ಬೆಂಗಳೂರು | ಗಣರಾಜ್ಯೋತ್ಸವದಲ್ಲಿ ಜೈಶ್ರೀರಾಮ್‌ ಘೋಷಣೆ; ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ ಭಾವಚಿತ್ರ ಇಡದೆ ಅವಮಾನ

Date:

Advertisements

ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವಿಡದೆ ಅವಮಾನ ಮಾಡಿದ್ದಲ್ಲದೆ, ಜೈ ಶ್ರೀರಾಮ್ ಘೋಷಣೆ ಕೂಗಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ಬೆಂಗಳೂರು ನಗರದ ಯಲಹಂಕದ ನ್ಯಾಯಾಂಗ ಬಡಾವಣೆಯ ವಾಚನಾಲಯದಲ್ಲಿ ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಅವಮಾನಿಸಿದ್ದಾರೆ.

ನ್ಯಾಯಮೂರ್ತಿ ಮತ್ತು ನ್ಯಾಯಾಧೀಶರನ್ನೊಳಗೊಡಂತೆ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಡಾ.ಅಂಬೇಡ್ಕರ್ ಅವರ ಹೆಸರನ್ನೂ ಪ್ರಸ್ಥಾಪಿಸದೆ ಸಂವಿಧಾನಕ್ಕೂ ಅವಮಾನಿಸಿದ್ದಾರೆ.

Advertisements

ನಿವೃತ್ತ ಜಂಟಿ ನಿರ್ದೇಶಕರು, ಭೂದಾಖಲೆ ಇಲಾಖೆ ಮತ್ತು ಕರ್ನಾಟಕದ ಉಚ್ಚ ನ್ಯಾಲಯದ ವಕೀಲರಾದ ಮುದ್ದು ರಂಗಪ್ಪ ಅವರು, ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “‌ಜನವರಿ 26ರ ಇಂದು ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಅವಮಾನಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಅಂಬೇಡ್ಕರ್‌ ಅವರು ಭಾರತಕ್ಕೆ ನೀಡಿದ ಸಂವಿಧಾನದ ಭಿಕ್ಷೆಯಿಂದ ನ್ಯಾಯಾಂಗದ ಉನ್ನತ ಹುದ್ದೆಯನ್ನು ಅಲಂಕರಿಸಿದ ನ್ಯಾಯಾಧೀಶರುಗಳಾದ ಡಿ. ಕೃಷ್ಣಪ್ಪ ಮತ್ತು ಮಂಜುಳಾ ಚೆಲ್ಲೂರು ಅವರಿಂದಲೇ ಡಾ.ಅಂಬೇಡ್ಕರ್ ಅವರಿಗೆ ಅವಮಾನವಾಗಿದೆ. ಅಲ್ಲದೆ ಸರ್ಕಾರಿ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ” ಎಂದರು.

ಗಣರಾಜ್ಯೋತ್ಸವ 1

“ಜನಸಾಮಾನ್ಯರು‌, ಅಂಬೇಡ್ಕರ್ ಬಗ್ಗೆ ಅರಿಯದವರು ಅವರನ್ನು ಕೇವಲ ಒಂದು ಸಮುದಾಯದ ಐಕಾನ್‌ ಆಗಿ ಗುರುತಿಸುತ್ತಾರೆ. ಆದರೆ, ಅಂಬೇಡ್ಕರ್‌ ನೀಡಿರುವ ಸಂವಿಧಾನದ ಭಿಕ್ಷೆಯಿಂದ ಇಂದು ಅಧಿಕಾರ, ಹೆಸರು, ಹಣ ಶ್ರೀಮಂತಿಕೆ ಎಲ್ಲವನ್ನೂ ಪಡೆಯುತ್ತಿರುವ ನ್ಯಾಯಮೂರ್ತಿಗಳೇ ಈ ರೀತಿ ಅನ್ಯಾಯ ಎಸಗುತ್ತಿದ್ದು, ದ್ರೋಹ ಮಾಡುತ್ತಿದ್ದಾರೆ. ಸರಿತಪ್ಪುಗಳನ್ನು ಗುರುತಿಸಿ ನ್ಯಾಯ ನೀಡಬೇಕಾದ ನ್ಯಾಯಧೀಶರಿಗೆ ಗಣರಾಜ್ಯದ ಅರ್ಥ ತಿಳಿದಿಲ್ಲವೆಂದರೆ, ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಮಾಜ ಸಾಗಲು ಎಲ್ಲಿಂದ ಸಾಧ್ಯವಾದೀತು?” ಎಂದು ಕಳವಳ ವ್ಯಕ್ತಪಡಿಸಿದರು.

“ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟಿದ್ದು ಇತಿಹಾಸ. ಎಲ್ಲ ವರ್ಗದ ಮಹಿಳೆಯರ ಬೆಳವಣಿಗೆ ಹಾಗೂ ಅವರ ಅನುಕೂಲಕ್ಕಾಗಿಯೇ ರಚಿಸಿದ ಹಿಂದೂ ಕೋಡ್‍ ಬಿಲ್‍ಗೆ ಸಂಬಂಧಿಸಿ ಭಿನ್ನಾಭಿಪ್ರಾಯ ಉಂಟಾದಾಗ ನೆಹರೂ ನೇತೃತ್ವದ ಮಧ್ಯಂತರ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಅವರು 1951ರಲ್ಲಿ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿ, ಕಾರ್ಮಿಕ ಪಕ್ಷ ಕಟ್ಟಿದರು” ಎಂದು ತಿಳಿಸಿದರು.

“ಸಂವಿಧಾನದ ರಥವನ್ನು ಸಾಧ್ಯವಾದರೆ ಮುಂದಕ್ಕೆ ಕೊಂಡೊಯ್ಯಿರಿ, ಆದರೆ ಹಿಂದಕ್ಕೆ ಎಳೆಯಬೇಡಿ ಎಂದು ಅಂಬೇಡ್ಕರ್‌ ಈ ಮೊದಲೇ ಹೇಳಿದ್ದರು. ಅಂತೆಯೇ ಪ್ರಸ್ತುತ ದಿನಮಾನಗಳ ದೇಶ, ರಾಜ್ಯಗಳ ಆಡಳಿತ ನೋಡಿದರೆ, ಪ್ರಜಾಪ್ರಭುತ್ವದ ಹಾನಿಗೆ ಎರಡೇ ದಾಪಿರುವಂತೆ ಭಾಸವಾಗುತ್ತದೆ. ಶೋಷಿತ, ದಮನಿತರ ಬದುಕನ್ನು ನುಂಗುವ ಬೆಂಕಿಯ ಕೆನ್ನಾಲಿಗೆಯಂತೆ ಉರಿಯುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಗಣರಾಜ್ಯ ದಿನಾಚರಣೆಯಲ್ಲಿ ಎಡವಟ್ಟು; ಎರಡು ಬಾರಿ ಹಾರಿದ ಧ್ವಜ

“ಅಂಬೇಡ್ಕರ್‌ ಅವರನ್ನು ಬೇರೆ ದಿನಗಳಲ್ಲಿ ನೆನಪಿಸಿಕೊಳ್ಳುವ ಯೋಗ್ಯತೆ ಯಾರಲ್ಲಿಯೂ ಇಲ್ಲ. ಆದರೆ, ಇಡೀ ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ಆಡಳಿತ ಎಲ್ಲವನ್ನೂ ನೀಡಿರುವಂತಹ ದಿನದ ನೆನಪಿನ ಇಂದಿನ ದಿನ ಗಣರಾಜ್ಯೋತ್ಸವ ಸಮಾರಂಭದಲ್ಲಿಯಾದರೂ ಅಂಬೇಡ್ಕರ್‌ ಹೆಸರು ಎತ್ತಲಿಲ್ಲ. ಅವರ ಭಾವಚಿತ್ರವನ್ನೂ ಇಟ್ಟು ಗೌರವ, ಕೃತಜ್ಞತೆ ಸಲ್ಲಿಸಲಿಲ್ಲ. ಸಂವಿಧಾನದ ಮಹತ್ವಗಳನ್ನೂ ತಿಳಿಸಲಿಲ್ಲ, ಸಂವಿಧಾನ ಪದದ ಬಳಕೆಯೇ ಆಗಲಿಲ್ಲ. ರಾಜ್ಯದ ವ್ಯವಸ್ಥೆಯ ನ್ಯಾಯದ ಸಾಲಿನಲ್ಲಿರುವ ಅಧಿಕಾರಿಗಳೇ ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿರುವುದು ದುರಂತ” ಎಂದು ಕರ್ನಾಟಕದ ಉಚ್ಚ ನ್ಯಾಲಯದ ವಕೀಲರಾದ ಮುದ್ದು ರಂಗಪ್ಪ ಹಾಗೂ ನಿವೃತ್ತ ಸಹಾಯಕ ನಿಯಂತ್ರಕರು ಕಾನೂನು ಮಾಪನ ಶಾಸ್ತ್ರ ಇಲಾಖೆ ಜಿ ಎನ್ ನರಸಿಂಹಮೂರ್ತಿ ಖಂಡಿಸಿದರು.

ರಾಯಚೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ 2022ರ ಜನವರಿ 26ರಂದು ಗಣರಾಜ್ಯೋತ್ಸವ ದಿನದಂದು ಮಲ್ಲಿಕಾರ್ಜುನ ಗೌಡ ಎಂಬ‌ ನ್ಯಾಯಾಧೀಶ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿದ್ದು, ಬಳಿಕ ಧ್ವಜಾರೋಹಣ ನೆರವೇರಿಸಲಾಗಿತ್ತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿ ವಿಕೃತ ಮನಸ್ಥಿತಿ ಮೆರೆದಿದ್ದೂ ಅಲ್ಲದೆ ಅಂಬೇಡ್ಕರ್ ಅವರ ಭಾವಚಿತ್ರವಿದ್ದರೆ ಧ್ವಜಾರೋಹಣ ಮಾಡುವುದಿಲ್ಲವೆಂದು ಉಡಾಫೆಯಿಂದ ಮಾತನಾಡಿದ್ದ ಘಟನೆ ನಡೆದಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಭಿನ್ನವಾಗಿ ಮರುಕಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. Ramakinta bharatiy sanvidhan dodadu nyayake kortige yakri hogtira raman kade bikshe bedlikre hogabeku rama rama nange anyaya agide nyaya dorkisi kodapa anta sanvidhan ididake yalru bharatdalli nimadiyagi irodu Jai bheem jai sanvidhan

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X