ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಕನ್ನಡ ವಿಷಯದಲ್ಲಿ 13 ಅಂಕ ಪಡೆದಿದ್ದ ವಿದ್ಯಾರ್ಥಿನಿ ವೀರನಿಖಿತಾಂಜಲಿಗೆ, ಮರು ಮೌಲ್ಯಮಾಪನದಲ್ಲಿ 73 ಅಂಕಗಳು ಲಭ್ಯವಾಗಿವೆ.
ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಹೋಬಳಿಯ ಕರೂರು ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ವೀರಬಿಖಿತಾಂಜಲಿ ಕನ್ನಡದಲ್ಲಿ ಕೇವಲ 13 ಅಂಕಗಳನ್ನು ಪಡೆದು ಅನ್ನುತ್ತೀರ್ಣಳಾಗಿದ್ದಳು. ಆದರೆ, ತನ್ನ ಮೇಲೆ ನಂಬಿಕೆ ಇದ್ದಿದ್ದರಿಂದ ಮರು ಮೌಲ್ಯಮಾಪನಕ್ಕೆ ಹಾಕಿದ್ದಳು, ಇದೀಗ 74 ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದಾಳೆ.
ವಿದ್ಯಾರ್ಥಿಗಳು ಕಷ್ಟಪಟ್ಟು ಓದಿರುತ್ತಾರೆ. ಅವರು ಪರೀಕ್ಷೆಯಲ್ಲಿ ಬರೆದಿದ್ದರ ಬಗ್ಗೆ ವಿಶ್ವಾಸ ಇರುತ್ತದೆ. ಆದರೆ, ಉತ್ತರ ಪತ್ರಕೆಗಳನ್ನು ಪರೀಕ್ಷಿಸಿ ಯೋಗ್ಯ ಅಂಕಗಳನ್ನು ಕೊಡಬೇಕಾದಾಗ ಮೌಲ್ಯಮಾಪಕ ಶಿಕ್ಷಕರು ತಮ್ಮ ಎಡವಟ್ಟಿನಿಂದ ಮಕ್ಕಳ ಭವಿಷ್ಯ ಹಾಗೂ ಜೀವದ ಚಲ್ಲಾಟ ಆಡಿ ಬಿಡುತ್ತಾರೇನೋ ಅನಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಗಣಿಬಾಧಿತ ವಲಯ ಪ್ರದೇಶಗಳ ಮಣ್ಣು, ನೀರಿನ ಸಂರಕ್ಷಣೆ ಅಗತ್ಯ: ಉಪ ಕೃಷಿನಿರ್ದೇಶಕ ಮಂಜುನಾಥ್
ಶಾಲೆಯ 40ಕ್ಕೆ 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ. ‘ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ’ ಎಂದು ಶಾಲೆಯ ಮುಖ್ಯೋಪಾಧ್ಯಾಯ ಖಾಸಿಂ ಸಾಹೇಬ್ ಹೇಳಿದರು.