ಬೆಂಗಳೂರಿನ ಹೃದಯ ಭಾಗವಾದ ರಾಜಾಜಿನಗರದ ಮೆಟ್ರೋ ನಿಲ್ದಾಣದ ಸಮೀಪವಿರುವ ಪ್ಲೇ ಓವರ ಮೇಲೆ ಇಟ್ಟು 5 ತಿಂಗಳಾದರೂ ಕಾಮಗಾರಿ ಪೂರ್ಣವಾಗಿಲ್ಲ ಆದಷ್ಟುಬೇಗ ಇದನ್ನು ಪೂರ್ಣಗಿಳಿಸಿ ಲೋಕಾರ್ಪಣೆ ಮಾಡುವಂತೆ ಕೋರಿ ಶ್ರೀಬಸವೇಶ್ವರ ಪ್ರಚಾರ ಸಮಿತಿ ಮಹಾನಗರ ಪಾಲಿಕೆಗೆ ಮನವಿ ಮಾಡಿದೆ.
ಮನವಿ ಪತ್ರದಲ್ಲಿ, ಸಕಲ ಜೀವಿಗಳಿಗೂ ಲೇಸನೇ ಬಯಸಿದ ಮಾನವೀಯತೆಯ ಸಾಕಾರ ಮೂರ್ತಿ, ಕನ್ನಡದ ಮೊದಲ ಗುರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು 2023ರ ಸೆಪ್ಟೆಂಬರ್ 2ರಂದು ಬೆಂಗಳೂರಿನ ಹೃದಯ ಭಾಗವಾದ ರಾಜಾಜಿನಗರದ ಮೆಟ್ರೋ ನಿಲ್ದಾಣದ ಸಮೀಪವಿರುವ ಪ್ಲೇ ಓವರ ಮೇಲೆ ಇಡಲಾಗಿದೆ.
ಮೂರ್ತಿ ಇಟ್ಟು 5 ತಿಂಗಳಾದರೂ, ಅದರ ಸುತ್ತಮುತ್ತ ನಡೆಯಬೇಕಾದ ಕೆಲಸಗಳು ಇನ್ನೂ ಆಗಿಲ್ಲ. ಮೂರ್ತಿಯನ್ನು ಮುಚ್ಚಿದ ಕವರ್ ಹರಿದು ಹೋಗುತ್ತಿದೆ. ಆದಷ್ಟು ಬೇಗ ಆ ಕೆಲಸಗಳನ್ನು ಪೂರ್ಣಗೊಳಿಸಿ ಬಸವೇಶ್ವರರವರ ಮೂರ್ತಿಯು ಲೋಕಾರ್ಪಣೆಗೊಳಿಸಬೇಕು ಎಂದು ಬವಣ್ಣನವರ ಅಭಿಮಾನಿಗಳ ಬೇಡಿಕೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು, ಈ ನಿರ್ಮಾಣದ ಹೊಣೆ ಹೊತ್ತ ಗುತ್ತಿಗೆದಾರರು ಮತ್ತು ಸ್ಥಳೀಯ ಶಾಸಕರು ಗಮನಿಸಬೇಕು ಎಂದು ಶ್ರೀಬಸವೇಶ್ವರ ಪ್ರಚಾರ ಸಮಿತಿ ಮನವಿ ಮಾಡಿದೆ.