ಎಂಎಂವೈಸಿ ಬೆಂಗಳೂರು ವತಿಯಿಂದ ಕಳೆದ ತಿಂಗಳು ನಡೆದ ಕುರ್‌ಆನ್ ಪಾರಾಯಣ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಪ್ರಸಂಶ ಪತ್ರ ವಿತರಣೆ ಕಾರ್ಯಕ್ರಮವು ಬೆಂಗಳೂರು ಬ್ಯಾರಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೆಂಗಳೂರು ಎಂಎಂವೈಸಿ ಗೌರವಾಧ್ಯಕ್ಷರಾದ ಉಮ್ಮರ್ ಹಾಜಿ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಬೆಂಗಳೂರು ಎಂಎಂವೈಸಿ ಇದರ ಸಂಸ್ಥಾಪಕ ಅಧ್ಯಕ್ಷರಾದ ಅಬೂಬಕ್ಕರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂಎಂವೈಸಿ ಸ್ಥಾಪನೆಯ ನಂತರ ಸಂಘಟನೆಯ ನೇತೃತ್ವದಲ್ಲಿ ವಿವಿಧ ಕಡೆ ಪ್ರಳಯ ಸಂಭವಿಸಿದಾಗ ಕಿಟ್ ವಿತರಣೆ, ಬೆಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತುರ್ತು ರಕ್ತದ ಅವಶ್ಯಕತೆ ಬಂದಾಗ ಪೂರೈಕೆ, ರೋಗಿಗಳನ್ನು ತುರ್ತು ಆಸ್ಪತ್ರೆಗೆ ಸಾಗಿಸುವಂತೆ ಸಂಸ್ಥೆಯ ಆ್ಯಂಬ್ಯುಲೆನ್ಸ್ ಗೆ ಕರೆ ಬಂದಾಗ ತಕ್ಷಣ ಸ್ಪಂದಿಸುವ ಹಾಗೂ ಸಂಕಷ್ಟದಲ್ಲಿರುವ ಜನರ ಪರ ಮಿಡಿಯುತ್ತಿದೆ. ಇದಕ್ಕಾಗಿ ಶ್ರಮಿಸುತ್ತಲಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ” ಎಂದು ಹೇಳಿದರು.
ವೇದಿಕೆಯಲ್ಲಿ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಬೆಂಗಳೂರು ಪ್ರಮುಖರಾದ ಮಕ್ಸೂದ್ ಅಹ್ಮದ್ , ಪ್ರಾಸ್ತಾವಿಕವಾಗಿ ಮಾತನಾಡಿ ಎಂಎಂವೈಸಿ ನಮ್ಮ ಅಭಿಪ್ರಾಯಗಳನ್ನು ಆಲೋಚನೆಗಳನ್ನು ಮೀರಿಸುವ ಕೆಲಸ ಕಾರ್ಯಗಳನ್ನು ಯಾವುದೇ ಪ್ರಚಾರ ಇಲ್ಲದೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ಮುಸ್ಲಿಮರ ತಂಡದ ಈ ಕಾರ್ಯ ನಮಗೆಲ್ಲ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

ನಿವೃತ್ತ ಅಧಿಕಾರಿ ಇಬ್ರಾಹಿಂ ಗೂನಡ್ಕ ಸುಳ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರೀಸ್ ವೇಲ್ಫೇರ್ ಅಸೋಸಿಯೇಷನ್‌ನ ಪ್ರಮುಖರಾದ ಚೆಯ್ಯಬ್ಬ ಬ್ಯಾರಿ, ಯೂಸುಫ್ ಪೆರ್ಪೊಡಿ, ಅಶ್ರಫ್ ಬ್ಯಾರಿ, ಎಂಎಂವೈಸಿ ಗೌರವ ಸಲಹೆಗಾರ ಅಬ್ದುಲ್ ರಝಾಕ್, ಉಪಾಧ್ಯಕ್ಷರಾದ ವಾಹಿದ್ ಖಾನ್, ಪ್ರಮುಖರಾದ ರಹ್ಮಾನ್ ಎಕ್ಸ್ಪರ್ಟ್, ಬಶೀರ್ ಪುಣಚ , ಸಮದ್ ಸೊಂಪಾಡಿ, ನಿರ್ದೇಶಕರಾದ ಉಮ್ಮರ್ ಕುಂಞಿ ಸಾಲೆತ್ತೂರು, ಹಬೀಬ್ ನಾಳ, ಅಬ್ಬಾಸ್ ಸಿಪಿ, ರಫೀಕ್ ಟಿಓಟಿ ಮೆಜೆಸ್ಟಿಕ್, ಲತೀಫ್ ಬಿ ಕೆ, ಅಶ್ರಫ್ ತಾಹ ಇರ್ಫಾನ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪ್ರಶಸ್ತಿ ವಿತರಿಸಿದರು.
ಬಾಲಕರು(ಸೀನಿಯರ್ ವಿಭಾಗ)ದಲ್ಲಿ ಎಚ್‌ಎಸ್‌ಆರ್ ಲೇಔಟ್‌ನ ನೂರುಲ್ ಹಿದಾಯ ಸುನ್ನಿ ಮದ್ರಸದ ಮೊಹಮ್ಮದ್ ಸುಹೈಲ್, ಬಾಲಕಿಯರ(ಸೀನಿಯರ್) ವಿಭಾಗದಲ್ಲಿ ಮುನವ್ವಿರುಲ್ ಇಸ್ಲಾಂ ಮದ್ರಸಾ ಅರೆಕೆರೆಯ ವಿದ್ಯಾರ್ಥಿನಿ ಫಾತಿಮಾ ಹನ್ನತ್, ಬೆಂಗಳೂರು, ಬಾಲಕರು(ಜೂನಿಯರ್ ವಿಭಾಗ)ದಲ್ಲಿ ಅಲ್ ಮದರಸಾತುಲ್ ಬದ್ರಿಯಾ ಬೆಂಗಳೂರು ವಿದ್ಯಾರ್ಥಿ ಝೈನುಲ್ ಆಬಿದೀನ್, ಬಾಲಕಿಯರ(ಜೂನಿಯರ್) ವಿಭಾಗದಲ್ಲಿ ದಾವತುಲ್ ಇಸ್ಲಾಂ ಮದರಸಾ ವೀವೆಕ್ ನಗರದ ವಿದ್ಯಾರ್ಥಿನಿ ಮರಿಯಮ್ ಎಸಿ ಸಹಿತ ಹಲವರು ವಿವಿಧ ವಿಭಾಗಗಳಲ್ಲಿ ದ್ವಿತೀಯ, ತೃತೀಯ ಪ್ರಶಸ್ತಿ ಸ್ವೀಕರಿಸಿದರು.
ಇದನ್ನು ಓದಿದ್ದೀರಾ? ಸೌಹಾರ್ದ ನಿಲಯ : ಅನಾರೋಗ್ಯ ಪೀಡಿತರಾಗಿದ್ದ ‘ಸುಶೀಲಾ’ಗೆ ಮನೆ ನಿರ್ಮಿಸಿದ ‘ಆಯಿಷಾ’
ಉಸ್ತಾದ್ ಹಾಫಿಝ್ ರಶೀದ್ ಅವರು ಕಿರಾಅತ್ ಪಠಿಸಿದರು. ಎಂಎಂವೈಸಿ ಪ್ರಮುಖರಾದ ಜುನೈದ್ ಪಿಕೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಲತೀಫ್ ಧನ್ಯವಾದಗಳನ್ನು ಅರ್ಪಿಸಿದರು.
