ಕರ್ನಾಟಕದ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸುಕೋ ಬ್ಯಾಂಕ್‌ನ ನಾಮನಿರ್ದೇಶಿತ ನಿರ್ದೇಶಕರಾಗಿ ಅರವಿ ಚೆನ್ನಬಸಮ್ಮ ಪಾಟೀಲ್ ಅವರು ನೇಮಕಗೊಂಡಿದ್ದಾರೆ.
ಈ ಕುರಿತು ಸುಕೋ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಮೋಹಿತ್ ಮಸ್ಕಿ ಮತ್ತು ವ್ಯವಸ್ಥಾಪಕ ನಿರ್ದೇಶಕ ರವಿ ಸುಧಾಕರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅರವಿ ಅವರನ್ನು ನಿರ್ದೇಶಿತ ಮಂಡಳಿಯ ಸಭೆಯಲ್ಲಿ ನೇಮಕ ಮಾಡಲಾಗಿದ್ದು, ನೂತನ ನಿರ್ದೇಶಕರು ಸಹಕಾರಿ ತತ್ವ, ಸಿದ್ಧಾಂತ ಹಾಗೂ ಆಶಯಗಳಿಗೆ ಪೂರಕವಾಗಿ ಜವಾಬ್ದಾರಿಗಳನ್ನು ನಿರ್ವಹಿಸಿ ಸುಕೋ ಬ್ಯಾಂಕ್‌ನ ಸರ್ವಾಂರ್ಗೀಣ ಅಭಿವೃದ್ಧಿಗಾಗಿ ಶ್ರಮಿಸುವರು ಎಂದು ತಿಳಿಸಿದ್ದಾರೆ.