ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ) ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಹುತೇಕ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂತೆಯೇ ತಮ್ಮವರೆಲ್ಲ ಒಟ್ಟಾಗಿ ಯಾತ್ರಾ ಸ್ಥಳಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ಕಾಯ್ದಿರಿಸಬಹುದಾ? ಎಂದು ಮಹಿಳೆಯೊಬ್ಬರು ವಿಚಾರಿಸಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿಯ ನಿವಾಸಿ ಸುನಂದಾ ಎಂಬುವವರು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ವಿಚಾರಣಾ ಕೌಂಟರ್‌ಗೆ ಬಂದು ಒಂದು ಬಸ್‌ನ 48 ಸೀಟುಗಳನ್ನು ಮುಂಗಡ ಕಾಯ್ದಿರುವ ಕುರಿತು ವಿಚಾರಿಸಿದ್ದಾರೆ. ಯಾವ್ಯಾವ ಮಾರ್ಗಗಳಿಗೆ ಎಷ್ಟು ಗಂಟೆಗೆ ಬಸ್‌ಗಳ ವ್ಯವಸ್ಥೆಯಿದೆ ಎಂದು ಪೇಪರ್‌ನಲ್ಲಿ ಬರೆದುಕೊಂಡು ಹೋಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ; ಕೇಂದ್ರ ಸಚಿವರಿಗೆ ಪತ್ರ
ನಾಲ್ಕರಿಂದ ಐದು ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ತೆರಳಲು ಸುಮಾರು 20 ಜನರ ತಂಡವನ್ನು ಮಾಡಿಕೊಂಡಿದ್ದಾರೆ. ಮನೆಯ ಮಹಿಳಾ ಕುಟುಂಬಸ್ಥರು ಹಾಗೂ ಮಹಿಳಾ ಸಂಘ ಸಂಸ್ಥೆಯವರು ಸೇರಿ ಇನ್ನೂ 20 ಜನರನ್ನು ಒಗ್ಗೂಡಿಸಿ ಒಟ್ಟು 48 ಜನರಿಗೆ ಸೀಟುಗಳನ್ನು ಕಾಯ್ದಿರಿಸಲು ಸಾಧ್ಯವಾ? ಎಂದು ವಿಚಾರಿಸಲು ಬಂದಿದ್ದಾರೆ.