ಲಂಚ ಪಡೆದ ಆರೋಪದಡಿ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ಹಾಗೂ ಕಾನ್‌ಸ್ಟೇಬಲ್ ಪೂಜಾರಿ ಅವರನ್ನು ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.
ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ 1 ಲ್ಯಾಪ್‌ಟಾಪ್ ಹಾಗೂ 1 ಲಕ್ಷ ನಗದು ಪಡೆದಿರುವ ಆರೋಪ ಸಾಬೀತಾದ ಹಿನ್ನೆಲೆ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿಸಿಪಿ ಸಾರಾ ಫಾತಿಮಾ ಅವರು ಪ್ರಕರಣದ ತನಿಖೆ ನಡೆಸಿ ಕಮಿಷನರ್ ಬಿ. ದಯಾನಂದ್ ಅವರಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಇಬ್ಬರನ್ನೂ ಅಮಾನತುಗೊಳಿಸಿ ದಯಾನಂದ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಬಜೆಟ್ | ಬೆಂಗಳೂರು ಅಭಿವೃದ್ಧಿಗೆ ₹100 ಕೋಟಿ ಅನುದಾನ ನೀಡುವಂತೆ ಬಿಜೆಪಿ ನಿಯೋಗದಿಂದ ಸಿಎಂಗೆ ಮನವಿ
