ಬೆಂಗಳೂರು | ರೈತರ ಬಳಕೆಗೆ ಎನ್‌ಪಿಎಸ್‌ಎಸ್ ಅಪ್ಲಿಕೇಷನ್‌ ಅಭಿವೃದ್ಧಿ; ರಾಜ್ಯಾದ್ಯಂತ ಕಾರ್ಯಗಾರ

Date:

Advertisements

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರೈತರ ಬಳಕೆಗಾಗಿ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ(ಎನ್‌ಪಿಎಸ್‌ಎಸ್) ಎಂಬ ಹೊಸ ಅಪ್ಲಿಕೇಶನ್ ಅಭಿವೃದ್ಧಿ ಮಾಡಿದ್ದು, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಜನರಿಗೆ ಇದರ ಕುರಿತಾಗಿ ಮಾಹಿತಿ ಒದಗಿಸಲು ರಾಜ್ಯಾದ್ಯಂತ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ‌

ಬೆಂಗಳೂರು ಭಾರತ ಸರ್ಕಾರದ ಅಂಗಸಂಸ್ಥೆಯಾದ ಪ್ರಾದೇಶಿಕ ಕೇಂದ್ರ ಸಮಗ್ರ ಕೀಟ ನಿರ್ವಹಣಾ ಕೇಂದ್ರ(ಆರ್‌ಸಿಐಪಿಎಂಸಿ) ಮತ್ತು ಸಸ್ಯ ಸಂರಕ್ಷಣಾ, ಸಂಘರೋಧ ಹಾಗೂ ಸಂಗ್ರಹಣೆ ನಿರ್ದೇಶನಾಲಯ ಭಾರತ ಸರ್ಕಾರವು ಭಾರತದಲ್ಲಿ ಕೀಟಗಳ ಕಣ್ಗಾವಲು ಮತ್ತು ಅದರ ನಿರ್ವಹಣೆಯನ್ನು ಕ್ಷಿಪ್ರಗೊಳಿಸುವ ಗುರಿಯನ್ನು ಹೊಂದಿದೆ.

ಇದು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ಈ ಎನ್‌ಪಿಎಸ್‌ಎಸ್‌ ಆ್ಯಪ್ ನಿಜಾವಧಿಯ ಕೀಟ ಮೇಲ್ವಿಚಾರಣೆ ಕುರಿತ ಸಮಯೋಚಿತ ಸಲಹೆಗಳು ಮತ್ತು ಪರಿಣಾಮಕಾರಿ ಕೀಟ ನಿರ್ವಹಣೆ ತಂತ್ರಗಳಿಗೆ ದೃಢವಾದ ವೇದಿಕೆಯನ್ನು ನೀಡುತ್ತದೆ. ಆದ್ದರಿಂದ ಬೆಂಗಳೂರಿನ ಆರ್‌ಸಿಐಪಿಎಂಸಿ ಸಂಸ್ಥೆಯ ಸಿಬ್ಬಂದಿ ವರ್ಗವು ಕಾರ್ಯಾಗಾರವನ್ನು ಡಿಸೆಂಬರ್‌ 10ರಂದು ಬೆಂಗಳೂರು ಗ್ರಾಮಾಂತರದಲ್ಲಿ, 12ರಂದು ಬೆಳಗಾವಿಯಲ್ಲಿ ಮತ್ತು 13ರಂದು ಧಾರವಾಡದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಯಿತು.

Advertisements

ಕೆಳಗಿನ ಕಾರಣಗಳಿಗಾಗಿ ಈ ಎನ್‌ಪಿಎಸ್‌ಎಸ್‌ ಅಪ್ಲಿಕೇಶನ್ ಉಪಯುಕ್ತವಾಗಿದೆ.

  • ಇದರಲ್ಲಿ ಕೀಟ ಸಂಭವದ ಆರಂಭಿಕ ಪತ್ತೆ ಮತ್ತು ತುರ್ತು ಕ್ರಮದ ಬಗ್ಗೆ ಮಾಹಿತಿ ಒಳಗೊಂಡಿದೆ.
  • ಇದರ ಮೂಲಕ ರೈತರಿಗೆ ಕೀಟ ಗುರುತಿಸುವಿಕೆ, ಕೀಟ ಕಣ್ಗಾವಲು ಮತ್ತು ಕೀಟ ನಿರ್ವಹಣೆ ಕುರಿತ ತಜ್ಞರ ಸಲಹೆಯನ್ನು ಸುಲಭ ಹಾಗೂ ಸಕಾಲದಲ್ಲಿ ಪಡೆಯಬಹುದಾಗಿದೆ.
  • ಇದರಲ್ಲಿ ನುರಿತ ಕೃಷಿ ನಿರ್ವಾಹಕರು, ತರಬೇತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರಮುಖ ರೈತರು ಸಲ್ಲಿಸಿದ ನಿಜ ಅವಧಿಯ ಡೇಟಾವನ್ನು ಬಳಸಿಕೊಂಡು, ಕೀಟದಿಂದ ಉಂಟಾಗಲಿರುವ ಬೆಳೆ ನಷ್ಟವನ್ನು ಗುರುತಿಸಿ ಕೂಡಲೇ ಕಡಿಮೆ ಮಾಡಬಹುದಾಗಿದೆ.
  • ಇದು ಕೀಟಗಳಿಂದಾಗುವ ಸಾಂಕ್ರಾಮಿಕ ರೋಗಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
  • ಇದು ವಿವಿಧ ಸಾರ್ವಜನಿಕ ಏಜೆನ್ಸಿಗಳಿಗೆ ರಾಷ್ಟ್ರೀಯ ಕೀಟ ಸನ್ನಿವೇಶದ ಭಂಡಾರವನ್ನೇ ಒದಗಿಸುತ್ತೆ ಮತ್ತು ಕೀಟಗಳ ಹಾಟ್‌ಸ್ಪಾಟ್‌ ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಆ ಮೂಲಕ ಸಸ್ಯ ಸಂರಕ್ಷಣಾ ಕ್ಷೇತ್ರದಲ್ಲಿ ಪರಿಣಾಮಕಾರಿ ಕೆಲಸ ಮಾಡಲು ಸಹಕಾರಿಯಾಗಿದೆ. ಜತೆಗೆ ಸಸ್ಯ ಸಂರಕ್ಷಣಾ ನೀತಿಗಳನ್ನು ರೂಪಿಸಲು ಇದು ಸಹಾಯಕವಾಗಿದೆ.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X