ಬೆಂಗಳೂರು | ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ; ಸರ್ಕಾರ ಕ್ರಮ ವಿರೋಧಿಸಿ ಪ್ರತಿಭಟನೆ

Date:

Advertisements

‘ಸರ್ಕಾರದ ಆದಾಯಕ್ಕಿಂತ ಜನತೆಯ ಶಾಂತಿಯುತ ಜೀವನ ಮುಖ್ಯ’ ಎಂಬ ಟಿಪ್ಪು ಸುಲ್ತಾನ್ ಅವರ ಆದರ್ಶವನ್ನು ಸರ್ಕಾರ ಗಾಳಿಗೆ ತೂರಿದೆ. ರಾಜ್ಯದಲ್ಲಿ ಹೊಸದಾಗಿ 1,000ಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲು ಮುಂದಾಗಿದೆ. ಇದು ಜನವಿರೋಧಿ ನಿರ್ಧಾರ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಮುಖಂಡೆ ಶಾಂತ ಎ ಅವರು ಕಿಡಿಕಾರಿದ್ದಾರೆ.

ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲು ಅಬಕಾರಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಖಂಡಿಸಿ ಎಐಎಂಎಸ್‌ಎಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಶಾಂತ ಅವರು ಮಾತನಾಡಿದರು.

“ಈಗಾಗಲೇ ಮದ್ಯಪಾನದಂತಹ ದುಶ್ಚಟದಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳು ಹಾಗೂ ನಗರಗಳಲ್ಲಿನ ಸೂಪರ್ ಮಾರುಕಟ್ಟೆಗಳಲ್ಲಿ ಹೊಸ ಮತ್ತು ಬಳಕೆ ಇಲ್ಲದ ಪರವಾನಗಿಗಳಿಗೆ ಮರುಜೀವ ನೀಡುವಂತೆ ಅಬಕಾರಿ ಇಲಾಖೆ ಪ್ರಸ್ತಾವನೆ ನೀಡಿದೆ. ಇಲಾಖೆಯು ಸುಮಾರು 600ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಧ್ಯದ ಅಂಗಡಿಗಳು ಇಲ್ಲದಿರುವುದನ್ನು ಗುರುತಿಸಿ, ಮದ್ಯದ ಅಂಗಡಿಗಳಿಗೆ ಅನುಮತಿ ನೀಡಲು ಸಜ್ಜಾಗಿದೆ. ಸಮಾಜದಲ್ಲಿ ಹೆಣ್ಣುಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ, ಕುಟುಂಬ ಕಲಹಗಳಿಗೆ ಸಮಾಜಘಾತಕ ಕೃತ್ಯಗಳಿಗೆ ಮದ್ಯಪಾನ ಎಡೆ ಮಾಡಿಕೊಡುವುದನ್ನ ಸರ್ಕಾರದ ಅಂಕಿಅಂಶಗಳೆ ಬಹಿರಂಗಪಡಿಸಿವೆ” ಎಂದು ಅವರು ಹೇಳಿದ್ದಾರೆ.

Advertisements

“ಸಮಾಜದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ವರಮಾನವನ್ನು ಸಂಗ್ರಹಿಸಲು ಬೇಕು ಎಂಬ ಕ್ಷುಲ್ಲಕ ಕಾರಣ ನೀಡಿ ಸಮಾಜವನ್ನು ಸಾಂಸ್ಕೃತಿಕ ಅಧಪತನಕ್ಕೆ ತಳ್ಳಲು ಸರ್ಕಾರವು ಈ ಮಾರ್ಗ ಹಿಡಿದಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದ ಈ ಪ್ರಸ್ತಾವನೆಯನ್ನು ಮಹಿಳಾ ಸಮುದಾಯವು ಒಕ್ಕೊರಳಿನಿಂದ ಖಂಡಿಸಬೇಕಿದೆ. ಟಿಪ್ಪುವನ್ನು ಎತ್ತಿಹಿಡಿಯುವ ಸರ್ಕಾರವುಸರ್ಕಾರದ ಆದಾಯಕ್ಕಿಂತ ಜನತೆಯ ಶಾಂತಿಯುತ ಜೀವನ ಮುಖ್ಯ’ ಎಂಬ ಅವರ ಆದರ್ಶವನ್ನು ಗಾಳಿಗೆ ತೂರಿದೆ. ಸರ್ಕಾರದ ಇಂತಹ ಜನ ವಿರೋಧಿ, ಮಹಿಳಾ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಂಘಟಿತ ಹೋರಾಟ ಕಟ್ಟಬೇಕು” ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಎಐಡಿವೈಒ ಬೆಂಗಳೂರು ಅಧ್ಯಕ್ಷರಾದ ವಿನಯ್ ಸಾರಥಿ, “ಗ್ಯಾರಂಟಿಗಳ ಹೆಸರಿನಲ್ಲಿ ಜನಗಳ ಜೀವನ ಮಟ್ಟ ಸುಧಾರಿಸುತ್ತೇವೆಂದು ಹೇಳುತ್ತಿರುವ ಸರ್ಕಾರ, ಹಿಂಬಾಗಿಲಿನ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡಲು ಹೊರಟಿದೆ. ಕುಡಿತದ ಚಟಕ್ಕೆ ಬಲಿಯಾಗಿ ಬಾಳಿ ಬದುಕ ಬೇಕಾದ ಯುವಕರು ಸಾವನಪುತ್ತಿದ್ದಾರೆ. ಅಪಘಾತಗಳು ಹೆಚ್ಚುತ್ತಿವೆ. ಯುವಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದನ್ನು ಬಿಟ್ಟು, ಅವರ ನೈತಿಕ ಬೆನ್ನೆಲುಬನ್ನು ಮುರಿಯಲು ಕಾರಣವಾಗುವ ಮದ್ಯಪಾನವನ್ನು ಪ್ರೋತ್ಸಾಹಿಸುತ್ತಿದೆ” ಎಂದು ಕಿಡಿಕಾರಿದರು.

“ಜನರ ಆರ್ಥಿಕತೆಯ ಸಬಲೀಕರಣಕ್ಕೆ ಕೆಲವು ಗ್ಯಾರಂಟಿಗಳನ್ನು ಘೋಷಿಸಿರುವ ಸರಕಾರವು, ಸಮಾಜದ ಸ್ವಾಸ್ಥ್ಯದ ಗ್ಯಾರಂಟಿಯನ್ನು ಖಾತ್ರಿಪಡಿಸುವ ತನ್ನ ಕನಿಷ್ಠ ಜವಬ್ದಾರಿಯನ್ನು ಮರೆಯಬಾರದು. ಸರ್ಕಾರಕ್ಕೆ ನಿಜವಾಗಿಯೂ ಆದಾಯದ ಕೊರತೆ ಇದ್ದರೆ ರಾಜ್ಯದ ದೊಡ್ಡ ದೊಡ್ಡ ಕಾರ್ಪೋರೇಟ್ ವಲಯದವರ ಸಂಪತ್ತಿನ ಮೇಲೆ ತೆರಿಗೆಗಳನ್ನು ಹಾಕಲಿ, ಆ ಧೈರ್ಯ ಸರ್ಕಾರಕ್ಕೆ ಇದೆಯೇ? ಅದು ಬಿಟ್ಟು ಮತ್ತೆ ಹೆಚ್ಚಿನ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಿ ಜನಸಾಮಾನ್ಯರನ್ನು ಸುಲಿಗೆ ಮಾಡಿ, ಅದರಲ್ಲೂ ಮುಖ್ಯವಾಗಿ ಯುವಜನರನ್ನು ನೈತಿಕ ಅಧಪತನಕ್ಕೆ ತಳ್ಳುತ್ತಿರುವ ಸರ್ಕಾರದ ಈ ನಿರ್ಧಾರವನ್ನು ನಾಡಿನ ಪ್ರಜ್ಞಾವಂತ ಜನತೆ ತೀವ್ರವಾಗಿ ಖಂಡಿಸಬೇಕು” ಎಂದರು.

ಎಐಎಂಎಸ್‌ಎಸ್‌ನ ಜಿಲ್ಲಾ ಉಪಾಧ್ಯಕ್ಷೆ ನಿರ್ಮಲ ಹೆಚ್.ಎಲ್ ಮಾತನಾಡಿ, “ಇಂದು ಬೆಲೆಏರಿಕೆ, ಬಡತನ, ನಿರುದ್ಯೋಗದಿಂದ ಜನಸಾಮಾನ್ಯರ ಜೀವನ ತತ್ತರಿಸಿದೆ. ಹೀಗಿರುವಾಗ ಹಸಿದ ಹೊಟ್ಟೆಗೆ ಮದ್ಯಪಾನವನ್ನು ಉಣಿಸಲು ಮುಂದಾಗಿರುವ ಸರ್ಕಾರದ ಈ ನಿಲುವು ಖಂಡನೀಯ. ಸರ್ಕಾರವು ಈ ನಡೆಯನ್ನು ಕೂಡಲೇ ಕೈಬಿಡಬೇಕೆಂದು ಅಗ್ರಹಿಸಲು ನಾಡಿನ ಮಹಿಳಾ ಸಮುದಾಯ, ಪ್ರಜ್ಞಾವಂತ ಜನತೆ ಮುಂಬರಬೇಕು.” ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ವಿವಿಧ ಭಾಗಗಳ ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ಜನಸಾಮಾನ್ಯರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X