ಬೆಂಗಳೂರು | ನ. 20 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಶಂಕರ್‌ನಾಗ್ ನಾಟಕೋತ್ಸವ’

Date:

Advertisements

ರಂಗಭೂಮಿಯಲ್ಲಿ ತನ್ನದೇ ಬ್ರ್ಯಾಂಡ್ ಹುಟ್ಟು ಹಾಕಿದ ಶಂಕರ್‌ನಾಗ್ ಅವರ ಸವಿನೆನಪಿಗಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಂಗ ಪಯಣವು ನವೆಂಬರ್ 20 ರಿಂದ ನವೆಂಬರ್ 24 ರವರೆಗೆ ‘ಶಂಕರ್‌ನಾಗ್ ನಾಟಕೋತ್ಸವ’ ಹಮ್ಮಿಕೊಂಡಿದೆ.

ಬೆಂಗಳೂರಿನ ಜೆ.ಸಿ.ರಸ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ ಶಂಕರ್‌ನಾಗ್ ನಾಟಕೋತ್ಸವ ನಡೆಯಲಿದೆ. ಈ ನಾಟಕೋತ್ಸವದಲ್ಲಿ ಗುಲಾಬಿ ಗ್ಯಾಂಗ್ 100ನೇ ಪ್ರದರ್ಶನ ಕಾಣಲಿದೆ.  ಪ್ರತಿ ದಿನ ಸಾಯಂಕಾಲ ನಾಟಕಗಳು ಪ್ರದರ್ಶನ ಕಾಣಲಿವೆ. ರವೀಂದ್ರ ಕಲಾಕ್ಷೇತ್ರದಲ್ಲಿ ಐದು ದಿನಗಳು ನಾಟಕಗಳ ಪ್ರದರ್ಶನ ಇರಲಿದೆ.

‘ಸೋಮಾಲಿಯಾ ಕಡಲ್ಗಳ್ಳರು’ ನಾಟಕ

Advertisements

ರಂಗ ಪಯಣ ತಂಡದಿಂದ ನವೆಂಬರ್ 20 ರಂದು ಶಂಕರ್‌ನಾಗ್ ನಾಟಕೋತ್ಸವ ಆರಂಭವಾಗಲಿದೆ. ಮೊದಲ ದಿನ ಸಂಜೆ 6ಕ್ಕೆ ರಂಗಗೀತೆಗಳ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. 7.30ಕ್ಕೆ ‘ಸೋಮಾಲಿಯಾ ಕಡಲ್ಗಳ್ಳರು’ ನಾಟಕ ಪ್ರದರ್ಶನ ಕಾಣಲಿದೆ. ಈ ನಾಟಕದ ರಚನೆ/ಸಂಗೀತ/ನಿರ್ದೇಶನ ರಾಜ್ ಗುರು ಅವರದ್ದು ಇರಲಿದೆ.

‘ಬದುಕು ಜಟಕಾ ಬಂಡಿ’ ನಾಟಕ

ನವೆಂಬರ್ 21 ರಂದು ಸಂಜೆ 5 ಕ್ಕೆ “ನನ್ನೊಳಗಿನ ಕಡಲು” ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. 6.05ಕ್ಕೆ ಗುಲಾಬಿ ಗ್ಯಾಂಗು ನಾಟಕ 1೦೦ರ ಸಂಭ್ರಮ ಪ್ರಯುಕ್ತ ಸಂವಾದ ಕಾರ್ಯಕ್ರಮ ಇರಲಿದೆ. ಸಾತ್ವಿಕ ತಂಡದಿಂದ 7.15ಕ್ಕೆ ‘ಬದುಕು ಜಟಕಾ ಬಂಡಿ’ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ರಾಜ್ ಗುರು ಅವರಾಗಿದ್ದು, ವಿನ್ಯಾಸ, ಸಂಗೀತ, ನಿರ್ದೇಶನ ಕೃಷ್ಣಮೂರ್ತಿ ಕವತ್ತಾರ್ ಅವರದ್ದಾಗಿದೆ.

ಗುಲಾಬಿ ಗ್ಯಾಂಗು 1೦೦ನೇ ಪ್ರದರ್ಶನ

ನವೆಂಬರ್ 22ರಂದು ಸಂಜೆ 5ಕ್ಕೆ ನಾಗರಕಟ್ಟೆ, 6 ಗಂಟೆಗೆ ರಂಗ ಕನಸು (ರಿ) ಮಂಡಲಗೇರಾ ತಂಡದಿಂದ ‘ನಕ್ಷತ್ರದ ಧೂಳು’ ನಾಟಕ ನಡೆಯಲಿದೆ. ನಾಟಕ ರಚನೆ ಹರ್ಷಕುಮಾರ್ ಕುಗ್ವೆ ಹಾಗೂ ನಿರ್ದೇಶನ ಪ್ರವೀಣ್ ರೆಡ್ಡಿ ಗುಂಜಹಳ್ಳಿ ಅವರದ್ದಾಗಿದೆ.

ಅದೇ ದಿನ 7.3೦ಕ್ಕೆ ಗುಲಾಬಿ ಗ್ಯಾಂಗು (1೦೦ನೇ ಪ್ರದರ್ಶನ) ನಾಟಕ ಪ್ರದರ್ಶನಗೊಳ್ಳಲಿದೆ. ರಂಗರೂಪ : ಪ್ರವೀಣ್ ಸೂಡ, ರಚನೆ/ಸಂಗೀತ/ನಿರ್ದೇಶನ : ರಾಜ್ ಗುರು

 'ಶಂಕರ್‌ನಾಗ ನಾಟಕೋತ್ಸವ'
‘ಶಂಕರ್‌ನಾಗ ನಾಟಕೋತ್ಸವ’

“ಮಹಾಬಲಯ್ಯನ ಕೋಟು” ನಾಟಕ

ನವೆಂಬರ್ 23 ರಂದು ಸಂಜೆ 5 ಕ್ಕೆ ಕಾವ್ಯ ಕಾರಣ (ಕಾವ್ಯಗಳ ಓದು), 6.05 ಕ್ಕೆ ‘ಏಕತಾರಿಯ ನಡಿಗೆ ಸಾಧನಕೇರಿಯ ಕಡೆಗೆ’ (ಹಾಡಿನ ಕಾರ್ಯಕ್ರಮ) ನಡೆಯಲಿದೆ. ನಮ್ಮ ಹಳ್ಳಿ ಥಿಯೇಟರ್ (ರಿ) ತಂಡದಿಂದ 7.15ಕ್ಕೆ “ಮಹಾಬಲಯ್ಯನ ಕೋಟು” ನಾಟಕ ನಡೆಯಲಿದೆ. ಮೂಲ ರಚನೆ : ನಿಕೋಲಾಯ್ ಗೊಗೋಲ್, ರಂಗ ರೂಪ/ನಿರ್ದೇಶನ : ಪ್ರೊ.ಎಸ್.ಸಿ.ಗೌರಿಶಂಕರ್

ಆಲ್ ರೈಟ್ ಮಂತ್ರಮಾಂಗಲ್ಯ ನಾಟಕ

ನವೆಂಬರ್ 24ರಂದು ಸಂಜೆ 5.30ಕ್ಕೆ ರಂಗಗೀತೆಗಳು, 6ಕ್ಕೆ ಸಮಾರೋಪ ಸಮಾರಂಭ, ಜಿ ಪಿ ಐ ಇ ಆರ್ ರಂಗತಂಡ ಮೈಸೂರು ತಂಡದಿಂದ 7.05ಕ್ಕೆ ‘ಆಲ್ ರೈಟ್ ಮಂತ್ರಮಾಂಗಲ್ಯ’ ನಾಟಕ ಪ್ರದರ್ಶನವಾಗಲಿದೆ. ರಚನೆ: ಗಣೇಶ್ ಅಮೀನಗಡ, ನಿರ್ದೇಶನ: ಮೈಮ್ ರಮೇಶ್ ರಂಗಾಯಣ

ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹಲವಾರು ಕನಸುಗಳನ್ನು ಕಂಡ ಶಂಕರ್‌ನಾಗ್‌ ಅವರ ಎಷ್ಟೋ ಕನಸುಗಳು ಇಂದಿನ ಯುವಕ ಮಿತ್ರರಿಗೆ ತಲುಪಲಿ, ರಂಗಭೂಮಿ ಜೀವಂತಿಕೆಯ ನೆಲದ ಕಡೆ ಆಕರ್ಷಿತರಾಗಲಿ ಎಂಬ ಉದ್ದೇಶದಿಂದ ಉತ್ಸವ ಶಂಕರ್‌ನಾಗ್ ಶುರು ಮಾಡಿದೆ. ಸತತ 5 ವರ್ಷ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಪ್ರಸ್ತುತ 2023ಕ್ಕೆ 6ನೇ ವರ್ಷಕ್ಕೆ ಕಾಲಿಟ್ಟಿದೆ.

ಕನ್ನಡ ರಂಗಭೂಮಿಯಲ್ಲಿ ರಂಗ ಪಯಣ ಸತತ 14 ವರ್ಷಗಳಿಂದ ನೆಲೆಯೂರಿದೆ. ಸದಾ ಹೊಸ ಪಯೋಗಗಳನ್ನು ಮಾಡುವ ಈ ತಂಡ ಇಲ್ಲಿಯ ತನಕ 15 ನಾಟಕಗಳನ್ನು ಕಟ್ಟಿದ್ದು, 1500ಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿದೆ. ಈ ತಂಡದ ಯಶಸ್ವಿ ಉತ್ಸವ ಎಂದರೆ ಅದು “ಶಂಕರ್‌ನಾಗ್‌ ನಾಟಕೋತ್ಸವ”.

ಇಂದಿನ ಪ್ರಸ್ತುತ ಕಾಲಘಟ್ಟದ ವಿಚಾರಗಳ ಕುರಿತ “ಸಂವಾದ’ ಕಾವ್ಯ ವಾಚನ, ಕಿರುನಾಟಕಗಳು, ರಂಗಗೀತೆಗಳು, ಮಹಿಳಾ ನಾಟಕೋತ್ಸವ ವಿಚಾರ ಸಂಕೀರ್ಣ ಬೇಂದ್ರೆ, ಕುವೆಂಪು, ಮಾಸ್ತಿಯವರ ಕಥೆ ಓದು, ನಾಗರಕಟ್ಟೆ ಎಂಬ ವೇದಿಕೆಯಲ್ಲಿ ಶಂಕರನಾಗ್ ಅವರು ಕಂಡಿದ್ದ ಕನಸುಗಳು ಮತ್ತು ಅವರೊಂದಿಗೆ ಕಳೆದ ಘಳಿಗೆಗಳಲ್ಲಿ ಆದ ಘಟನೆಗಳ ಅನಾವರಣ, ನಾಟಕೋತ್ಸವದ ಕೊನೆಯದಿನ ಸಮಾಜದಲ್ಲಿ ತಮ್ಮ ನಿಸ್ವಾರ್ಥ ಸೇವೆಗೈದ ಸಾಧಕರಿಗೆ ಶಂಕರ್‌ನಾಗ್ ಪ್ರಶಸ್ತಿ ನೀಡಲಿದೆ ಎಂದು ರಂಗ ಪಯಣ ಹೇಳಿದೆ.

ಈ ಸುದ್ದಿ ಓದಿದ್ದೀರಾ? ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

ನಾಟಕೋತ್ಸವದಲ್ಲಿ ಪ್ರತಿವರ್ಷ 5 ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಪ್ರೇಕ್ಷಕರು ಹಲವಾರು ನೆನಪುಗಳನ್ನು ಹೊತ್ತೊಯ್ಯುತ್ತಾರೆ. ತಂಡದ ನಾಯಕಿಯಾದ ನಯನಸೂಡರ ನಿರ್ದೇಶನದಲ್ಲಿ ಪ್ರತಿವರ್ಷ ಈ ಉತ್ಸವ ನಡೆಯುತ್ತದೆ ಎಂದು ಮಾಹಿತಿ ನೀಡಿದೆ.

ಉಚಿತ ಪಾಸ್‌ಗಳಿಗಾಗಿ ಸಂಪರ್ಕಿಸಿ

88847 64509/ 85488 44818/ 99641 40723/ 8951895235

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X