ಬೆಂಗಳೂರು | ವಿವಾದದ ಬೆನ್ನಲ್ಲೇ ಹೈಕೋರ್ಟ್‌ ಕಲಾಪದ ಪ್ರಸಾರಕ್ಕೆ ತಡೆ: ನೈಜ ಹೋರಾಟಗಾರರ ವೇದಿಕೆ ವಿರೋಧ

Date:

Advertisements

ನ್ಯಾಯಾಲಯ ಕಲಾಪದ ವೇಳೆ ನ್ಯಾಯಾಧೀಶರು ನೀಡಿರುವ ವಿವಾದಾತ್ಮಕ ಮತ್ತು ಅಸಹ್ಯಕರ ಹೇಳಿಕೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಬೆನ್ನಲ್ಲೇ, ಪೂರ್ವಾನುಮತಿ ಪಡೆಯದೇ ಕಲಾಪದ ಲೈವ್ ಸ್ಟ್ರೀಮಿಂಗ್‌ನ ವಿಡಿಯೋಗಳನ್ನು ಬಳಸುವಂತಿಲ್ಲ ಎಂದು ಹೈಕೋರ್ಟ್‌ ನಿರ್ಬಂಧ ವಿಧಿಸಿರುವುದಕ್ಕೆ ನೈಜ ಹೋರಾಟಗಾರರ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಇ-ಮೇಲ್ ಮೂಲಕ ಪತ್ರ ಸಲ್ಲಿಸಿರುವ ಸಾಮಾಜಿಕ ಹೋರಾಟಗಾರ ಹೆಚ್ ಎಂ ವೆಂಕಟೇಶ್ ಹಾಗೂ ಕುಣಿಗಲ್ ನರಸಿಂಹಮೂರ್ತಿ, ನ್ಯಾಯಮೂರ್ತಿ ಶ್ರೀಷಾನಂದ ಅವರ ಹೇಳಿಕೆಯ ವಿಡಿಯೋಗಳು ವೈರಲಾಗಿ ವಿವಾದವಾದ ಬೆನ್ನಲ್ಲೇ ಬೆಂಗಳೂರು ವಕೀಲರ ಸಂಘವು ಮುಖ್ಯ ನ್ಯಾಯಮೂರ್ತಿಯವರಿಗೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಕಲಾಪವನ್ನು ತಾತ್ಕಾಲಿಕವಾಗಿ ಪ್ರಸಾರ ಮಾಡದಂತೆ ಮನವಿ ಮಾಡಿದೆ. ಇದಕ್ಕೆ ನಮ್ಮ ವಿರೋಧವಿದೆ. ನ್ಯಾಯಾಲಯವು ಪಾರದರ್ಶಕ ನ್ಯಾಯ ವಿತರಣೆ ಮಾಡುವುದನ್ನು ನಾಗರಿಕರು ಕಲಾಪವನ್ನು ವೀಕ್ಷಿಸಿ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಧಕ್ಕೆಯಾಗದಂತೆ ಪಾರದರ್ಶಕವಾದ ನ್ಯಾಯ ವಿತರಣೆಯ ಕಲಾಪಗಳು ರಾಜ್ಯದ, ದೇಶದ ಕಟ್ಟ ಕಡೆಯ ವ್ಯಕ್ತಿಯು ನೋಡುವಂತಾಗುವುದರಿಂದ ನಾಗರಿಕರಲ್ಲಿ ನ್ಯಾಯಾಲಯದ ಬಗ್ಗೆ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಇನ್ನಷ್ಟು ಪ್ರಮಾಣದ ವಿಶ್ವಾಸ, ನಂಬಿಕೆ, ಗೌರವ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮತ್ತು ನ್ಯಾಯಾಂಗದ ಬಗ್ಗೆ ನಮಗೆಲ್ಲ ಅಪಾರವಾದ ಗೌರವವಿದೆ. ಆದರೆ ಉಚ್ಚ ನ್ಯಾಯಾಲಯದ ಕೆಲವುಗೌರವಾನ್ವಿತ ನ್ಯಾಯಮೂರ್ತಿಗಳು ನ್ಯಾಯ ವಿತರಣೆ ಸಂದರ್ಭದಲ್ಲಿ ಅರ್ಜಿಗೆ ಸಂಬಂಧಿಸದೆ ಇರುವ ಹಲವಾರು ವಿಷಯಗಳನ್ನು ಪೀಠದಲ್ಲಿ ಕುಳಿತು ಪ್ರಾಸ್ತಾಪ ಮಾಡುತ್ತಿರುವುದನ್ನು ನಾವು ಮಾಧ್ಯಮಗಳ ಮೂಲಕ ಕೇಳಿದ್ದೇವೆ, ಮತ್ತು ನೋಡಿದ್ದೇವೆ. ಕೆಲವೇ ಕೆಲವು ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಇತರ ವಿಷಯಗಳನ್ನು ಪ್ರಸ್ತಾಪಿಸುವ ಭರದಲ್ಲಿ ಭಾಷಣದ ರೂಪದಲ್ಲಿ ಮಾತನಾಡುತ್ತಿರುವುದು ಮತ್ತು ರಾಮ,ಕೃಷ್ಣ ,ಭಗವದ್ಗೀತೆ ಕುರಾನ್, ಬೈಬಲ್‌ಗಳ ಪ್ರವಚನವನ್ನು ಧಾರ್ಮಿಕ ಮುಖಂಡರು ಮಾಡುತ್ತಾರೆ. ನ್ಯಾಯಪೀಠದಲ್ಲಿ ಕುಳಿತು ಒಂದು ಧರ್ಮದ ಬಗ್ಗೆ ಈ ರೀತಿ ಮಾತನಾಡುವುದರಿಂದ ಇತರೆ ಧರ್ಮದವರಿಗೆ ಮುಜುಗರ ಉಂಟಾಗುತ್ತದೆ. ಧರ್ಮ ಗ್ರಂಥಗಳ ಬಗ್ಗೆ ಪ್ರಸ್ತಾಪ ಮಾಡುವುದು ಸಮಂಜಸವೂ ಅಲ್ಲ, ನ್ಯಾಯ ಸಮ್ಮತವು ಅಲ್ಲ ಎಂಬುದು ನಮ್ಮ ಅನಿಸಿಕೆ. ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದ್ದು, ಸರ್ವಧರ್ಮಗಳ ಸಮನ್ವಯದಿಂದ ನಾಗರಿಕರು ಬದುಕುತ್ತಿದ್ದಾರೆ. ಯಾವುದೋ ಒಂದು ಧರ್ಮದ ಅಥವಾ ಧರ್ಮದ ಗ್ರಂಥದ ಬಗ್ಗೆ ಪೀಠದಲ್ಲಿ ಕುಳಿತು ಮಾತನಾಡುವುದು ಇತರೆ ಧರ್ಮದವರಿಗೆ ಮುಜುಗುರವನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

Advertisements

ಇದನ್ನು ಓದಿದ್ದೀರಾ? ಗೋರಿಪಾಳ್ಯ-ಪಾಕಿಸ್ತಾನ ಹೇಳಿಕೆ : ವಿಷಾದ ವ್ಯಕ್ತಪಡಿಸಿದ ಹೈಕೋರ್ಟ್‌ ನ್ಯಾಯಮೂರ್ತಿ

ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ನ್ಯಾಯಮೂರ್ತಿ ವೇದವ್ಯಾಸಚಾರ್ ಶ್ರೀಷಾನಂದ ಅವರಿಗೆ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿ ನ್ಯಾಯ ವಿತರಣೆಯನ್ನು ಮಾಡುವುದನ್ನು ನಿರ್ಬಂಧಿಸಬೇಕು. ಅವರು ಪುನಃ ಈ ನ್ಯಾಯ ವಿತರಣೆ ಕಲಾಪದಲ್ಲಿ ಭಾಗವಹಿಸಿದ್ದಲ್ಲಿ ನ್ಯಾಯಾಂಗದ ಬಗ್ಗೆ ನಾಗರಿಕರು ಇಟ್ಟಿರುವ ವಿಶ್ವಾಸ, ನಂಬಿಕೆಗೆ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ ಎಂದು ಇದೇ ವೇಳೆ ಪತ್ರದಲ್ಲಿ ನೈಜ ಹೋರಾಟಗಾರರ ವೇದಿಕೆ ಪತ್ರದಲ್ಲಿ ಆಗ್ರಹ ವ್ಯಕ್ತಪಡಿಸಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X