ಎಪಿಸಿಆರ್ ಕರ್ನಾಟಕ ಚಾಪ್ಟರ್ ನೂತನ ಅಧ್ಯಕ್ಷರಾಗಿ ವಕೀಲರು, ಖ್ಯಾತ ಸಾಮಾಜಿಕ ಕಾರ್ಯಕರ್ತ ಎಂ ಎಚ್ ಸುಧೀರ್ ಕುಮಾರ್ ಮುರೊಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು ನಗರದ ಬ್ಯಾರೀಸ್ ಅಸೋಸಿಯೇಷನ್‌ನ ಭವನದಲ್ಲಿ ಭಾನುವಾರ ನಡೆದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹೈಕೋರ್ಟ್ ವಕೀಲೆ ಅಖಿಲಾ ಹಾಗೂ ಮಾಜಿ ಐಜಿಪಿ ಸೈಯದ್ ಉಲ್ಫತ್ ಹುಸೇನ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಕರ್ನಾಟಕ ಹೈಕೋರ್ಟ್ ವಕೀಲ ಮೊಹಮ್ಮದ್ ನಿಯಾಜ್ ಎಸ್ ಪ್ರಧಾನ ಕಾರ್ಯದರ್ಶಿಯಾಗಿ, ಸಾಮಾಜಿಕ ಕಾರ್ಯಕರ್ತ ಹುಸೇನ್ ಕೋಡಿಬೆಂಗ್ರೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.

ಸಾಮಾಜಿಕ ಕಾರ್ಯಕರ್ತ ಜೀಶನ್ ಆಕಿಲ್ ಸಿದ್ದಿಕಿ, ವಕೀಲರಾದ ಶಜೀಹಾ ಪಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಹೈಕೋರ್ಟ್ ವಕೀಲ ಅಬ್ದುಲ್ ಸಲಾಂ ಎನ್ ಕೆ ಖಜಾಂಚಿಯಾಗಿ ಆಯ್ಕೆಗೊಂಡರು.
ಹದಿನಾರು ಮಂದಿಯನ್ನು ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದ್ದು, ಅವರ ಹೆಸರುಗಳು ಇಂತಿವೆ.
- ಮೊಹಮ್ಮದ್ ಖಾನ್ ಪಠಾಣ್ – ನಿವೃತ್ತ ಜಿಲ್ಲಾ ನ್ಯಾಯಾಧೀಶರು
- ಶ್ರೀ ಬಿ ಟಿ ವೆಂಕಟೇಶ್ – ಹಿರಿಯ ವಕೀಲರು, ಮಾಜಿ ರಾಜ್ಯ ಸಾರ್ವಜನಿಕ ಅಭಿಯೋಜಕರು, ರೀಚ್ ಲಾ, ಬೆಂಗಳೂರು
- ಜೆರಾಲ್ಡ್ ಡಿ ಸೋಜಾ – ನಿರ್ದೇಶಕರು, ಸೇಂಟ್ ಜೋಸೆಫ್ ಕಾನೂನು ಕಾಲೇಜು, ಬೆಂಗಳೂರು
- ಮಾವಳ್ಳಿ ಶಂಕರ್ – ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ
- ಉಸ್ಮಾನ್ ಪಿ – ವಕೀಲರು, ಕರ್ನಾಟಕ ಹೈಕೋರ್ಟ್, ಉಸ್ಮಾನ್ ಕಾನೂನು ಕೊಠಡಿಗಳು, ಬೆಂಗಳೂರು
- ಅಕ್ಮಲ್ ರಜ್ವಿ – ವಕೀಲರು, ಹೈಕೋರ್ಟ್ ಬೆಂಗಳೂರು
- ಮೊಹಮ್ಮದ್ ಕುಂಞಿ – ನಿರ್ದೇಶಕರು, ಶಾಂತಿ ಪ್ರಕಾಶನ, ಮಂಗಳೂರು
- ಮೆಹಾದಿ ಕಲೀಂ – ಕಾರ್ಯಕರ್ತ, ಬೆಂಗಳೂರು
- ಮೊಹಮ್ಮದ್ ಎ.ಜಿ.ಕೈಸರ್ – ನಿವೃತ್ತ ಡಿಎಸ್ಪಿ, ಎನ್ಐಎ, ಗುಲ್ಬರ್ಗಾ
- ಹರ್ಷಕುಮಾರ್ ಕುಗ್ವೆ – ಪ್ರಧಾನ ಸಂಪಾದಕರು, ಕನ್ನಡ ಪ್ಲಾನೆಟ್
- ಮಲ್ಲಿಗೆ – ಸಾಮಾಜಿಕ ಕಾರ್ಯಕರ್ತ, ಬೆಂಗಳೂರು
- ಶೇಖ್ ಶಫಿ ಅಹಮದ್ – RTI ಕಾರ್ಯಕರ್ತ, ಕಲ್ಬುರ್ಗಿ
- ಅಫ್ವಾನ್ ಬಿ – ವಕೀಲರು, ಉಡುಪಿ
- ಮುಷ್ತಾಕ್ ಅಹಮದ್ – ವಕೀಲರು, ಧಾರವಾಡ
- ಜಸ್ಬೀರ್ ಸಿಂಗ್ ಧೋಬಿ – ಅಧ್ಯಕ್ಷರು, ಶ್ರೀ ಗುರು ಸಿಂಗ್ ಸಭಾ, ಬೆಂಗಳೂರು
- ಸರ್ದಾರ್ ಜರ್ನೈಲ್ ಸಿಂಗ್ – ಕಾರ್ಯದರ್ಶಿ, ಶ್ರೀ ಗುರು ಸಿಂಗ್ ಸಭಾ, ಬೆಂಗಳೂರು
ರಾಷ್ಟ್ರೀಯ ಉಪಾಧ್ಯಕ್ಷ ಪಿ ಉಸ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಇದ್ದರು.