ಕುಡಿಯುವ ನೀರಿನ ಫ್ಲಾಸ್ಕ್‌ಗೆ ಲೇಪನ ಮಾಡಿಕೊಂಡು ತಂದಿದ್ದ ಚಿನ್ನದ ಪುಡಿಯನ್ನು ಬಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸೌದಿ ಅರೇಬಿಯಾದ ಜೆಡ್ಡಾದಿಂದ ಜನವರಿ 28ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರು ಫ್ಲಾಸ್ಕ್ ಒಳಭಾಗದ ಮೇಲ್ಮೈಗೆ ಇತರ ವಸ್ತುಗಳ ಮಿಶ್ರಣದೊಂದಿಗೆ ಚಿನ್ನದ ಪುಡಿಯನ್ನು ಬೆರಸಿ ಲೇಪನ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ ಸಂವಹನ ಕುರಿತ ವಿಚಾರ ಸಂಕಿರಣ
₹7.52 ಲಕ್ಷ ಮೌಲ್ಯದ 122 ಗ್ರಾಂ ಚಿನ್ನದ ಪುಡಿಯನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡಿದ್ದಾರೆ.