕೈ ಇಟ್ಟಂತೆ ಎನ್ನುವ ಎಚ್ಚರಿಕೆ ಮಾತುಗಳನ್ನು ಸಹ ಈ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡ ಶ್ರೀಮತಿ ಸುಲೋಚನಾ ಹಾಗೂ ಸಾಮಾಜಿಕ ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡ ಬೆಂಕಿ ಚಿರಂತ್ ಇವರನ್ನು ಸನ್ಮಾನಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮತ್ತು ಎಸ್. ಎಸ್.ಎಲ್.ಸಿ, ಪಿಯುಸಿ, ಡಿಗ್ರಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಜೊತೆಗೆ ಜಿಲ್ಲಾ ನಾಯಕರುಗಳನ್ನು ಗುರುತಿಸಲಾಯಿತು. ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಮಕ್ಕಳು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಭಾಸ್ಕರ್ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಸುಂದರ್ ಮಾಸ್ಟರ್. ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ ಮಂಜುನಾಥ ಗಿಳಿಯಾರು, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ರೀ ಶ್ಯಾಮ್ ರಾಜ್ ಬಿರ್ತಿ, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಶ್ರೀ ಗೋವಿಂದ ಎಂ. ಕುಮಾರಿ ಕೀರ್ತಿ ಬೈಂದೂರು, ದ.ಸಂ.ಸ ಜಿಲ್ಲಾ ಸಮಿತಿಯ ಸದಸ್ಯರಾದ ಶ್ರೀಮತಿ ಗೀತಾ, ತಾಲೂಕು ಸಮಿತಿಯ ಶ್ರೀಮತಿ ವಿನಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೇಣುಕಾ ಸ್ವಾಗತಿಸಿದರು ಶ್ರೀಮತಿ ಚೈತ್ರ, ಶ್ರೀ ಶಂಭು ಗುಡ್ಡಮಾಡಿ ಕಾರ್ಯಕ್ರಮ ನಿರ್ವಹಿಸಿದರು.