ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ವಿರುದ್ಧ ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ರೈತರು ಬೆಂಗಳೂರು ನಗರದ ಡಿಸಿಪಿ ಕಚೇರಿಯಲ್ಲಿ ಹಾಜರಾದರು.
ಆಗಸ್ಟ್ 27ರ ಬೆಳಿಗ್ಗೆ ಕಾಮ್ರೇಡ್ ಶರತ್ ಅವರ ನೇತೃತ್ವದಲ್ಲಿ ಬೆಂಗಳೂರು ನಗರದ ಡಿಸಿಪಿ ಕಚೇರಿಗೆ ತೆರಳಿದ ರೈತರು, “ರೈತರನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಅಧಿಕಾರಿಗಳಿಗು ಮತ್ತು ರೈತರು ನಂಬಿದ ರಾಜಕಾರಣಿಗಳಿಗೂ ರೈತ ಕೋಟಿಯ ಅಭಿನಂದನೆಗಳು” ಎಂದು ರೈತರು ಅತ್ಯಂತ ವಿಷಾದಪೂರ್ವಕ ವ್ಯಂಗ್ಯವಾಡಿದ್ದಾರೆ.
“ಬೆಂಗಳೂರು ನಗರದಲ್ಲಿ ಈಗಾಗಲೇ ಜನಸಾಮಾನ್ಯರು ತಮಗೆ ಅನ್ಯಾಯ ಎಸಗಿದ ಕಚೇರಿಗಳ ಅಥವಾ ಮಂತ್ರಿಗಳ ಮುಂದೆ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಅವಕಾಶವನ್ನು ನಿರಾಕರಿಸಲಾಗಿದೆ. ಏನು ಪ್ರತಿಭಟಿಸುವುದಿದ್ದರೂ ಯಾರೂ ಕೇಳಿಸಿಕೊಳ್ಳದ ಫ್ರೀಡಂ ಪಾರ್ಕ್‌ನಲ್ಲೇ ಮಾಡಬೇಕು ಎಂಬುದು ಬೆಂಗಳೂರು ಪೊಲೀಸ್ ರಾಜ್ಯ ಮತ್ತು ಅದಕ್ಕೆ ಹೂಂಗುಟ್ಟುವ ಕರ್ನಾಟಕದ ಪ್ರಜಾರಾಜ್ಯದ ತುಘಲಕ್ ಆದೇಶವಾಗಿದೆ. ಇದೇ ನಿರಾಕರಣೆಯನ್ನು ಬೆಂಗಳೂರಿನಿಂದ 35 ಕಿಮೀ ದೂರದ ದೇವನಹಳ್ಳಿಗೂ ವಿಸ್ತರಿಸಲಾಗಿದೆ”.” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಬೇಡ್ಕರ್ ಭವನ ನಿರ್ಮಾಣದ ನಿವೇಶನ ಅತಿಕ್ರಮಣ; ಆರೋಪ
“ದೇವನಹಳ್ಳಿಯ ರೈತರು ತಮ್ಮ ಮೇಲಿನ ಆನ್ಯಾಯಗಳ ವಿರುದ್ಧ ಹೋರಾಡಬೇಕಿದ್ದಲ್ಲಿ 35 ಕಿಮೀ ದೂರವಿರುವ ಬೆಂಗಳೂರಿಗೆ ಬಂದು ಫ್ರೀಡಂ ಪಾರ್ಕಿನಲ್ಲೇ ಬಸವಳಿಯಬೇಕಾಗಿದೆ. ರೈತರ ಏಕೈಕ ಜೀವನಾಧಾರವಾಗಿರುವ ಅವರ ಫಲವ್ತಾದ ಭೂಮಿಯನ್ನು ಭೂಗಳ್ಳರ ಲಾಭಿಗೋಸ್ಕರ ಸರ್ಕಾರ ಕಸಿದುಕೊಳ್ಳುತ್ತಿರುವುದೇ ಅಲ್ಲದೆ, ಅದನ್ನು ವಿರೋಧಿಸುತ್ತಿರುವುದಕ್ಕೆ ರೈತರ ಮೇಲೆಯೇ ಮೊಕದ್ದಮೆಯ ಮೇಲೆ ಮೊಕದ್ದಮೆ ದಾಖಲಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ” ಎಂದು ರೈತರು ಪ್ರತಿಭಟಿಸಿದರು.
