ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಪ್ರಧಾನಿಯಾದಾಗ ದೇಶದಲ್ಲಿ ಬಹಳ ಬಡತನವಿತ್ತು ಹಾಗೂ ಸಂಪನ್ಮೂಲಗಳ ಕೊರತೆ ಇತ್ತು. ಲಭ್ಯವಿದ್ದ ಸಂಪನ್ಮೂಲಗಳನ್ನೇ ಬಳಸಿಕೊಂಡು ದೇಶವನ್ನು ಮುನ್ನಡೆಸಿಕೊಂಡು ಬಂದು ಭಾರತವನ್ನು ಒಂದು ಬಲಿಷ್ಠ ದೇಶವನ್ನಾಗಿ ನಿರ್ಮಿಸುವಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಕೊಡುಗೆ ಅಪಾರವಾದದ್ದು ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಕೆ ಇ ಚಿದಾನಂದಪ್ಪ ಅಭಿಪ್ರಾಯಪಟ್ಟರು.
ಬಳ್ಳಾರಿ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಚರಿಸಿದ ಸ್ವತಂತ್ರ ಭಾರತದ ಮೊದಲ ಪ್ರಧಾನಿ, ನವಭಾರತ ನಿರ್ಮಾತೃ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರೂರವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪ್ರಸ್ತುತ ರಾಜಕಾರಣಿಗಳು, ನೆಹರೂ ಅವರು ದೇಶಕ್ಕೆ ನೀಡಿದ ಕೊಡುಗೆ ಮತ್ತು ರಾಷ್ಟ್ರಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ತಿಳಿಯದೆ ಪೂರ್ವಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ. ಇದು ವಿರೋಧ ಪಕ್ಷಗಳ ಅಲ್ಪಜ್ಞಾನವನ್ನು ಪ್ರದರ್ಶಿಸುತ್ತದೆ” ಎಂದು ನೆಹರೂ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಬಿ.ಕೆ. ಹರಿಪ್ರಸಾದ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಕರಾವಳಿಯ ಪರಿಸ್ಥಿತಿಗಳ ಬಗ್ಗೆ ಗಂಭೀರ ಚರ್ಚೆ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕಲ್ಲುಕಂಬ ಪಂಪಾಪತಿ, ಎಲ್ ಮಾರೆಣ್ಣ, ಮುಂಡರಗಿ ನಾಗರಾಜ್, ಭೋಯಪಾಟಿ ವಿಷ್ಣುವರ್ಧನ, ಶ್ರೀನಿವಾಸುಲು, ಈರನ ಗೌಡ, ವೈ ಶ್ರೀನಿವಾಸುಲು, ವೆಂಕಟಲಕ್ಷ್ಮಿ ನಾರಾಯಣ, ಎರಕುಲ ಸ್ವಾಮಿ, ಕನೇಕಲ್ ಮಾಬೂಸಾಬ್, ಶೇಕ್ ಅಫಾಕ್ ಹುಸ್ಸೇನ್, ಜೋಗಿನ ಚಂದ್ರಪ್ಪ, ಚಂಪ ಚೌಹಾಣ್, ಡಿ ವೆಂಕಟರಮಣ, ಸಂಗನಕಲ್ ವಿಜಯ್ ಕುಮಾರ್, ಸಿ ಅತ್ತವುಲ್ಲಾ, ಲಿಂಗರಾಜ್, ಮೋಹನ್, ಬಿ ಎ ಮಲ್ಲೇಶ್ವರಿ, ಫರ್ವಿನ್ ಭಾನು, ನಸೀಮ, ಚಂದ್ರಕಲಾ, ಸುನೀತ, ಗೀತಾ, ಗೌಸಿಯ, ವಿಜಯ ಕುಮಾರಿ, ಮಮತಾ ಸೇರಿದಂತೆ ಇತರರು ಇದ್ದರು.