ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‌ಐಓ)ದ ರಾಜ್ಯ ಕಚೇರಿ ‘ವಿದ್ಯಾರ್ಥಿ ಭವನ’ವನ್ನು ಸಂಘಟನೆಯ ಪ್ರಥಮ ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದ ಇಕ್ಬಾಲ್ ಮುಲ್ಲಾ ಅವರು ಇಂದು(ಗುರುವಾರ) ಬೆಂಗಳೂರಿನಲ್ಲಿ ಉದ್ಘಾಟಿಸಿದರು.
ಸಂಘಟನೆಯ ಸಂಸ್ಥಾಪನಾ ದಿನ(ಅ.19)ದ ಅಂಗವಾಗಿ ಆಯೋಜಿಸಿದ್ದ ಧ್ವಜಾರೋಹಣ ಸಮಾರಂಭದ ಬಳಿಕ ಬೆಂಗಳೂರಿನ ಜಯನಗರದಲ್ಲಿ ನಿರ್ಮಿಸಲಾಗಿರುವ ನೂತನ ಕಚೇರಿಯ ಉದ್ಘಾಟನೆ ನೆರವೇರಿಸಲಾಯಿತು.
ಧ್ವಜಾರೋಹಣವನ್ನು ಎಸ್‌ಐಒ ರಾಷ್ಟ್ರೀಯ ಅಧ್ಯಕ್ಷ ರಮೀಸ್ ಇ ಕೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಉಪಾಧ್ಯಕ್ಷರಾದ ಎಸ್ ಅಮೀನುಲ್ ಹಸನ್, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ಮೌಲ್ವಿ ಫಹಿಮುದ್ದೀನ್, ಎಸ್‌ಐಒ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಝೀಶನ್ ಅಖಿಲ್ ಸಿದ್ದೀಕಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.