ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಳೆದ ಮೂರು ತಿಂಗಳಿನಿಂದ ವಿಶ್ವದ ಅತ್ಯಂತ ಸಮಯ ಪರಿಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಈ ಬಗ್ಗೆ ದಿಆನ್-ಟೈಮ್ ಫಾರ್ಮೆನ್ಸ್ ಮಾಸಿಕ ವರದಿ ಬಿಡುಗಡೆ ಮಾಡಿದ್ದು, “ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ನಿರ್ವಹಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಳೆದ ಮೂರು ತಿಂಗಳುಗಳಿಂದ ವಿಶ್ವದ ಅತ್ಯಂತ ಸಮಯೋಚಿತ ವಿಮಾನ ನಿಲ್ದಾಣವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ” ಎಂದು ಹೇಳಿದೆ.
“ಜುಲೈನಲ್ಲಿ ಶೇ.87.51 ರಷ್ಟು ಸಮಯಪಾಲನೆ, ಆಗಸ್ಟ್‌ನಲ್ಲಿ ಶೇ.89.66 ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.88.51 ಸಮಯ ಪರಿಪಾಲನೆ ಮಾಡಿದೆ” ಎಂದು ಬಿಐಎಎಲ್ ತಿಳಿಸಿದೆ.
ಈ ಶ್ರೇಯಾಂಕವು ನಿಗದಿತ ಸಮಯದ 15 ನಿಮಿಷಗಳೊಳಗೆ ನಿರ್ಗಮಿಸಿದ ವಿಮಾನಗಳ ಶೇಕಡಾವಾರು ಪ್ರಮಾಣವನ್ನು ಅಳೆಯಲಾಗುತ್ತದೆ.
ಸಿರಿಯಮ್‌ನ ಮೌಲ್ಯಮಾಪನ ಪ್ರಕ್ರಿಯೆಯು ವಿಶ್ವಾದ್ಯಂತ ವಿಮಾನ ನಿಲ್ದಾಣಗಳಿಗೆ ವಿಮಾನಯಾನ ಡೇಟಾದ ಸಂಪೂರ್ಣ ಪರಿಶೀಲನೆ ಒಳಗೊಂಡಿರುತ್ತದೆ. ಆಸನ ಸಾಮರ್ಥ್ಯ, ಗೇಟ್ ನಿರ್ಗಮನ, 80 ಪ್ರತಿಶತ ಅಥವಾ ಹೆಚ್ಚಿನ ವ್ಯಾಪ್ತಿ ಮತ್ತು ಹಾರಾಟದ ಪರಿಮಾಣದಂತಹ ಅಂಶಗಳ ಆಧಾರದ ಮೇಲೆ ವಿಮಾನ ನಿಲ್ದಾಣಗಳನ್ನು ವರ್ಗೀಕರಿಸಲಾಗಿದೆ ಎಂದು ವರದಿ ಹೇಳಿದೆ.
ವರ್ಗಗಳಲ್ಲಿ ಜಾಗತಿಕ ವಿಮಾನ ನಿಲ್ದಾಣ (25 – 40 ಮಿಲಿಯನ್ ಪ್ರಯಾಣಿಕರು), ದೊಡ್ಡ ವಿಮಾನ ನಿಲ್ದಾಣ (25 – 40 ಮಿಲಿಯನ್ ಪ್ರಯಾಣಿಕರು), ಮಧ್ಯಮ ವಿಮಾನ ನಿಲ್ದಾಣ (15 – 25 ಮಿಲಿಯನ್ ಪ್ರಯಾಣಿಕರು), ಮತ್ತು ಸಣ್ಣ ವಿಮಾನ ನಿಲ್ದಾಣ (5 – 15 ಮಿಲಿಯನ್ ಪ್ರಯಾಣಿಕರು) ಸೇರಿವೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 88 ಮಾರ್ಗಗಳನ್ನು ಒಳಗೊಂಡಿದೆ. ನೆಟ್‌ವರ್ಕ್ ಮತ್ತು 35 ಏರ್‌ಲೈನ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಮಂತ್ರಿ ಶಿವಾನಂದ ಪಾಟೀಲ್ ಕೂಡಲೇ ರಾಜೀನಾಮೆ ನೀಡಬೇಕು; ಎಎಪಿ ಒತ್ತಾಯ
2022-23ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ 31.91 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಮೂಲಕ ಭಾರತದ ಮೂರನೇ ಅತ್ಯಂತ ಹೆಚ್ಚು ಪ್ರಯಾಣಿಕರನ್ನು ಹೊಂದಿದ ವಿಮಾನ ನಿಲ್ದಾಣ ಎಂದೆನಿಸಿಕೊಂಡಿದೆ.
ಅಗ್ರ ಐದು ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ವಿಮಾನ ನಿಲ್ದಾಣಗಳೆಂದರೆ, ಉತಾಹ್‌ನ ಸಾಲ್ಟ್ ಲೇಕ್ ಸಿಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಯುಎಸ್‌ಎ), ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಿನ್ನಿಯಾಪೋಲಿಸ್-ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಲ್ ಡೊರಾಡೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.