ಚುನಾವಣಾ ಅವಲೋಕನ ಸಭೆಯಲ್ಲಿ ತನ್ನ ಸೋಲಿಗೆ ಮುಸ್ಲಿಂ ಸಮುದಾಯ ಕಾರಣ ಎಂದು ಹೇಳಿ ತಮ್ಮ ಸಮುದಾಯವನ್ನು ನಿಂದನೆ ಮಾಡಿರುವ ಬಿಜೆಪಿ ನಾಯಕ ಎಂಟಿಬಿ ನಾಗರಾಜ ವರ್ತನೆ ಅತ್ಯಂತ ಖಂಡನಿಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಎಂಟಿಬಿ ನಾಗರಾಜ್ ಮತ್ತು ಬಿಜೆಪಿ ಸೋಲಿಗೆ ಅವರ ದುರಾಡಳಿತವೆ ಕಾರಣ. ಅದನ್ನು ಒಪ್ಪಿಕೊಂಡು ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುವ ಬದಲು ನೇರವಾಗಿ ಒಂದು ಸಮುದಾಯವನ್ನು ಹೊಣೆ ಮಾಡುತ್ತಿರುವುದು ಹತಾಶೆಯ ಮನೋಭಾವ. ಮುಸ್ಲಿಂ ಸಮುದಾಯ, ಅಲ್ಲಾಹ, ಕುರಾನ್ ಮೇಲೆ ಪ್ರಮಾಣ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆಂದು ಸುಳ್ಳು ಆರೋಪ ಮಾಡುತ್ತ, ಚುನಾವಣೆಯಲ್ಲಿ ಹಣ ಹಂಚಿರುವ ಬಗ್ಗೆ ಬಹಿರಂಗವಾಗಿ ಒಪ್ಪಿಕೊಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಅಧಿಕಾರಿಗಳು ಜನಪರ ಆಡಳಿತಕ್ಕೆ ಅಧಿಕಾರಿಗಳು ಶ್ರಮಿಸಬೇಕು: ಸಚಿವ ಎಚ್ ಕೆ ಪಾಟೀಲ್
“ಒಂದು ಸಮುದಾಯಕ್ಕೆ ಅವಹೇಳನವಾಗಿ ನಿಂದನೆ ಮಾಡಿ, ಧಮ್ಕಿ ಹಾಕುವ ಹಾಗೂ ಚುನಾವಣೆಯಲ್ಲಿ ಹಣ ಹಂಚಿರುವ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿರುವ ಎಂಟಿಬಿ ನಾಗರಾಜ್ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಿಲಿಸಿ ಕಾನೂನು ಕ್ರಮ ಜರಗಿಸಬೇಕು” ಎಂದು ಒತ್ತಾಸಿದ್ದು, ಪ್ರಕಟಣೆಗೆ ತಿಳಿಸಿದ್ದಾರೆ.