ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಯಲಹಂಕ ಉಪನಗರ 3ನೇ ಹಂತದಲ್ಲಿ ನಡೆದಿದೆ.
ರೇಖಾ ಮೃತ ದುರ್ದೈವಿ. ಈಕೆಯ ಪತಿ ಅಭಿರಾಮ ವಿರುದ್ಧ ಮೃತ ಮಹಿಳೆಯ ಪೋಷಕರು ಕೊಲೆ ಆರೋಪ ಮಾಡಿದ್ದಾರೆ.
‘ಹಣ, ಒಡವೆ ಎಲ್ಲವನ್ನೂ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದೇವೆ. ಆದರೂ ಆಕೆಯ ಪತಿ ಅಭಿರಾಮ ರೇಖಾಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ತಾವೇ ಕೊಲೆ ಮಾಡಿ ಬಳಿಕ ರೇಖಾ ಆತ್ಮಹತ್ಯೆ ಮಾಡಿಕೊಂಡಿದ್ದಾದ್ದಾಳೆ ಎಂಬಂತೆ ಬಿಂಬಿಸಿದ್ದಾರೆ ಎಂದು ರೇಖಾ ಪೋಷಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೊಲೀಸ್ ಕಚೇರಿಯ ಹಿಂಭಾಗದ ಬಸ್ ತಂಗುದಾಣವನ್ನು ಕದ್ದೊಯ್ದ ಖದೀಮರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.