ರಾಜ್ಯ ರಾಜಧಾನಿ ಬೆಂಗಳೂರಿನ ಸಿಟಿ ಮಾರ್ಕೆಟ್ ಬಳಿ ಅಕ್ರಮವಾಗಿ ವಿದೇಶಿ ಸಿಗರೇಟ್ ದಾಸ್ತಾನು ಮಾಡಲಾಗಿದ್ದ ಗೋಡೌನ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಗೋಡೌನ್‌ನಲ್ಲಿ ಸುಮಾರು ₹22 ಲಕ್ಷ ಮೌಲ್ಯದ 1,500 ಬಾಕ್ಸ್‌ಗಳಲ್ಲಿ ನಾನಾ ಮಾದರಿಯ ವಿದೇಶಿ ಸಿಗರೇಟ್ ಪತ್ತೆಯಾಗಿದ್ದು, ಸದ್ಯ ಪೊಲೀಸರು ಜಪ್ತಿ ಮಾಡಿದ್ದಾರೆ.
ಗೋಡೌನ್‌ನಲ್ಲಿ ಅಕ್ರಮವಾಗಿ ಸಿಗರೇಟ್ ದಾಸ್ತಾನು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ವಿದೇಶಿ ಸಿಗರೇಟ್‌ಗಳನ್ನು ಕೊರಿಯರ್ ಮೂಲಕ ತರಿಸಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನು ಕೊಲೆಗೈದ ಸೊಸೆ
ಈ ಕುರಿತು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.