ಬೆಂಗಳೂರು | ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಪೀಡಿಸಿದ ವಿಕೃತ ಪತಿ; ದೂರು ದಾಖಲು

Date:

Advertisements

ನಮ್ಮ ಮಧ್ಯೆ ನಡೆದ ಖಾಸಗಿ ವಿಚಾರಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕ್ಕೊಳ್ಳುತ್ತಾನೆ. ಅಲ್ಲದೆ, ತನ್ನ ಮೂರು ಜನ ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

42 ವರ್ಷದ ಮಹಿಳೆಯೊಬ್ಬರು ಗಂಡನ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲೇನಿದೆ?

Advertisements

“ಹಿರಿಯರು ನಿಶ್ಚಯ ಮಾಡಿದಂತೆ ನಾನು ಮತ್ತು ಮಂಗಳೂರು ಮೂಲದ ನನ್ನ ಪತಿ 2007ರಲ್ಲಿ ವಿವಾಹವಾಗಿದ್ದೇವೆ. ನಮಗೆ 11 ವರ್ಷದ ಮಗ ಹಾಗೂ 10 ವರ್ಷದ ಮಗಳಿದ್ದಾಳೆ. ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇವೆ. ನನ್ನ ಪತಿ ಚಿಕ್ಕಪುಟ್ಟ ವಿಚಾರಕ್ಕೂ ಕಿರಿಕಿರಿ ಗಲಾಟೆ ಮಾಡುತ್ತಿದ್ದರು. ನನಗೆ ಸರಿಯಾಗಿ ಸಮಯ ನೀಡುತ್ತಿರಲಿಲ್ಲ. ಈ ಹಿಂದೆಲ್ಲ ನಾನು ಅತಿಯಾದ ಕೆಲಸವಿರಬಹುದು ಎಂದು ಸುಮ್ಮನೆ ಇದ್ದೆ. ಆದರೆ, ಅವರ ನಡತೆ ಮಿತಿ ಮೀರಿದೆ” ಎಂದು ದೂರಿದ್ದಾರೆ.

“ನನ್ನ ಪತಿ ತನ್ನ ಐ ಫೋನ್‌ ಅನ್ನು ಮಕ್ಕಳಿಗೆ ಆಟವಾಡಲು ನೀಡಿದ್ದರು. ನನ್ನ ಫೋನ್ ಕೂಡ ಅದೇ ಸಮಯದಲ್ಲಿ ಹಾಳಾದ ಕಾರಣ ನನ್ನ ಗಂಡನ ಫೋನ್ ಅನ್ನು ಬಳಸಲು ಪ್ರಾರಂಭಿಸಿದ್ದೆ, ಈ ವೇಳೆ, ಆತ ತನ್ನ ಸ್ನೇಹಿತರಾದ ಬಾಬು, ಅನಂತ ಕುಮಾರ್ ಹಾಗೂ ವೀರೇಂದ್ರ ಎಂಬುವರೊಂದಿಗೆ ನನ್ನ ಜೊತೆ ದೈಹಿಕ ಸಂಪರ್ಕ ಹೊಂದಿರುವ ಬಗ್ಗೆ ವಾಟ್ಸ್‌ಆಪ್ ಮೂಲಕ ಅಸಹ್ಯವಾಗಿ ಚಾಟ್ ಮಾಡಿದ್ದನ್ನು ಕಂಡೆ. ಅಲ್ಲದೇ, ಲೈಂಗಿಕ ಕಾರ್ಯಕರ್ತೆಯರ ಬೆಲೆ ಎಷ್ಟು ಎಂಬ ಬಗ್ಗೆ ಚಾಟ್‌ಗಳಿದ್ದವು” ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ಬೇಕಾಬಿಟ್ಟಿಯಾಗಿ ಉಚಿತ ಟಿಕೆಟ್ ಹರಿದು ಬೀಸಾಕಿದ ಬಿಎಂಟಿಸಿ ನಿರ್ವಾಹಕ

“ಆ ಬಗ್ಗೆ ಕೇಳಿದಾಗ ನನ್ನ ಪತಿ ‘ನಿನಗೆ ನಿನ್ನ ಮಕ್ಕಳಿಗೆ ಜೀವನಾಂಶ ಕೊಡುವುದಿಲ್ಲ. ಈ ವಿಚಾರ ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುವೆ’ ಎಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾನೆ. ಇಷ್ಟೇ ಅಲ್ಲದೇ, ತನ್ನ ಮೂವರು ಸ್ನೇಹಿತರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯ ಮಾಡಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

Download Eedina App Android / iOS

X