ಬೆಂಗಳೂರು | ಒಂದು ದೇಶ – ಒಂದು ಧರ್ಮ ಎನ್ನುವ ಮೋದಿಗೆ ಬಹುತ್ವದ ಅರಿವಿಲ್ಲ: ಅವತಾರ್ ಸಿಂಗ್

Date:

Advertisements

ಸರ್ಕಾರಗಳ ರೈತ, ಕಾರ್ಮಿಕ, ದಲಿತ, ಆದಿವಾಸಿ, ಅರಣ್ಯ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 26ರಿಂದ ಮೂರು ದಿನಗಳ ಮಹಾಧರಣಿ ನಡೆಸಲು ಸಂಯುಕ್ತ ಹೋರಾಟ ಕರ್ನಾಟಕ ಮುಂದಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಹಾಧರಣಿ ನಡೆಯಲಿದೆ. ಧರಣಿಗೆ 50,000ಕ್ಕೂ ಹೆಚ್ಚು ರೈತರು-ಕಾರ್ಮಿಕರು, ಜನಸಾಮಾನ್ಯರನ್ನು ಕರೆತರಲು ರಾಜ್ಯಾದ್ಯಂತ ಪ್ರಚಾರ ನಡೆಯಲಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ಬೆಂಗಳೂರಿನ ಸ್ಕೌಟ್‌ ಅಂಡ್ ಗೈಡ್ಸ್‌ನ ಸಭಾಂಗಣದಲ್ಲಿ ನಡೆದ ‘ಸಂಯುಕ್ತ ಹೋರಾಟ ಕರ್ನಾಟಕ’ದ ರಾಜ್ಯ ಸಮಾವೇಶದಲ್ಲಿ ಮಹಾಧರಣಿ ನಡೆಸುವ ಬಗ್ಗೆ ಒಕ್ಕೂಟದ ಮುಖಂಡರು ಘೋಷಿಸಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಪಂಜಾಬ್‌ನ ಬಿಕೆಯು ಪ್ರಧಾನ ಕಾರ್ಯದರ್ಶಿ ಅವತಾರ್ ಸಿಂಗ್, “ಮೋದಿ ಹೇಳ್ತಾರೆ ‘ಒಂದು ದೇಶ,‌‌ ಒಂದು ಧರ್ಮ, ಒಂದು ಭಾಷೆ’ ಅಂತ. ಆದರೆ, ದೇಶದಲ್ಲಿ ಹಲವು ಧರ್ಮಗಳ, ನೂರಾರು ಭಾಷೆಗಳನ್ನ ಆಡುವ ಜನ ಇದ್ದಾರೆ ಅನ್ನೋದನ್ನೇ ಅವರು ಮರೆತಿದ್ದಾರೆ. ಅಲ್ಲದೆ, ಧರ್ಮ- ಜಾತಿಯ ಹೆಸರಿನಲ್ಲಿ ಜನರ ನಡುವೆ‌ ಒಡೆದು ಆಳುವ ನೀತಿಯನ್ನ ದೇಶದಲ್ಲಿ ಬಿಜೆಪಿ ಮುಂದುವರೆಸಿದೆ. ಅದರ ವಿರುದ್ಧ ನಾವು ವಿಭಿನ್ನತೆಯಲ್ಲಿ ಏಕತೆಯನ್ನು ಗುರುತಿಸಿ ಒಗ್ಗಟ್ಟಾಗುತ್ತಿದ್ದೇವೆ” ಎಂದರು.

Advertisements

“ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಮೋದಿಯ ದುರಾಡಳಿತದ ವಿರುದ್ಧ ಮಹಾಧರಣಿ ಸತ್ಯಾಗ್ರಹ ನಡೆಯಲಿದೆ. ಅದನ್ನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವ ಮೂಲಕ ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಠಿಯಿಂದ ರೈತರ ಭೂಮಿಯನ್ನು, ಕಾರ್ಮಿಕರ ಹಕ್ಕುಗಳನ್ನು ಉಳಿಸಬೇಕಿದೆ. ಫ್ಯಾಸಿಸ್ಟ್ ಸಂಸ್ಕೃತಿಯ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ, ಮೋದಿಯ ಸರ್ಕಾರವನ್ನು ಕಿತ್ತೊಗೆಯಲು ಒಗ್ಗಟ್ಟಿನಿಂದ ಕೆಲಸ ಮಾಡೋಣ” ಎಂದು ಅವರು ಕರೆ ನೀಡಿದರು.

ದಲಿತ ನಾಯಕ ಮಾವಳ್ಳಿ ಶಂಕರ್ ಮಾತನಾಡಿ, “ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಭಾವನಾತ್ಮಕವಾಗಿ, ಬಣ್ಣದ ಮಾತುಗಳಿಂದ ಜನರನ್ನ ಮರುಳು ಮಾಡಿ ವಾಸ್ತವವನ್ನು ಮರೆಮಾಚುತ್ತಿದ್ದಾರೆ. ಮೋದಿಗೆ ಈ ದೇಶ ಹಾಗೂ ಜನರ ಬಗ್ಗೆ ಗೌರವ ಇದ್ದಿದ್ರೆ ಪಾರ್ಲಿಮೆಂಟಲ್ಲಿ ಸೆಂಗೋಲ್ ಬದಲು ನೇಗಿಲು ಇರುತ್ತಿತ್ತು‌. ಆದರೆ, ಸೆಂಗೋಲ್ ಹಿಡಿದುಕೊಂಡು ಧರ್ಮದ ರಾಜಕೀಯ ಮಾಡ್ಕೊಂಡು ಸ್ವಾಮೀಜಿಗಳನ್ನು ವೈಭವಿಕರಿಸುವುದು ಪ್ರಜಾಪ್ರಭುತ್ವದ ನಡೆಯಲ್ಲ” ಎಂದು ಕಿಡಿಕಾರಿದರು.

ಎಐಕೆಎಸ್‌ ಅಧ್ಯಕ್ಷ ಆರ್ ವೆಂಕಯ್ಯ ಮಾತನಾಡಿ, “ದೆಹಲಿ ರೈತ ಹೋರಾಟದ ಹುತಾತ್ಮ ನಾಯಕರಿಗೆ ಇದುವರೆಗೂ ಪರಿಹಾರ‌ ನೀಡಿಲ್ಲ, ಲಖ್ಖೀಂಪುರ ಕೇರಿ ಪ್ರಕರಣದ ಆರೋಪಿಯ ತಂದೆ ಸಚಿವರಾಗಿದ್ದು ಆತನನ್ನ ಸಂಸತ್ತಿನಿಂದ ಆಚೆ ಹಾಕಲು ಮೋದಿಗೆ ಸಾಧ್ಯ ಆಗಿಲ್ಲ. ಇದು ಕೇಂದ್ರ ಬಿಜೆಪಿ ಸರ್ಕಾರ ಯಾರ ಪರ ಅನ್ನೋದನ್ನ ಸಾಬೀತುಪಡಿಸಿದೆ” ಎಂದರು.

“ರೈತ ವಿರೋಧಿ ಕಾನೂನು ತಂದು ಕೃಷಿ ಕ್ಷೇತ್ರವನ್ನ ನಾಶಮಾಡಲು ನಿಂತಿದ್ದ ಮೋದಿ‌ ಈಗ ವಿದ್ಯುತ್ ಖಾಸಗೀಕರಣ ಮಾಡಿ ತಿದ್ದುಪಡಿ ಮಸೂದೆ ತರಲು ನಿಂತಿದೆ‌. ಅದನ್ನ ಬಿಜೆಪಿ ಹೊರತಾದ ಸರ್ಕಾರವಿರುವ ರಾಜ್ಯಗಳೆಲ್ಲ ವಿರೋಧಿಸಿವೆ. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಮೂರು ಕೃಷಿ ಕಾಯ್ದೆ ವಾಪಸ್ ತೆಗೆದುಕೊಳ್ಳಲು ಮಾಡಿದಂತಹ ಹೋರಾಟವನ್ನು ಮುಂದುವರೆಸಬೇಕು. ರೈತ ವಿರೋಧಿ-ಜನ ವಿರೋಧಿ ನೀತಿಗಳನ್ನು ತರುವ ಸರ್ಕಾರಗಳನ್ನು ಹೀನಾಯವಾಗಿ ಸೋಲಿಸಬೇಕು” ಎಂದು ಕರೆ ಕೊಟ್ಟರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X